ಬೆಂಗಳೂರು: ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಕೊರೊನಾ ತಪಾಸಣೆಗೆ ಒಳಗಾಗಿದ್ದಾರೆ.
ಆರೋಗ್ಯದಲ್ಲಿ ಏರುಪೇರು: ಕೊರೊನಾ ತಪಾಸಣೆಗೆ ಒಳಗಾದ ಡಿ.ಕೆ.ಸುರೇಶ್ - ಸಂಸದ ಡಿ.ಕೆ. ಸುರೇಶ್
ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದ ಹಿನ್ನೆಲೆ ಸಂಸದ ಡಿ.ಕೆ.ಸುರೇಶ್ ಕೊರೊನಾ ತಪಾಸಣೆಗೆ ಒಳಗಾಗಿದ್ದಾರೆ.
ನಿನ್ನೆ ಸಂಜೆಯಿಂದ ಆರೋಗ್ಯದಲ್ಲಿ ಕೊಂಚ ಏರುಪೇರು ಕಂಡು ಬಂದಿದೆ. ಜ್ವರ ಕಂಡು ಬಂದಿರುವ ಹಿನ್ನೆಲೆ ಸ್ವ್ಯಾಬ್ ತಪಾಸಣೆಗೆ ಆಸ್ಪತ್ರೆಗೆ ತೆರಳಿದ್ದಾರೆ. ಸದ್ಯ ಆರೋಗ್ಯ ಲಕ್ಷಣ ಗಮನಿಸಿದಾಗ ಕೊರೊನಾ ಸೂಚನೆ ಕಂಡು ಬಂದಿದೆ. ಕಳೆದ ಒಂದು ವಾರದಿಂದ ಸಾಕಷ್ಟು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಗೂ ಜನರ ನಡುವೆ ಬೆರೆತಿರುವ ಹಿನ್ನೆಲೆ ಅವರ ಆರೋಗ್ಯದಲ್ಲಿ ಅನುಮಾನ ಇದ್ದು, ಕೋವಿಡ್-19ಗೆ ಭೀತಿಯಲ್ಲಿದ್ದಾರೆ.
ಇಂದು ಬೆಳಗ್ಗೆ ತರಾತುರಿಯಲ್ಲಿ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ತಪಾಸಣೆಯ ಅಧಿಕೃತ ವರದಿ ಇದುವರೆಗೂ ಲಭ್ಯವಾಗಿಲ್ಲ. ಅಲ್ಲದೆ ತಮ್ಮ ಆರೋಗ್ಯದ ವಿಚಾರವಾಗಿ ಡಿ.ಕೆ.ಸುರೇಶ್ ಅಥವಾ ಅವರಿಗೆ ಸಂಬಂಧಿಸಿದವರು ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.