ಕರ್ನಾಟಕ

karnataka

ETV Bharat / state

ಯಶಸ್ವಿಯಾಗಿ ಮುಕ್ತಾಯವಾದ ಆಪರೇಷನ್ ಗಂಗಾ : ಉಕ್ರೇನ್​ನಿಂದ 63 ಬ್ಯಾಚ್​ಗಳಲ್ಲಿ ಮರಳಿದ ‌ವಿದ್ಯಾರ್ಥಿಗಳು - ಆಪರೇಷನ್ ಗಂಗಾ ಮುಕ್ತಾಯ

ಉಕ್ರೇನ್​ನಲ್ಲಿ ಸಿಲುಕಿದ್ದ ಭಾರತೀಯರನ್ನು ತಾಯ್ನಾಡಿಗೆ ವಾಪಾಸ್ ಕರೆ ತರಲು ಸರ್ಕಾರ ಆಪರೇಷನ್​ ಗಂಗಾ ಆರಂಭಿಸಿತ್ತು. ಇದರ ಅಡಿಯಲ್ಲಿ 63 ಬ್ಯಾಚ್​ಗಳಲ್ಲಿ ಸುಮಾರು 572 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲಾಗಿದೆ..

More than five hundred students are return from Ukraine through Operation Ganga
ಉಕ್ರೇನ್​ನಿಂದ ಐದು ನೂರಕ್ಕೂ ಅಧಿಕ ವಿದ್ಯಾರ್ಥಿಗಳು ವಾಪಾಸ್​

By

Published : Mar 12, 2022, 11:58 AM IST

ಬೆಂಗಳೂರು :ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. ಇತ್ತ ಉಕ್ರೇನ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಮರಳಿ ತಾಯ್ನಾಡಿಗೆ ಕರೆ ತರಲಾಗಿದೆ.‌

ಯಶಸ್ವಿಯಾಗಿ ಆಪರೇಷನ್ ಗಂಗಾ ಮುಕ್ತಯವಾಗಿದೆ. ನಿನ್ನೆ ರಾತ್ರಿ ಅಂತಿಮವಾಗಿ ವಿದ್ಯಾರ್ಥಿಗಳು ಬಂದಿಳಿದಿದ್ದಾರೆ. ಇದುವರೆಗೂ ಆಪರೇಷನ್ ಗಂಗಾ ಅಡಿಯಲ್ಲಿ ಒಟ್ಟು 63 ಬ್ಯಾಚ್‌ಗಳಲ್ಲಿ 572 ವಿದ್ಯಾರ್ಥಿಗಳನ್ನು ಕರೆ ತರಲಾಗಿದೆ.

ಫೆಬ್ರವರಿ 27ರಂದು ಆರಂಭವಾದ ಆಪರೇಷನ್ ಗಂಗಾ ಸುಮಾರು 13 ದಿನಗಳ ಕಾಲ ನಡೆದಿದೆ. ಸುಮಾರು 572 ವಿದ್ಯಾರ್ಥಿಗಳು ಕರ್ನಾಟಕಕ್ಕೆ ಆಗಮಿಸಿದ್ದಾರೆ.‌ ಇದಕ್ಕೂ ಮೊದಲೇ 61 ವಿದ್ಯಾರ್ಥಿಗಳು ರಾಜ್ಯಕ್ಕೆ ಹಿಂದಿರುಗಿದ್ದರು.

ಯಾವ ಯಾವ ದಿನದಲ್ಲಿ ಎಷ್ಟು ವಿದ್ಯಾರ್ಥಿಗಳು ಆಗಮನ :

ಫೆಬ್ರವರಿ 27 - 30 ವಿದ್ಯಾರ್ಥಿಗಳು - 3

ಫೆಬ್ರವರಿ 28 - 7 ವಿದ್ಯಾರ್ಥಿಗಳು - 2

ಮಾರ್ಚ್ 1 - 18 ವಿದ್ಯಾರ್ಥಿಗಳು - 3

ಮಾರ್ಚ್ 2 - 31 ವಿದ್ಯಾರ್ಥಿಗಳು - 6

ಮಾರ್ಚ್ 3 - 104 ವಿದ್ಯಾರ್ಥಿಗಳು - 12

ಮಾರ್ಚ್ 4 - 92 ವಿದ್ಯಾರ್ಥಿಗಳು - 9

ಮಾರ್ಚ್ 5 - 90 ವಿದ್ಯಾರ್ಥಿಗಳು - 6

ಮಾರ್ಚ್ 6 - 88 ವಿದ್ಯಾರ್ಥಿಗಳು - 8

ಮಾರ್ಚ್ 7 - 43 ವಿದ್ಯಾರ್ಥಿಗಳು - 6

ಮಾರ್ಚ್ 8 - 57 ವಿದ್ಯಾರ್ಥಿಗಳು - 5

ಮಾರ್ಚ್ 11 - 12 ವಿದ್ಯಾರ್ಥಿಗಳು - 1

ABOUT THE AUTHOR

...view details