ಬೆಂಗಳೂರು:ಇನ್ನೂ 60ಕ್ಕೂ ಹೆಚ್ಚು ರೌಡಿಗಳು ಬಿಜೆಪಿ ಪಕ್ಷವನ್ನು ಸೇರಲು ರೆಡಿಯಾಗಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳ್ಳರು ರೌಡಿಗಳನ್ನು ಬಿಜೆಪಿಗೆ ಸೇರಿಕೊಳ್ಳುತ್ತಿದ್ದಾರೆ. ಈಗಾಗಲೇ ಫೈಟರ್ ರವಿ ಬಿಜೆಪಿ ಸೇರಿಕೊಂಡಿದ್ದಾನೆ. ಸೈಲೆಂಟ್ ಸುನೀಲನೂ ಕೂಡ ಬಿಜೆಪಿ ಸೇರಲು ರೆಡಿಯಾಗಿದ್ದಾರೆ. ಒಂದು ಸರ್ವೇ ಪ್ರಕಾರ 47 ಬಿಜೆಪಿ ಶಾಸಕರ 3 ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ ಎಂದು ಕಿಡಿಕಾರಿದರು.
ಸಿ ಟಿ ರವಿ ವಿರುದ್ಧ ವಾಗ್ದಾಳಿ:ಇದೇ ವೇಳೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆ್ಯಕ್ಸಿಡೆಂಟ್ ಮಾಡಿ ನಾಲ್ವರನ್ನು ಸಿ ಟಿ ರವಿ ಕೊಂದಿದ್ರು. ಈಗ ಸತ್ಯ ಹರಿಶ್ಚಂದ್ರನ ರೀತಿ ಮಾತಾಡ್ತಾ ಇದ್ದಾರೆ. ಆತನಿಗೆ ಸಿದ್ದು, ಡಿಕೆಶಿ, ರಾಹುಲ್ ಗಾಂಧಿ ಬಗ್ಗೆ ಮಾತನಾಡೋ ನೈತಿಕತೆಯೇ ಇಲ್ಲ. ಒಂದೇ ಒಂದು ಪರ್ಸೆಂಟ್ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ ಎಂದು ಹರಿಹಾಯ್ದರು.
ಜಾರಕಿಹೊಳಿ ಬೇನಾಮಿ ಅಕೌಂಟ್ ಗೆ ಹಣ : 60 ಕೋಟಿ ರೂಪಾಯಿಯನ್ನು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಲಪಟಾಯಿಸಿದ್ದಾರೆ. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ದಿವಾಳಿ ಹಂತದಲ್ಲಿದೆ. ಸಹಕಾರಿ ಬ್ಯಾಂಕ್ಗಳು ಅಪೆಕ್ಸ್ ಬ್ಯಾಂಕ್ ಗೆ ಪತ್ರ ಬರೆದು, ಸೌಭಾಗ್ಯ ಲಕ್ಷ್ಮೀ ಕಾರ್ಖಾನೆ ದಿವಾಳಿಯಾಗಿದೆ ಅಂತ ಹೇಳಿವೆ. ಸೌಭಾಗ್ಯ ಶುಗರ್ಸ್ವು ಬ್ಯಾಂಕ್ಗಳಿಗೆ 540 ಕೋಟಿ ರೂ. ಸಾಲ ಕೊಡಬೇಕಿದೆ ಎಂದು ಲಕ್ಷ್ಮಣ್ ಆರೋಪಿಸಿದರು.
ಎಥೆನಾಲ್ ಘಟಕವೇ ಇಲ್ಲ: ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರಾಟಕ್ಕೆ ಇದೆ. ಆದ್ರೆ ಶುಗರ್ ಕಾರ್ಖಾನೆ ಒಳಗೆ ಎಥೆನಾಲ್ ಘಟಕ ಇಲ್ಲವೇ ಇಲ್ಲ. ಎಥೆನಾಲ್ ಘಟಕ ಮಾಡ್ತೀವಿ ಅಂತ 60 ಕೋಟಿ ಸಾಲ ಪಡೆದಿದ್ದಾರೆ. ಮಹಾರಾಷ್ಟ್ರದ ಮಿಷನರಿ ಕಂಪನಿಯಿಂದ ಜಾರಕಿಹೊಳಿ ಬೇನಾಮಿ ಅಕೌಂಟ್ ಗೆ ಹಣ ಬಂದಿದೆ ಎಂದು ದೂರಿದರು.
ಸೌಭಾಗ್ಯ ಶುಗರ್ಸ್ ಮಾರುವ ಪ್ಲಾನ್ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಡಿಮೆ ಬೆಲೆಗೆ ಕಾರ್ಖಾನೆ ಮಾರಲು ಪ್ಲಾನ್ ನಡೆದಿದೆ. ಬ್ಯಾಂಕ್ ಹಣ ಮುಂಡಾಯಿಸಲು ಪ್ಲಾನ್ ಮಾಡಲಾಗಿದೆ. ಇದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಿಎಂ ಬೊಮ್ಮಾಯಿ, ಎಸ್.ಟಿ. ಸೋಮಶೇಖರ್ ಅವರು ಇದರಲ್ಲಿ ಭಾಗಿಯಾಗಿದ್ದಾರೆ. ರಮೇಶ್ ಜಾರಕಿಹೊಳಿ ಕಾಂಗ್ರೆಸ್, ಜೆಡಿಎಸ್ ನಲ್ಲಿ ಇದ್ದಿದ್ರೆ ಬಿಡ್ತಾ ಇದ್ರಾ? ಎಂದು ಆರೋಪಿಸಿದ್ದಾರೆ.
ಇದನ್ನೂಓದಿ:ಜಾತಿ, ಧರ್ಮ ಮುಂದಿಟ್ಟುಕೊಂಡು ನಾವು ಚುನಾವಣೆ ಎದುರಿಸುವುದಿಲ್ಲ: ಸಂಸದ ಪ್ರತಾಪ್ ಸಿಂಹ