ಕರ್ನಾಟಕ

karnataka

ETV Bharat / state

ನ್ಯೂ ಇಯರ್​ ಗಿಫ್ಟ್: 50ಕ್ಕೂ ಅಧಿಕ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದ ಸರ್ಕಾರ - ಐಪಿಎಸ್ ಅಧಿಕಾರಿಗಳಿಗೆ ಸಿಹಿ ಸುದ್ದಿ

2022ರ ನೂತನ ವರ್ಷದ ಸಂಭ್ರಮದ ಹೊತ್ತಿನಲ್ಲಿ ರಾಜ್ಯದ 50ಕ್ಕೂ ಅಧಿಕ ಮಂದಿ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

more-than-50-ips-officer-gets-promotion
50ಕ್ಕೂ ಅಧಿಕ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿದ ಸರ್ಕಾರ

By

Published : Jan 1, 2022, 9:53 AM IST

ಬೆಂಗಳೂರು: ಹೊಸ ವರ್ಷದ ಸಂಭ್ರಮದ ಹೊತ್ತಿನಲ್ಲಿ ರಾಜ್ಯದ 50ಕ್ಕೂ ಅಧಿಕ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ರಾಜ್ಯ ಸರ್ಕಾರವು ಶುಕ್ರವಾರ ಆದೇಶಿಸಿದೆ. ಇತ್ತೀಚೆಗಷ್ಟೇ ಕೆಎಸ್‌ಪಿಎಸ್‌ನಿಂದ ಐಪಿಎಸ್ ಹುದ್ದೆಗೆ ಬಡ್ತಿ ಪಡೆದುಕೊಂಡಿದ್ದ 26 ಮಂದಿಗೆ ಎಸ್​ಪಿ ಹುದ್ದೆಗೆ ಮುಂಬಡ್ತಿ ನೀಡಿ, ಸ್ಥಳ ನಿಯೋಜನೆ ಮಾಡಲಾಗಿದೆ.

ಎಡಿಜಿಪಿಗೆ ಮುಂಬಡ್ತಿ:
ಎಸ್.ಮುರುಗನ್ ಅವರು ಎಡಿಜಿಪಿಯಾಗಿ ಕಮ್ಯುನಿಕೇಷನ್, ಲಾಜಿಸ್ಟಿಕ್ಸ್ ಅಂಡ್ ಮಾರ್ಡನೈಜೇಷನ್​ಗೆ, ಕೆ.ವಿ.ಶರತ್ ಚಂದ್ರ ಅವರು ಸಿಐಡಿ ಎಡಿಜಿಪಿ ಹಾಗೂ ಎಂ.ನಂಜುಂಡಸ್ವಾಮಿ ಅವರು ಗೃಹ ರಕ್ಷಕ ದಳ, ನಾಗರಿಕ ರಕ್ಷಣಾ ಎಡಿಜಿಪಿ ಆಗಿ ಬಡ್ತಿ ಪಡೆದಿದ್ಧಾರೆ.

ವೇತನ ಶ್ರೇಣಿ ಏರಿಕೆ:

ಡಾ ಎಸ್.ಡಿ.ಶರಣಪ್ಪ, ಎಂ.ಎನ್. ಅನುಚೇತ್, ಬಿ.ರಮೇಶ್, ಈಡಾ ಮಾರ್ಟಿನ್, ರವಿ ಡಿ. ಚನ್ನಣ್ಣನವರ್, ಸಿ.ವಂಶಿಕೃಷ್ಣ, ಜಿ. ಬೋರಸೆ ಭೂಷಣ್, ಅಭಿನವ್ ಖರೆ, ಡಾ. ಸುಮನ್ ಡಿ. ಪಿಣೀಕರ್, ಡಾ. ಅನೂಪ್ ಎ.ಶೆಟ್ಟಿ, ಹರೀಶ್ ಪಾಂಡೆ, ದಿವ್ಯಾ ಸಾರಾ ಥಾಮಸ್, ಸಿ.ಬಿ.ರಿಷ್ಯಂತ್, ಡಿ.ಕಿಶೋರ್ ಬಾಬು, ನಿಶಾ ಜೆಮ್ಸ್ ಅವರಿಗೆ ವೇತನ ಶ್ರೇಣಿಯಲ್ಲಿ ಬಡ್ತಿ ನೀಡಲಾಗಿದೆ.

ಅಲ್ಲದೇ, ಎಂ.ವಿ.ಚಂದ್ರಶೇಖರ್ (ಅರಣ್ಯ ವಿಭಾಗ, ಕೊಡಗು), ಎಂ.ಎಲ್.ಮಧುರವೀಣಾ (ಸಿಐಡಿ), ಚನ್ನಬಸವಣ್ಣ ಲಗೋಟಿ (ಗುಪ್ತವಾರ್ತೆ, ಬೆಳಗಾವಿ) ಜಯಪ್ರಕಾಶ್ (ಎಸಿಬಿ, ದಾವಣಗೆರೆ), ಕೆ.ಪಿ.ಅಂಜಲಿ(ಲೋಕಾಯುಕ್ತ), ಎಂ.ನಯನ (ಗುಪ್ತವಾರ್ತೆ, ಬೆಂಗಳೂರು) ಸೇರಿ 26 ಮಂದಿಗೆ ಎಸ್ಪಿ ಹುದ್ದೆಗೆ ಮುಂಬಡ್ತಿ ನೀಡಿ, ಸ್ಥಳ ನಿಯೋಜನೆ ಮಾಡಲಾಗಿದೆ.

ABOUT THE AUTHOR

...view details