ಕರ್ನಾಟಕ

karnataka

ETV Bharat / state

ಮೋಟಾರು ವಾಹನ ಕಾಯ್ದೆ ತಿದ್ದುಪಡಿ‌: ಒಂದೇ ದಿನದಲ್ಲಿ ಸಂಗ್ರಹವಾಗಿದ್ದ ದಂಡದ ಹಣ ಎಷ್ಟು ಗೊತ್ತೇ? - ಸಂಗ್ರಹವಾಗಿದ್ದ ದಂಡದ ಹಣ

ಹೊಸ ಮೋಟಾರು ವಾಹನ ಕಾಯ್ದೆ ಈಗಾಗಲೇ ಚಾಲ್ತಿಯಲ್ಲಿದ್ದು, ವಾಹನ ಸವಾರರು ಭಯದಿಂದಲೇ ಚಲಿಸುವಂತಾಗಿದೆ. ಒಟ್ಟಾರೆಯಾಗಿ ಹೇಗಾದರೂ ಸರಿಯೇ ಜನರು ಕಾನೂನು ಪಾಲನೆ ಮಾಡಿಲಿ ಎಂಬ ದೃಷ್ಠಿಯಿಂದ ಸರ್ಕಾರ ದಂಡ ವಿಧಿಸುತ್ತಿದ್ದರೂ ಜನರಿಗೆ ಮಾತ್ರ ಇದು ಹೊರೆಯಾಗಿಯೇ ಭಾಸವಾಗುತ್ತಿದೆ.

ಒಂದೇ ದಿನದಲ್ಲಿ ಸಂಗ್ರಹವಾಗಿದ್ದ ದಂಡದ ಹಣ ಎಷ್ಟು

By

Published : Sep 11, 2019, 10:07 PM IST

ಬೆಂಗಳೂರು:ಮೋಟಾರು ವಾಹನ ಕಾಯ್ದೆ ತಿದ್ದುಪಡಿ‌-2019 ಜಾರಿಗೆ ಬಂದಿದ್ದು, ಸಂಚಾರ ನಿಯಮ ಉಲ್ಲಂಘನೆ ಮಾಡಿದ ವಾಹನ ಸವಾರರಿಂದ ನಿನ್ನೆ ಬೆಳಗ್ಗೆ 10ಗಂಟೆಯಿಂದ ಇಂದು‌ ಬೆಳಗ್ಗೆ 10ಗಂಟೆಯವರೆಗೆ ಒಂದೇ ದಿನದಲ್ಲಿ ಬರೋಬ್ಬರಿ 10,923 ಪ್ರಕರಣ ದಾಖಲಿಸಿ 42 ಲಕ್ಷದ 54 ಸಾವಿರದ 700 ದಂಡ ಸಂಗ್ರಹವಾಗಿದೆ. ಅದರ ಕಂಪ್ಲೀಟ್​​ ಡೀಟೇಲ್ಸ್​ ಇಲ್ಲಿದೆ ನೋಡಿ.

  • ಶಾಲಾ ವಾಹನದಲ್ಲಿ ಅಧಿಕ ಮಕ್ಕಳ ಪ್ರಯಾಣ- ಒಂದು ಪ್ರಕರಣ- 100 ರೂಪಾಯಿ ದಂಡ
    ದಂಡ ಮೊತ್ತದ ವಿವರ
  • ಜಿಗ್ ಜಾಗ್ ಡ್ರೈವಿಂಗ್ ಒಂದು ಪ್ರಕರಣ-500 ರೂಪಾಯಿ ದಂಡ
  • ವಾಹನದ ಟಾಪ್ ಮೇಲೆ ಪ್ಯಾಸೆಂಜರ್ ಪ್ರಯಾಣ ಒಂದು ಪ್ರಕರಣ-500 ರೂಪಾಯಿ ದಂಡ
  • ನಿಷೇಧಿತ ಸ್ಥಳಗಳಲ್ಲಿ ಕರ್ಕಶ ಶಬ್ದ ಹಾರ್ನ್ ಬಳಕೆ-ಒಂದು ಪ್ರಕರಣ -1000 ರೂಪಾಯಿ ದಂಡ
  • ಜೀಬ್ರಾ ಕ್ರಾಸ್ ಮೇಲೆ ನಿಲುಗಡೆ-ಒಂದು ಪ್ರಕರಣ -1000 ರೂಪಾಯಿ ದಂಡ
  • ಅಪಾಯಕಾರಿ ಆಟೋ ಚಾಲನೆ-ಒಂದು ಪ್ರಕರಣ-1000 ರೂಪಾಯಿ ದಂಡ
  • ಹೆಚ್ಚುವರಿ ಹೈಬೀಮ್ ಲೈಟ್ ಬಳಕೆ-ಎರಡು ಪ್ರಕರಣ-1000 ರೂಪಾಯಿ ದಂಡ
  • ಹೆಚ್ಚುವರಿ ಪ್ರಯಾಣಿಕರು ಹೊತ್ತೊಯ್ಯುತ್ತಿರುವ ವಾಹನ-11ಪ್ರಕರಣ-1100 ರೂಪಾಯಿ ದಂಡ
  • ನಿಷೇಧಿತ ರಸ್ತೆಗಳಲ್ಲಿ ವಾಹನ ಸಂಚಾರ-3 ಪ್ರಕರಣ-1100 ರೂಪಾಯಿ ದಂಡ
  • ಹಳದಿ ಗೆರೆ ಮೇಲೆ ವಾಹನ ನಿಲುಗಡೆ 8 ಪ್ರಕರಣ-1200 ರೂಪಾಯಿ ದಂಡ
  • ನಿಲುಗಡೆಯಾಗಿರುವ ವಾಹನದ ಮುಂದೆ ಮತ್ತೊಂದು ವಾಹನ ನಿಲುಗಡೆ-2 ಪ್ರಕರಣ-2000 ರೂಪಾಯಿ ದಂಡ
  • ಆಟೋ ಕ್ಯಾಬ್ ಸವಾರರಿಂದ ಅಧಿಕ ದರ ವಸೂಲಿ-29ಪ್ರಕರಣ-2900 ರೂಪಾಯಿ ದಂಡ
  • ಜನ ದಾಟುವ ಜಾಗದಲ್ಲಿ ವಾಹನ ನಿಲುಗಡೆ -3 ಪ್ರಕರಣ-3000 ರೂಪಾಯಿ ದಂಡ
  • ವಿಭಜಕ ದಾಟಿ ರಸ್ತೆಯ ಮತ್ತೊಂದು ಭಾಗದಲ್ಲಿ ಚಾಲನೆ 6 ಪ್ರಕರಣ-3000 ರೂಪಾಯಿ ದಂಡ
  • ಡಬಲ್ ಪಾರ್ಕಿಂಗ್-4 ಪ್ರಕರಣ-4ಸಾವಿರ ದಂಡ
  • ಬಾಡಿಗೆ ಬರಲು ನಿರಾಕರಣೆ-43 ಪ್ರಕರಣ 4300 ರೂಪಾಯಿ ದಂಡ
  • ಸೈಲೆನ್ಸರ್ ಡಿಫೆಕ್ಟ್ ಬಳಕೆ-11ಪ್ರಕರಣ- 5500 ರೂಪಾಯಿ ದಂಡ
  • ಕಪ್ಪು ಹೊಗೆ ಉಗುಳುವಿಕೆ-69ಪ್ರಕರಣ- 6900 ರೂಪಾಯಿ ದಂಡ
  • ಕಾರಿನಲ್ಲಿ ಅಧಿಕ ಜನರ‌ ಪ್ರಯಾಣ-29 ಪ್ರಕರಣ-7400 ರೂಪಾಯಿ ದಂಡ
  • ಫುಟ್ ಪಾತ್ ಪಾರ್ಕಿಂಗ್-8 ಪ್ರಕರಣ-8000 ರೂಪಾಯಿ ದಂಡ
  • ನಾನ್ ಟ್ರಾನ್ಸ್ ಪೋರ್ಟ್ ವಾಹನ‌ ಚಾಲನೆ-9 ಪ್ರಕರಣ-9000 ರೂಪಾಯಿ ದಂಡ
  • ಅಪ್ರಾಪ್ತರು ವಾಹನ ಚಲಾಯಿಸುವುದು-2 ಪ್ರಕರಣ-10000ರೂಪಾಯಿ ದಂಡ
  • ಶಬ್ಧ ಮಾಲಿನ್ಯ-10 ಪ್ರಕರಣ-10000 ರೂಪಾಯಿ ದಂಡ
  • ದಾಖಲೆ ಒದಗಿಸಿದಿರುವುದು-124 ಪ್ರಕರಣ-12400 ರೂಪಾಯಿ ದಂಡ
  • ಫುಟ್ ಪಾತ್ ರೈಡಿಂಗ್-39 ಪ್ರಕರಣ-13300 ರೂಪಾಯಿ ದಂಡ
  • ಟ್ರಾನ್ಸ್ ಪೋರ್ಟ್ ಡೇಂಜರಸ್​ ಡ್ರೈವಿಂಗ್-16 ಪ್ರಕರಣ-15000 ರೂಪಾಯಿ ದಂಡ
    ದಂಡ ಮೊತ್ತದ ವಿವರ
  • ಪೊಲೀಸರ ಜೊತೆ ಮಿಸ್ ಬಿಹೇವ್-8 ಪ್ರಕರಣ-16000 ರೂಪಾಯಿ ದಂಡ
  • ಅನಗತ್ಯ ಯೂ ಟರ್ನ್-56 ಪ್ರಕರಣ-16000 ರೂಪಾಯಿ ದಂಡ
  • ವೈಟ್ ಲೈನ್ ಮೇಲೆ ಗಾಡಿ ನಿಲ್ಲಿಸಿದ್ದು-33 ಪ್ರಕರಣ-16500 ರೂಪಾಯಿ ದಂಡ
  • ನಂಬರ್ ಪ್ಲೇಟ್ ಇಲ್ಲದೆ ವಾಹನ ಚಾಲನೆ-43 ಪ್ರಕರಣ-21500 ರೂಪಾಯಿ ದಂಡ
  • ತ್ರಿಬಲ್ ರೈಡಿಂಗ್-115 ಪ್ರಕರಣ-26800 ರೂಪಾಯಿ ದಂಡ
  • ಟ್ರಾಫಿಕ್ ರೂಲ್ಸ್ ಫಾಲೋ ಮಾಡದೆ ಇರುವುದು- 60 ಪ್ರಕರಣ- 29200 ರೂಪಾಯಿ ದಂಡ
  • ಟೂ ವ್ಹೀಲರ್ ಡೇಂಜರಸ್ ರೈಡಿಂಗ್-43 ಪ್ರಕರಣ- 36700 ರೂಪಾಯಿ ದಂಡ
  • ಇನ್ಸೂರೆನ್ಸ್‌ಇಲ್ಲದೆ ವಾಹನ‌ ಚಲಾಯಿಸಿದ್ದು-23 ಪ್ರಕರಣ-44000 ರೂಪಾಯಿ ದಂಡ
  • ಬ್ಲಾಕ್ ಫಿಲ್ಮ್ ಯೂಸ್ ಮಾಡಿದ್ದಿದ್ದು-105 ಪ್ರಕರಣ-47300 ರೂಪಾಯಿ ದಂಡ
  • ನೋ‌ ಪಾರ್ಕಿಂಗ್-49 ಪ್ರಕರಣ-49000 ರೂಪಾಯಿ ದಂಡ
  • ಡಿಎಲ್ ಇಲ್ಲದೆ ವಾಹನ‌ ಚಲಾಯಿಸಿದ್ದು-21 ಪ್ರಕರಣ-96000 ರೂಪಾಯಿ ದಂಡ
  • ಸೀಟ್ ಬೆಲ್ಟ್ ಹಾಕದೆ ಇರುವುದು-234 ಪ್ರಕರಣ-101700 ರೂಪಾಯಿ ದಂಡ
  • ಲೇನ್‌ ಫಾಲೋ‌ ಮಾಡದೆ ಇರುವುದು-323 ಪ್ರಕರಣ-129100 ರೂಪಾಯಿ ದಂಡ
  • ಅನುಮಾನಸ್ಪದ ನಂಬರ್ ಪ್ಲೇಟ್-469 ಪ್ರಕರಣ- 141700ರೂಪಾಯಿ ದಂಡ
  • ವಾಹನ ಚಲಾಯಿಸುವಾಗ ಮೊಬೈಲ್ ಬಳಕೆ ಮಾಡಿರುವುದು- 444 ಪ್ರಕರಣ- 144900 ರೂಪಾಯಿ ದಂಡ
  • ಯೂನಿಫಾರ್ಮ್‌ಇಲ್ಲದೆ ಗಾಡಿ ಚಲಾಯಿಸಿರುವುದು-332 ಪ್ರಕರಣ-164400 ರೂಪಾಯಿ ದಂಡ
  • ಓವರ್ ಸ್ಪೀಡ್ ಗಾಡಿ ‌ಓಡಿಸಿರೋದು-143 ಪ್ರಕರಣ- 251000 ರೂಪಾಯಿ ದಂಡ ವಸೂಲಿ ಮಾಡಿಲಾಗಿದೆ.

ABOUT THE AUTHOR

...view details