ಬೆಂಗಳೂರು : ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಬೇಕಾಗಿದ್ದ ನಗರದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಇದೀಗ ಗೋವಾ ಪೊಲೀಸರ ಅತಿಥಿಯಾಗಿದ್ದಾನೆ.
ಪ್ರವೀಣ್ ಎಂಬ ಆರೋಪಿಯನ್ನು ಕಾಣಕೋಣ ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ ಬಂಧಿಯಾಗಿ, ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಿಂದ ಪ್ರವೀಣ್ ತಲೆಮರೆಸಿಕೊಂಡಿದ್ದ. ಈತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದು ಗೋವಾದಲ್ಲೇ ಇದ್ದಾನೆ ಮಾಹಿತಿ ಸಿಕ್ಕಿತ್ತು. ನಗರ ಪೊಲೀಸರು ಆರೋಪಿ ತಲೆಮರೆಸಿಕೊಂಡಿದ್ದ ಬಗ್ಗೆ ನಿನ್ನೆ ಮಧ್ಯಾಹ್ನ ಕಾಣಕೋಣ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಮಾಹಿತಿ ಬಂದ ಕೂಡಲೆ ಕಾಣಕೋಣ ಪೊಲೀಸರಿಂದ ಮೂರು ತಂಡಗಳ ರಚನೆ ಮಾಡಿ, ಹುಡುಕಾಟ ನಡೆಸಿದರು.