ಬೆಂಗಳೂರು:ನಗರದಲ್ಲಿಂದು 4373 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ನಿನ್ನೆ ಐದು ಸಾವಿರ ಗಡಿ ತಲುಪಿದ್ದ, ಕೋವಿಡ್ ಪ್ರಕರಣ ಇಂದು ಕೊಂಚ ಇಳಿಕೆಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆಯೂ 35,789 ಕ್ಕೆ ಏರಿಕೆಯಾಗಿದೆ. ಆದರೆ ದಿನೇ ದಿನೇ ಸಾವಿನ ಪ್ರಕರಣ ಹೆಚ್ಚಾಗುತ್ತಿದ್ದು, ನಿನ್ನೆ 25 ಜನರನ್ನು ಕೋವಿಡ್ ಬಲಿ ತೆಗೆದುಕೊಂಡಿತ್ತು.
ಕೋವಿಡ್‌ನಿಂದ ಸಾವನ್ನಪ್ಪುತ್ತಿರುವ ಜನರಲ್ಲಿ 50 ವರ್ಷ ಮೇಲ್ಪಟ್ಟವರೇ ಹೆಚ್ಚಿದ್ದಾರೆ. 70 ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ 34% ಇದ್ದು, 60 ರಿಂದ 69 ವರ್ಷದವರ ಮರಣ ಪ್ರಮಾಣ 27%, 50-59 ವರ್ಷದವರ ಮರಣ ಪ್ರಮಾಣ 21%, 40 ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ 11%, ಮೂವತ್ತು ವರ್ಷ ಮೇಲ್ಪಟ್ಟವರ ಮರಣ ಪ್ರಮಾಣ 5% ರಷ್ಟಿದೆ.