ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ : ಸಂಸದ ಡಿವಿ ಸದಾನಂದಗೌಡ - ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ

ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ ಎಂದು ಹೇಳುವ ಮೂಲಕ ಸಂಸದ ಡಿವಿ ಸದಾನಂದಗೌಡ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

outraged against the Congress government  Sadananda Gowda was outraged against the Congress  MP DV Sadananda Gowda  ಡಿಸಿಎಂ ಡಿಕೆ ಶಿವಕುಮಾರ್  ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ  ಸಂಸದ ಡಿವಿ ಸದಾನಂದಗೌಡ
ಸಂಸದ ಡಿವಿ ಸದಾನಂದಗೌಡ ಹೇಳಿಕೆ

By

Published : Aug 19, 2023, 1:58 PM IST

ಸಂಸದ ಡಿವಿ ಸದಾನಂದಗೌಡ ಹೇಳಿಕೆ

ಬೆಂಗಳೂರು : ಆಪರೇಷನ್ ಹಸ್ತ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ ಸಂಸದ ಡಿವಿ ಸದಾನಂದಗೌಡ ಅವರು, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ ಎಂದು ವಾಗ್ದಾಳಿ ನಡೆಸಿದರು. ಮಲ್ಲೇಶ್ವರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮ್ಮಲ್ಲಿರುವ ಗೊಂದಲ‌ ಮುಚ್ಚಿಕೊಳ್ಳಲು ಹಾರಿಕೆ ಸುದ್ದಿ ಹರಡ್ತಿದಾರೆ. ಮೂರೇ ತಿಂಗಳಲ್ಲಿ ಕಾಂಗ್ರೆಸ್​ನವರ ಕಪಟ ನಾಟಕ ಜನರಿಗೆ ಗೊತ್ತಾಗಿದೆ. ಅವರು ಭರವಸೆ ಈಡೇರಿಸಿಲ್ಲ. ಅವರ ಶಾಸಕರನ್ನು ಸಮಾಧಾನ ಮಾಡಲು ಆಗಿಲ್ಲ ಎಂದರು.

ನಮ್ಮವರು ಯಾರೂ ಕಾಂಗ್ರೆಸ್​ಗೆ ಹೋಗಲ್ಲ. ಸಿಎಂ, ಡಿಸಿಎಂ ತನ್ನ ಕ್ಷೇತ್ರಕ್ಕೆ ಬಂದಾಗ ಶಾಸಕರು ಹೋದರೆ ತಪ್ಪಾ?. ಏನು ನಾವು ತಂಬೂರಿ ಹಿಡಿದುಕೊಂಡವರ ಹಿಂದೆ ಹೋಗುವ ಇಲಿಗಳು ಅಂತಾ ಕಾಂಗ್ರೆಸ್​ನವರು ತಿಳಿದಿದ್ದಾರಾ?. ಭೈರತಿ ಬಸವರಾಜ, ಎಸ್​ಟಿ ಸೋಮಶೇಖರ್, ಗೋಪಾಲಯ್ಯ ಅವರ ಜೊತೆ ಮಾತನಾಡಿದ್ದೇನೆ. ಕಾಂಗ್ರೆಸ್​ಗೆ ಹೋಗುವ ಬದಲು ನೇಣು ಹಾಕಿಕೊಂಡು ಸತ್ತು ಹೋಗುವುದು ಒಳ್ಳೆಯದು ಎನ್ನುವ ರೀತಿಯಲ್ಲಿ ಗೋಪಾಲಯ್ಯ ಹೇಳಿದ್ದಾರೆ ಎಂದರು. ಇನ್ನು ಎಸ್​ಟಿ ಸೋಮಶೇಖರ್ ಕೂಡಾ ಕಾಂಗ್ರೆಸ್ ಸೇರ್ತೀನಿ ಅಂತ ಹೇಳಿಲ್ಲ ಅಂದಿದ್ದಾರೆ. ಸೋಮಶೇಖರ್ ಜೊತೆ ಮೊನ್ನೆ ಮಾತನಾಡಿದ್ದೇನೆ. ಅವರ ಕ್ಷೇತ್ರದಲ್ಲಿ ಕೆಲ ಆಂತರಿಕ ಸಮಸ್ಯೆ ಇದೆ. ಅದನ್ನು ಬಗೆಹರಿಸುವ ಕೆಲಸ ಮಾಡ್ತೇವೆ. ಸೋಮಶೇಖರ್ ಕಾಂಗ್ರೆಸ್​ಗೆ ಹೋಗಲ್ಲ ಅನ್ನೋದು ನಮ್ಮ ನಂಬಿಕೆ ಎಂದರು.

ಇನ್ನು ಆ ಪ್ರಕ್ರಿಯೆ ಶುರುವಾಗಿಲ್ಲ:ಮುಂದಿನ ಲೋಕಸಭೆ ಚುನಾವಣೆ ಬಗ್ಗೆ ಯಾರಿಗೆ ಟಿಕೆಟ್ ಅಂತ ಇನ್ನೂ ನಮ್ಮಲ್ಲಿ ಪ್ರಕ್ರಿಯೆ ಶುರುವಾಗಿಲ್ಲ. ಆದರೆ ಇದರ ಬಗ್ಗೆ ಆಗಲೇ ಮಾಧ್ಯಮಗಳಲ್ಲಿ ಏನೇನೋ ಬರ್ತಿದೆ. ನಮ್ಮ ವರಿಷ್ಠರು ಪಂಚ ರಾಜ್ಯಗಳ‌ ಚುನಾವಣೆ ತಯಾರಿಯಲ್ಲಿದ್ದಾರೆ. ಇದಾದ ನಂತರ ಲೋಕಸಭೆ ಚುನಾವಣೆ ಕಡೆ ಗಮನ ಕೊಡ್ತಾರೆ ಎಂದು ಹೇಳಿದರು. ಸೋಷಿಯಲ್ ಮೀಡಿಯಾದಲ್ಲಿ ಏನೋ ಬರೆದುಕೊಂಡಿದ್ದಾರೆ ಅಂತ ನಮ್ಮವರಿಗೆ ಬೆದರಿಕೆ ಹಾಕ್ತಿದ್ದಾರೆ. ಅರೆಸ್ಟ್ ಮಾಡಿಸ್ತಿದಾರೆ ಎಂದು ದೂರಿದರು. ಕರ್ನಾಟಕದಲ್ಲಿ ಬಿಜೆಪಿ ಸೋತಿದೆ ಅಂತಾ ಮಲಗಿಬಿಡ್ತಾರೆ ಎಂದು ಅಂದುಕೊಂಡಿದ್ದರು. ಇನ್ನು ನಮ್ಮದೇ ರಾಜ್ಯ ಎಂಬ ಕಾಂಗ್ರೆಸ್​ನವರ ಅಹಂಕಾರಕ್ಕೆ ತಕ್ಕ ಪ್ರತ್ಯುತ್ತರ ನೀಡಲು ತೀರ್ಮಾನಿಸಿದ್ದೇವೆ. ಕಾರ್ಯಕರ್ತರಿಗೆ ಆತ್ಮಸ್ಥೈರ್ಯದ ಕೊರತೆ ಎಲ್ಲೂ ಕಾಣುತ್ತಿಲ್ಲ ಎಂದು ಹೇಳಿದರು.

ಅದು ಹಾರಿಕೆ ಸುದ್ದಿಯಷ್ಟೇ:ಮಾಜಿ ಸಚಿವ ಎಸ್​ಟಿ ಸೋಮಶೇಖರ್ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹಾರಿಕೆಯ ಸುದ್ದಿ ಹರಡುತ್ತಿರುವುದು ಕಾಂಗ್ರೆಸ್​ನವರದ್ದು. ದೊಡ್ಡ ರೀತಿಯಲ್ಲಿ ನಮ್ಮಲ್ಲೇ ವಿಭಜನೆ ಆಗಬಹುದು ಎಂಬ ಭಯದಿಂದ ಈ ರೀತಿ ಮಾಡುತ್ತಿದ್ದಾರೆ. ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಗಾಂಧೀಜಿ ಹೇಳುತ್ತಿದ್ದರು. ಕಾಂಗ್ರೆಸ್​ನವರು ಬ್ರಿಟೀಷರ ಕಾಲದಲ್ಲಿ ಅದೇ ಮಾಡುತ್ತಿದ್ದರು. ಈಗ ಮತ್ತೆ ಅದೇ ಕೆಲಸ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ಮಲ್ಲಿ ಅಲ್ಲಲ್ಲಿ ಸಣ್ಣಪುಟ್ಟ ಗೊಂದಲಗಳು ಇರಬಹುದು. ನಮ್ಮ ಶಾಸಕರು ಪಕ್ಷದ ಜೊತೆ ಇರುತ್ತಾರೆ. ಚುನಾವಣಾ ಸಂದರ್ಭದಲ್ಲಿ ಇದ್ದ ಗೊಂದಲ ಪರಿಹಾರ ಮಾಡಿದ ಕಾರಣ ಅವರು ಗೆದ್ದಿದ್ದಾರೆ. ಅವರೆಲ್ಲಾ ಜವಾಬ್ದಾರಿಯ ಸ್ಥಾನದಲ್ಲಿ ಇದ್ದವರು. ಯಾರನ್ನೂ ಗೂಡಿನಲ್ಲಿ ಕಟ್ಟಿ ಹಾಕುವ ಪ್ರಯತ್ನ ಬಿಜೆಪಿ ಮಾಡಲ್ಲ. ಸರಿ ಮಾಡುವ ಜವಾಬ್ದಾರಿ ನಮ್ಮದು ಇದೆ, ಮಾಡುತ್ತೇವೆ ಎಂದರು.

ಓದಿ:ರಾಜ್ಯಸಭೆಯ ಅತ್ಯಂತ ಶ್ರೀಮಂತ ಕುಬೇರರಿವರು: 225 ಸದಸ್ಯರ ಪೈಕಿ ಇವರಿಬ್ಬರಲ್ಲೇ ಇದೆ ಶೇ.43ರಷ್ಟು ಆಸ್ತಿ..!

ABOUT THE AUTHOR

...view details