ಕರ್ನಾಟಕ

karnataka

ETV Bharat / state

ವಿಕಲಚೇತನ ಮಗಳನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ತಾಯಿ.. ಬೆಂಗಳೂರಲ್ಲಿ ದಾರುಣ - ಈಟಿವಿ ಭಾರತ ಕರ್ನಾಟಕ

ವಿಕಲಚೇತನ ಮಗಳನ್ನ ಕೊಂದ ತಾಯಿ ತಾನೂ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

mother attempted suicide by killing her daughter
ವಿಕಲಚೇತನ ಮಗಳನ್ನ ಕೊಂದು ತಾನೂ ಆತ್ಮಹತ್ಯೆಗೆ ಯತ್ನಸಿದ ತಾಯಿ

By

Published : Dec 20, 2022, 7:00 PM IST

ಬೆಂಗಳೂರು: ವಿಕಲಚೇತನ ಮಗಳನ್ನು ಕೊಂದ ತಾಯಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಸಿರುಗಟ್ಟಿಸಿ 10 ವರ್ಷದ ಮಗಳನ್ನು ಕೊಲೆಗೈದಿರುವ ತಾಯಿ ಸುಮಾ, ನಂತರ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆದರೆ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಒಂದು ವರ್ಷದ ಹಿಂದೆ ಪತಿ ಹಾಗೂ ಮೊದಲ ಮಗುವನ್ನು ಕಳೆದುಕೊಂಡಿದ್ದ ಸುಮಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು. ಅಲ್ಲದೇ ಎರಡನೇ ಮಗು ವಿಕಲಚೇತನಳಾಗಿದ್ದ ಹಿನ್ನೆಲೆಯಲ್ಲಿ ಮತ್ತಷ್ಟು ಮಾನಸಿಕವಾಗಿ ಕುಗ್ಗಿದ್ದರು. ಇದರಿಂದ ಈ ಕೃತ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬ್ಯಾಡರಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ:ವಿದೇಶದಲ್ಲಿ ವ್ಯಾಸಂಗ ಮಾಡಬೇಕೆಂಬ ಕನಸು ಈಡೇರದ್ದಕ್ಕೆ ಬೆಂಗಳೂರಿನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ABOUT THE AUTHOR

...view details