ಕರ್ನಾಟಕ

karnataka

ETV Bharat / state

ನಾಯಿ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳ: ಬೆಂಗಳೂರಲ್ಲಿ ತಾಯಿ ಮಗಳು ಆತ್ಮಹತ್ಯೆ - quarrel for pet in home

ಮನೆಯಿಂದ ನಾಯಿ ಹೊರಹಾಕುವ ವಿಚಾರವಾಗಿ ಅತ್ತೆ ಮಾವನ ಜೊತೆ ಜಗಳ. ನೊಂದ ತಾಯಿ ಮಗಳು ಆತ್ಮಹತ್ಯೆ.

dog
dog

By

Published : Sep 15, 2022, 9:48 AM IST

ಬೆಂಗಳೂರು:ನಾಯಿ ವಿಚಾರಕ್ಕೆ ಅತ್ತೆ ಮಾವನ ಜೊತೆ ಜಗಳ ಮಾಡಿ ತಾಯಿ-ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ದಿನಗಳ ಹಿಂದೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ತಾಯಿ ದಿವ್ಯಾ ಹಾಗೂ ಮಗಳು ಮೃತಪಟ್ಟವರು.

ದಿವ್ಯಾ ಉಸಿರಾಟ ಸಂಬಂಧ ಕಾಯಿಲೆಯಿಂದ ಬಳಲುತ್ತಿದ್ದರು. ಇವರು ಮನೆಯಲ್ಲಿ ನಾಯಿ ಸಾಕುತ್ತಿದ್ದರು. ಆದ್ರೆ ಮನೆಯಲ್ಲಿ ನಾಯಿ ಇದ್ದರೆ ಕಾಯಿಲೆ ವಾಸಿಯಾಗಲ್ಲ ಎಂದು ವೈದ್ಯರು ಹೇಳಿದ್ದರಂತೆ. ಹೀಗಾಗಿ ನಾಯಿಯನ್ನು ಯಾರಿಗಾದ್ರೂ ಕೊಡು ಎಂದು ದಿವ್ಯಾಗೆ ಅತ್ತೆ, ಮಾವ ಸೂಚಿಸಿದ್ದರಂತೆ.

ಆದರೆ ಮನೆಯಿಂದ ನಾಯಿ ಕಳಿಸಲು ದಿವ್ಯಾ ಒಪ್ಪದಿದ್ದಾಗ ಜಗಳವಾಗಿದೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಗೋವಿಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಪಘಾತವಾದರೂ ಶಾಲೆಗೆ ತೆರಳಿದ 1ನೇ ತರಗತಿ ವಿದ್ಯಾರ್ಥಿ: ಪಾಠ ಕೇಳುತ್ತಲೇ ಕುಸಿದು ಬಿದ್ದು ಸಾವು

ABOUT THE AUTHOR

...view details