ಕರ್ನಾಟಕ

karnataka

ETV Bharat / state

ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಮರಣ ಪ್ರಮಾಣ ಶೂನ್ಯ - ಅಪೋಲೋ ವೈದ್ಯರ ತಂಡದ ಅಧ್ಯಯನ ವರದಿ! - ಎರಡೂ ಡೋಸ್ ವ್ಯಾಕ್ಸಿನ್

ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಕೋವಿಡ್ ಬಂದು ಹೋದರೂ ಯಾವುದೇ ಸಾವು-ನೋವು ಸಂಭವಿಸದೇ ಇರುವ ಸಂಗತಿ ಈಗ ರಾಜ್ಯದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ನಡೆಸಿದ ಅಧ್ಯಯನ ವರದಿ ಸ್ಪಷ್ಟಪಡಿಸಿದೆ.

ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಮರಣ ಪ್ರಮಾಣ ಕಡಿಮೆ
ಎರಡೂ ಡೋಸ್ ವ್ಯಾಕ್ಸಿನ್ ಪಡೆದವರಲ್ಲಿ ಮರಣ ಪ್ರಮಾಣ ಕಡಿಮೆ

By

Published : Jul 16, 2021, 7:36 PM IST

Updated : Jul 17, 2021, 5:10 PM IST

ಬೆಂಗಳೂರು: ಕೊರೊನಾ ಎರಡು ಅಲೆ ಬಂದು ಹೋದ್ರೂ, ಕೋವಿಡ್ ವಿರುದ್ಧದ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಾಮಾರಿ ಕೋವಿಡ್‌ನಿಂದ ಜೀವ ಉಳಿಸಿಕೊಳ್ಳಲು ಲಸಿಕೆಯೇ ರಾಮಬಾಣವೆಂದು ಸರ್ಕಾರಗಳು, ಸಂಘ ಸಂಸ್ಥೆಗಳೂ ಸಾರಿ ಸಾರಿ ಹೇಳಿದರೂ ಜನತೆ ಇನ್ನೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಲಸಿಕೆ ಕೊರೊನಾ ರೋಗಿಗಳಿಗೆ ಸಂಜೀವಿನಿ ಇದ್ದಂತೆ ಎನ್ನುವುದನ್ನು ಮತ್ತೆ ಮತ್ತೆ ಸಾಬೀತಾಗುತ್ತಿದೆ.

ಲಸಿಕೆಯ ಎರಡೂ ಡೋಸ್ ಪಡೆದವರಿಗೆ ಕೋವಿಡ್ ಬಂದು ಹೋದರೂ ಯಾವುದೇ ಸಾವು-ನೋವು ಸಂಭವಿಸದೇ ಇರುವ ಸಂಗತಿ ಈಗ ರಾಜ್ಯತ ಪ್ರತಿಷ್ಠಿತ ಖಾಸಗಿ ಆಸ್ಪತ್ರೆ ನಡೆಸಿದ ಅಧ್ಯಯನದ ವರದಿ ಸ್ಪಷ್ಟಪಡಿಸಿದೆ.

ವ್ಯಾಕ್ಸಿನ್ ಪಡೆದ ನಂತರವೂ ಕೋವಿಡ್-19 ಸೋಂಕಿನಿಂದ ಆಸ್ಪತ್ರೆಗೆ ದಾಖಲಾದವರು, ಮರಣ ಪ್ರಮಾಣ, ಮೊದಲನೇ ಡೋಸ್ ಹಾಗೂ ಎರಡೂ ಡೋಸ್ ಪಡೆದವರ ಮೇಲೆ ಕೋವಿಡ್-19 ಖಾಯಿಲೆಯ ಗಂಭೀರತೆ ಬಗ್ಗೆ ವಿಶ್ಲೇಷಣೆ ನಡೆಸಲಾಗಿದೆ. ಈ ವರದಿ ಈಟಿವಿ ಭಾರತಗೆ ಲಭ್ಯವಾಗಿದೆ.

ಜಯನಗರದ ಅಪೋಲೊ ಸ್ಪೆಷಾಲಿಟಿ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಮುಖ್ಯಸ್ಥರು, ಡಾ.ರವೀಂದ್ರ ಮೆಹ್ತಾ, ಹಾಗೂ ಅಪೋಲೊ ವೈದ್ಯರ ತಂಡದವರಾದ ಸಮೀರ್ ಬನ್ಸಾಲ್, ವಿಖ್ಯಾತ್ ಸತೀಶ್, ಅಮೋಘ ವರ್ಷ, ಹರಿಪ್ರಸಾದ್ ಕಲ್ಪಕಮ್, ಅವರ ತಂಡ ಈ ಅಧ್ಯಯನ ನಡೆಸಿದೆ.

ಎರಡೂ ಡೋಸ್ ಪಡೆದ 14 ಜನರಿಗೆ (500 ಜನರ ಪೈಕಿ) ಉಸಿರಾಟದ ಸಮಸ್ಯೆಯೂ ಕಡಿಮೆಯಾಗಿದೆ. ಮರಣದ ಪ್ರಮಾಣವು ಕಡಿಮೆ. ಆದರೆ ಒಂದೇ ಡೋಸ್ ಪಡೆದ 148 ಜನರ ಪೈಕಿ 20 ಮಂದಿ ಮೃತಪಟ್ಟಿದ್ದಾರೆ. ಅಪೊಲೊ ಆಸ್ಪತ್ರೆಯು 500 ಜನ ಕೋವಿಡ್-19 ಗಂಭೀರ ಹಾಗೂ ಸಾಮಾನ್ಯ ಸ್ಥಿತಿಯ ರೋಗಿಗಳ ಮೇಲೆ ವಿಶ್ಲೇಷಣೆ ಮಾಡಿದೆ.

ವರದಿಯ ವಿವರ

  • ಎಪ್ರಿಲ್ 21 ರಿಂದ ಮೇ 30, 40 ದಿನಗಳಲ್ಲಿ ದಾಖಲಾದ 500 ಕೋವಿಡ್ ರೋಗಿಗಳ ಮೇಲೆ ಅಧ್ಯಯನ
  • ಈ ಪೈಕಿ 320 (64%) ಮಂದಿ ಪುರುಷರು .
  • ಇವರ ಸರಾಸರಿ ವಯಸ್ಸು 52.5
  • ಇವರ BMI (ಬಾಡಿ ಮಾಸ್ ಇಂಡೆಕ್ಸ್) - 26.6 ಕೆಜಿ (ಅಧಿಕ ತೂಕ)
  • ಈ ಪೈಕಿ 256 ರೋಗಿಗಳಿಗೆ (51.2%) ಕನಿಷ್ಠ ಒಂದಾದರೂ ಅನ್ಯಖಾಯಿಲೆ ಇತ್ತು
  • ಡಯಾಬಿಟಿಸ್ - 37.5%, ಅಧಿಕ ರಕ್ತದೊತ್ತಡ- 30.5%
  • 265 (53%) ರೋಗಿಗಳಿಗೆ ಉಸಿರಾಟದ ಸಮಸ್ಯೆ ಇದ್ದು, ಕೃತಕ ಉಸಿರಾಟದ ಅಗತ್ಯವಿತ್ತು.
  • ಉಳಿದ 235 ರೋಗಿಗಳು ದಾಖಲಾಗುವ ವೇಳೆ ಉಸಿರಾಟದ ಸಮಸ್ಯೆ ಇಲ್ಲದಿದ್ದರೂ, ನಂತರದಲ್ಲಿ 85 (36%) ರೋಗಿಗಳ ಸ್ಥಿತಿ ಗಂಭೀರವಾಗಿ ಉಸಿರಾಟದ ಸಮಸ್ಯೆ ಉಂಟಾಗಿತ್ತು.
  • 500 ರೋಗಿಗಳ ಪೈಕಿ ಆಸ್ಪತ್ರೆಗೆ ದಾಖಲಾದ ಸರಾಸರಿ 6 ದಿನಗಳಲ್ಲಿ ಮರಣ ಪ್ರಮಾಣ 17.2%.
  • ಈ ಪೈಕಿ 148 (29.6%) ಮಂದಿ ಆಸ್ಪತ್ರೆ ಸೇರುವ ಮೊದಲೇ ಕನಿಷ್ಠ ಒಂದು ಡೋಸ್ ವ್ಯಾಕ್ಸಿನ್ ಪಡೆದಿದ್ದು, ಇದರಲ್ಲಿ 14 (9.5%) ಜನ ಮಾತ್ರ ಸೆಕೆಂಡ್ ಡೋಸ್ ಪಡೆದಿದ್ದಾರೆ.
  • ವ್ಯಾಕ್ಸಿನ್ ಪಡೆದ ಗರಿಷ್ಟ 124 ಜನ (84%) ಕೋವಿಶೀಲ್ಡ್ ಹಾಗೂ 24 (16%) ಕೋವ್ಯಾಕ್ಸಿನ್ ಪಡೆದಿದ್ದಾರೆ.
  • ಮೊದಲನೇ ಡೋಸ್ ವ್ಯಾಕ್ಸಿನ್ ಪಡೆದು ಆಸ್ಪತ್ರೆಗೆ ದಾಖಲಾದ ಮಧ್ಯಮ ಅವಧಿ 25 ದಿನ (1 ರಿಂದ 150), ಎರಡನೇ ಡೋಸ್ ಪಡೆದ ಬಳಿಕ ಆಸ್ಪತ್ರೆಗೆ ದಾಖಲಾದ ಮಧ್ಯಮ ಅವಧಿ 18 ದಿನ ( 2 to 51) - ವ್ಯಾಕ್ಸಿನ್ ಪಡೆಯದವರು ಆಸ್ಪತ್ರೆಗೆ ದಾಖಲಾದ ಸರಾಸರಿ ವಯಸ್ಸು 49.9 ಆಗಿದ್ರೆ, ವ್ಯಾಕ್ಸಿನ್ ಪಡೆದವರು ಆಸ್ಪತ್ರೆಗೆ ದಾಖಲಾದ ಸರಾಸರಿ ವಯಸ್ಸು 58.4.
  • ವ್ಯಾಕ್ಸಿನ್ ಪಡೆದವರಲ್ಲಿ ಖಾಯಿಲೆಯ ಗಂಭೀರತೆ 148 ಜನರ ಪೈಕಿ 29 ಜನರಿಗಿದ್ದರೆ, ವ್ಯಾಕ್ಸಿನ್ ಆಗದವರಲ್ಲಿ 352 ಜನರಲ್ಲಿ 125 ಜನರಿಗೆ ಕೋವಿಡ್ ಗಂಭೀರ ಸ್ವರೂಪ ಪಡೆದಿದೆ.
  • ವ್ಯಾಕ್ಸಿನ್ ಪಡೆದವರಲ್ಲಿ 66 (44.5%) ಮಂದಿಗೆ ಕೋವಿಡ್ ಉಸಿರಾಟದ ಸಮಸ್ಯೆಯಾಗಿದ್ದರೆ, ವ್ಯಾಕ್ಸಿನ್ ಪಡೆಯದವರಲ್ಲಿ 199 ಜನರಿಗೆ ಉಸಿರಾಟದ ಸಮಸ್ಯೆ ಉಂಟಾಗಿದೆ.
  • ವ್ಯಾಕ್ಸಿನ್ ಪಡೆದವರಲ್ಲಿ ಸರಾಸರಿ 67.4 ವಯಸ್ಸಾಗಿದ್ದರೂ, ಕೋಮಾರ್ಬಿಟ್ ಆಗಿದ್ದರೂ ಉಸಿರಾಟದ ಸಮಸ್ಯೆ ಕಡಿಮೆ ಇತ್ತು. ಆಕ್ಸಿಜನ್ ಸಮಸ್ಯೆ ವ್ಯಾಕ್ಸಿನ್ ಪಡೆಯದ 352 ಜನರಲ್ಲಿ 170 ಜನರಿಗೆ ಉಂಟಾಗಿದ್ದರೆ, ವ್ಯಾಕ್ಸಿನ್ ಪಡೆದ 148 ಜನರ ಪೈಕಿ ಕೇವಲ 51 ಮಂದಿಗೆ ಆಕ್ಸಿಜನ್ ಸಮಸ್ಯೆ ಉಂಟಾಗಿದೆ.

ವ್ಯಾಕ್ಸಿನ್ ಪಡೆದವರು ಹಾಗೂ ಪಡೆಯದವರ ಮರಣ ಪ್ರಮಾಣ:

  • ವ್ಯಾಕ್ಸಿನ್ ಪಡೆದೂ ಸಹ 148 ಜನರಲ್ಲಿ 20 ಜನರು ಮೃತಪಟ್ಟಿದ್ದಾರೆ. ಆದರೆ ಯಾರೂ ಎರಡೂ ಡೋಸ್ ಪಡೆದಿರಲಿಲ್ಲ.
  • ಎರಡೂ ಡೋಸ್ ಪಡೆದವರು ಎಲ್ಲರೂ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
  • ವ್ಯಾಕ್ಸಿನ್ ಪಡೆದೂ ಮೃತಪಟ್ಟ 20 ಜನರು ತೀವ್ರ ಗಂಭೀರ ಸ್ಥಿತಿಯಲ್ಲಿ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು.

ಒಟ್ಟಿನಲ್ಲಿ 500 ಮಂದಿ ಕೋವಿಡ್ ಸೋಂಕಿತರ ಬಗ್ಗೆ ನಡೆಸಿದ ಈ ವಿಶ್ಲೇಷಣೆ ಪ್ರಕಾರ, ವ್ಯಾಕ್ಸಿನೇಟ್ ಆಗಿಯೂ ಆಸ್ಪತ್ರೆಗೆ ದಾಖಲಾದ ಕೋವಿಡ್-19 ಸೋಂಕಿತರ ಪೈಕಿ, ದೇಶದ ಎರಡು ರೀತಿಯ ವ್ಯಾಕ್ಸಿನ್ ಪಡೆದದವರಲ್ಲಿ ಖಾಯಿಲೆಯ ತೀವ್ರತೆ ಕಡಿಮೆ, ಉಸಿರಾಟದ ಸಮಸ್ಯೆ, ಶ್ವಾಸಕೋಶದ ಉರಿಯೂತದ ಗುರುತುಗಳು, ಹಾಗೂ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ ಎಂಬುದು ದೃಢಪಟ್ಟಿದೆ.

ಆದರೆ ಹೆಚ್ಚಿನ ಪ್ರಮಾಣದಲ್ಲಿ ಎರಡನೇ ಡೋಸ್ ವ್ಯಾಕ್ಸಿನೇಷನ್ ಆಗದೇ ಇರುವ ಕಾರಣ ವ್ಯಾಕ್ಸಿನ್ ಒಂದು ಡೋಸ್ ಹಾಗೂ ಎರಡೂ ಡೋಸ್ ಪಡೆದವರ ಮಧ್ಯೆ ವಿಶ್ಲೇಷಣೆ ಮಾಡಲು ಸಾಧ್ಯವಾಗಿಲ್ಲ. ಅಷ್ಟೇ ಅಲ್ಲದೆ ಎರಡೂ ಡೋಸ್ ವ್ಯಾಕ್ಸಿನ್ ಪಡೆದವರು ಆಸ್ಪತ್ರೆಗೆ ದಾಖಲಾದ ಪ್ರಮಾಣವೂ ಕಡಿಮೆ ಇದೆ.

ಎರಡೂ ಡೋಸ್ ಪಡೆದ ಒಬ್ಬರೂ ಕೂಡಾ ಕೋವಿಡ್ -19 ನಿಂದ ಮೃತಪಟ್ಟ ಘಟನೆಯೂ ನಡೆದಿಲ್ಲ. ಜೊತೆಗೆ ಆರಂಭದಲ್ಲಿ ಹೆವ್ಯಾವಿಶೀಲ್ಡ್ ಲಸಿಕೆಯನ್ನೇ ಹೆಚ್ಚು ನೀಡಿದ ಕಾರಣ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ನಡುವಿನ ಕಾರ್ಯಕ್ಷಮತೆ ಗಮನಸಿಲು ಈ ರಿಪೋರ್ಟ್ ನಲ್ಲಿ ಸಾಧ್ಯವಾಗಿಲ್ಲ ಎಂದು ತಜ್ಞರು ಉಲ್ಲೇಖಿಸಿದ್ದಾರೆ.

  • ವರದಿ ಅಂಕಿ-ಅಂಶಗಳು ವ್ಯಾಕ್ಸಿನ್ ಪಡೆಯದವರು 1 or 2 ಡೋಸ್ ಒಟ್ಟು 352 (70.4%) 148(26.8%) 500
  • ಸ.ವರ್ಷ. 49.9 ವರ್ಷ. 58.4. 52.5
  • ಪುರುಷರು 228 (64.5%). 92 (62%) 320(64%)
  • ಆಸ್ಪತ್ರೆದಾಖಲು ಸ. 5(0 to 15). 5(0 to 15). 5(0 to 15)
  • ಅನ್ಯಖಾಯಿಲೆ 189(53.5%). 105(71%). 256(51%)
  • ಆಮ್ಲಜನಕದ ಸಪೋರ್ಟ್ 199 (56.5%). 66(44.5%). 265(53%)
  • ಮಧ್ಯಮಸ್ಥಿತಿ 227(64.5%). 119(80.4%) 346(69.2%)
  • ಗಂಭೀರಸ್ಥಿತಿ 125(35.5%). 29(19.6%). 154(30.8%)
  • ಐಸಿಯು 61(17.3%). 19(12.8%). 80(16%)

ಪರಿಣಾಮಗಳು

  • ಆಮ್ಲಜನಕದ ಕೊರತೆ 170(48.3%). 51(34.5%) 221(44.2%)
  • ಮರಣ. 66(18.75%). 20(13.5%). 86(17.2%)
  • ಆಸ್ಪತ್ರೆಯಲ್ಲಿ ದಾಖಲಾದ ಒಟ್ಟು ದಿನಗಳ ಸರಾಸರಿ6 ದಿನ
  • (1 to 24 ದಿನ)6 (1 to 30). 6(1 to 30)
Last Updated : Jul 17, 2021, 5:10 PM IST

ABOUT THE AUTHOR

...view details