ನೆಲಮಂಗಲ :ಹಲವು ಪ್ರಕರಣಗಳಿಗೆ ಬೇಕಿದ್ದ ಮೋಸ್ಟ್ ವಾಂಟೆಡ್ ರೌಡಿಶೀಟರ್ಗಳನ್ನು ಸಿಸಿಬಿ ಮತ್ತು ವೈಟ್ ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಅಪರಾಧ ಕೃತ್ಯಕ್ಕೆ ಸಂಚು ರೂಪಿಸುವಾಗ ಪೊಲೀಸರಿಗೆ ಸಿಕ್ಕಿಬಿದ್ದ ರೌಡಿಶೀಟರ್ಸ್ - ಮೋಸ್ಟ್ ವಾಂಟೆಡ್ ರೌಡಿಶೀಟರ್ಗಳನ್ನು ಬಂಧಿಸಿದ ಸಿಸಿಬಿ ಸುದ್ದಿ,
ಬೆಂಗಳೂರಿನಲ್ಲಿ ಮೋಸ್ಟ್ ವಾಂಟೆಡ್ ರೌಡಿಶೀಟರ್ಗಳನ್ನು ಸಿಸಿಬಿ ಮತ್ತು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.
ಮೋಸ್ಟ್ ವಾಂಟೆಡ್ ರೌಡಿಶೀಟರ್ಗಳನ್ನು ಬಂಧಿಸಿದ ಸಿಸಿಬಿ
ವೈಟ್‌ಫೀಲ್ಡ್ ಉಪವಿಭಾಗದ ಮೋಸ್ಟ್ ವಾಂಟೆಡ್ ರೌಡಿ ಶೀಟರ್ಗಳಾದ ರೋಹಿತ್ ಮತ್ತು ಕಾಂತನನ್ನು ತುಮಕೂರು ರಸ್ತೆಯ ನೆಲಮಂಗಲದ ನವಯುಗ ಟೋಲ್ ಬಳಿ ಬಂಧಿಸಲಾಗಿದೆ.
ಈ ರೌಡಿಶೀಟರ್ಗಳು 2016 ಮತ್ತು 2019ರಲ್ಲಿ ಹಾಡಹಗಲೇ ಕೊಲೆಗಳನ್ನು ಮಾಡಿದ್ದರು. ಎರಡು ಕೊಲೆ, ಧಮಕಿ ಮತ್ತು ಹಫ್ತಾ ವಸೂಲಿ ಪ್ರಕರಣಗಳಲ್ಲಿ ಬೇಕಾಗಿದ್ದರು. ಇದೀಗ ಮತ್ತೊಂದು ಅಪರಾಧ ಕೃತ್ಯ ಎಸಗಲು ಹೊಂಚು ಹಾಕುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.
TAGGED:
Bangalore news,