ಬೆಂಗಳೂರು: ಮಗನಿಗೆ ಹುಟ್ಟಿನಿಂದಲೂ ಮೂರ್ಚೆ ರೋಗ ಇದ್ದ ಕಾರಣ ಮನನೊಂದ ತಾಯಿ, ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬ್ಯಾಟರಾಯನಪುರ ಬಳಿಯ ಕವಿಕಾ ಲೇಔಟ್ನಲ್ಲಿ ನಡೆದಿದೆ.
ಹುಟ್ಟಿನಿಂದಲೇ ಮಗನಿಗೆ ಮೂರ್ಚೆ ರೋಗ: ನೊಂದ ತಾಯಿ ಮಗನ ಜೊತೆ ಆತ್ಮಹತ್ಯೆಗೆ ಶರಣು! - bangalore latest news
ಬೆಂಗಳೂರುರಿನ ಬ್ಯಾಟರಾಯನಪುರ ಬಳಿಯ ಕವಿಕಾ ಲೇಔಟ್ನಲ್ಲಿ ಮಗನಿಗೆ ಹುಟ್ಟಿನಿಂದಲೂ ಮೂರ್ಚೆ ರೋಗ ಇದ್ದ ಕಾರಣ ಮನನೊಂದ ತಾಯಿ, ಮಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
![ಹುಟ್ಟಿನಿಂದಲೇ ಮಗನಿಗೆ ಮೂರ್ಚೆ ರೋಗ: ನೊಂದ ತಾಯಿ ಮಗನ ಜೊತೆ ಆತ್ಮಹತ್ಯೆಗೆ ಶರಣು! mother-son-suicide-in-bangalore](https://etvbharatimages.akamaized.net/etvbharat/prod-images/768-512-6293790-thumbnail-3x2-dr.jpg)
ನೊಂದ ತಾಯಿ ಮಗನ ಜೊತೆ ಆತ್ಮಹತ್ಯೆಗೆ ಶರಣು..!
ತಾಯಿ ಶಶಿಕಲಾ (43) ಹಾಗೂ ಮಗ ಹೇಮಾಂದ್ರಿ (11) ಆತ್ಮಹತ್ಯೆಗೆ ಶರಣಾದವರು ಎನ್ನಲಾಗಿದೆ. ಹನ್ನೊಂದು ವರ್ಷದ ಹೇಮಾಂದ್ರಿಗೆ ಪದೇ ಪದೇ ಮೂರ್ಚೆ ರೋಗ ಬರುತ್ತಿದ್ದ ಕಾರಣ ಸಾಕಷ್ಟು ಬಾರಿ ಆಸ್ಪತ್ರೆಗೆ ತೋರಿಸಿದ್ದರು. ಆದರೆ ಮೂರ್ಚೆ ರೋಗ ಬಿಟ್ಟು ಬಿಟ್ಟು ಬರುತ್ತಿದ್ದರಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಶಶಿಕಲಾ ಮಗನ ಜೊತೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸ್ಥಳಕ್ಕೆ ಬ್ಯಾಟರಾಯನಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.