ಕರ್ನಾಟಕ

karnataka

ETV Bharat / state

ಸಿಟಿ ಸ್ಕ್ಯಾನ್​ಗೆ ಏಕರೂಪದ ದರ ನಿಗದಿ ಮಾಡಿ: ಆರೋಗ್ಯ ಸಚಿವರಿಗೆ ಸಂಸದ ಪಿ.ಸಿ.ಮೋಹನ್ ಪತ್ರ - ಬೆಂಗಳೂರು

ಕೊರೊನಾ ಪತ್ತೆಗಾಗಿ ಇತ್ತೀಚಿನ ದಿನಗಳಲ್ಲಿ ಸಿಟಿ ಸ್ಕ್ಯಾನ್ ಮಾಡಿಸಬೇಕಿದ್ದು, ಅದಕ್ಕಾಗಿ ಏಕರೂಪದ ದರ ನಿಗದಿಪಡಿಸುವಂತೆ ಸಂಸದ ಪಿ.ಸಿ,ಮೋಹನ್ ಸಚಿವ ಡಾ. ಸುಧಾಕರ್​ಗೆ ಮನವಿ ಮಾಡಿದ್ದಾರೆ.

CP Mohan
ಸಂಸದ ಪಿಸಿ ಮೋಹನ್

By

Published : Apr 30, 2021, 9:21 AM IST

ಬೆಂಗಳೂರು:ರೂಪಾಂತರಿ ಕೊರೊನಾ ಸೋಂಕಿನ ಲಕ್ಷಣವಿದ್ದರೂ ನೆಗೆಟಿವ್ ವರದಿ ಹೊಂದಿದ್ದವರಿಗೆ ಸಿಟಿ ಸ್ಕ್ಯಾನ್ ಮಾಡಿಸಬೇಕಿದ್ದು, ಅದಕ್ಕಾಗಿ ಏಕರೂಪದ ದರ ನಿಗದಿಪಡಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್​ಗೆ ಸಂಸದ ಪಿ.ಸಿ.ಮೋಹನ್ ಪತ್ರ ಬರೆದು ಮನವಿ ಮಾಡಿದ್ದಾರೆ.

ಮಹಾಮಾರಿ ಕೋವಿಡ್ 2ನೇ ಅಲೆಯ ರೂಪಾಂತರಿ ವೈರಸ್​ನಿಂದ ಜನರಲ್ಲಿ ವಿಭಿನ್ನ ರೀತಿಯ ರೋಗ ಲಕ್ಷಣಗಳು ತೋರುತ್ತಿವೆ. ವೈದ್ಯರ ಸಲಹೆಯಂತೆ ರೋಗ ಲಕ್ಷಣಗಳು ಕಂಡುಬಂದ ನಂತರ ಕೋವಿಡ್ ಪರೀಕ್ಷೆ ನಡೆಸಿದಾಗ ಆರ್​ಟಿಪಿಸಿಆರ್​ನಲ್ಲಿ ನೆಗೆಟಿವ್ ವರದಿ ಬರುತ್ತಿದೆ. ಆದರೂ ಉಸಿರಾಟದ ಸಮಸ್ಯೆ ಇದ್ದರೆ ಸಿಟಿ ಸ್ಕ್ಯಾನ್ ಮಾಡಿಸಲು ತಿಳಿಸುತ್ತಿದ್ದಾರೆ. ಸಿಟಿ ಸ್ಕ್ಯಾನ್ ಮಾಡಿಸಲು ತೆರಳಿದರೆ ಖಾಸಗಿ ಸಿಟಿ ಸ್ಕ್ಯಾನ್‌ ಸೆಂಟರ್‌ಗಳಲ್ಲಿ ಮನಸೋ ಇಚ್ಚೆ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ನನ್ನ ಗಮನಕ್ಕೆ ಬಂದಿವೆ.

ಆದ್ದರಿಂದ ಅಗತ್ಯ ತುರ್ತು ಎಂದು ಪರಿಗಣಿಸಿ ಎಲ್ಲಾ ಸಿಟಿ ಸ್ಕ್ಯಾನ್ ಸೆಂಟರ್​ಗಳಲ್ಲಿ ಏಕರೂಪದ ದರವನ್ನು ನಿಗದಿಪಡಿಸುವಂತೆ ಡಾ. ಸುಧಾಕರ್​ಗೆ ಪತ್ರದ ಮೂಲಕ ಸಂಸದ ಪಿ.ಸಿ.ಮೋಹನ್ ಕೋರಿದ್ದಾರೆ.

ABOUT THE AUTHOR

...view details