ಬೆಂಗಳೂರು: ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳದವರಿಗೆ ಪೊಲೀಸರು ದಂಡ ವಿಧಿಸುತ್ತಿದ್ದು, ಏ.1ರಿಂದ 11ರವರೆಗೆ 83,49,740 ರೂ. ದಂಡವನ್ನು ಸಂಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಸ್ಕ್, ಸಾಮಾಜಿಕ ಅಂತರ ಪಾಲಿಸದ ಜನ... 10 ದಿನದಲ್ಲಿ 83 ಲಕ್ಷ ದಂಡ ಸಂಗ್ರಹ! - ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲಿಸದ ಜನ,
ಮಾಸ್ಕ್ ಮತ್ತು ಸಾಮಾಜಿಕ ಅಂತರ ಪಾಲಿಸದ ಜನರಿಗೆ ನಗರದಲ್ಲಿ ದಂಡ ವಿಧಿಸಲಾಗುತ್ತಿದ್ದು, ಕೇವಲ ಹತ್ತು ದಿನಗಳಲ್ಲಿ 83 ಲಕ್ಷ ದಂಡ ಸಂಗ್ರಹವಾಗಿದೆ.
10 ದಿನಗಳಲ್ಲಿ 83 ಲಕ್ಷ ದಂಡ ಸಂಗ್ರಹ!
ಮಾಸ್ಕ್ ಧರಿಸದ 32,330 ಮಂದಿಗೆ 80.29 ಲಕ್ಷ ದಂಡ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದ 1,284 ಮಂದಿಗೆ 3.20 ಲಕ್ಷ ರೂ. ದಂಡವನ್ನು ಪೊಲೀಸರು ವಿಧಿಸಿದ್ದಾರೆ.
ಕಳೆದ ಮಾರ್ಚ್ ತಿಂಗಳಲ್ಲಿ ಪ್ರತಿದಿನ 2 ಸಾವಿರಕ್ಕೂ ಅಧಿಕ ಜನರಿಗೆ ದಂಡ ಹಾಕಲಾಗುತ್ತಿತ್ತು. ಏಪ್ರಿಲ್ ತಿಂಗಳಲ್ಲಿ 3 -4 ಸಾವಿರ ಮಂದಿಗೆ ದಂಡ ಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.