ಬೆಂಗಳೂರು :ಕೊರೊನಾ ವಾರಿಯರ್ಸ್ಗೆ ಈಗಾಗಲೇ ಘೋಷಿಸಿರುವ 30 ಲಕ್ಷ ರೂಪಾಯಿ ಪರಿಹಾರಕ್ಕಿಂತ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡುವುದು ಸಾಧ್ಯವಿಲ್ಲ ಎಂದು ಹೈಕೋರ್ಟ್‌ಗೆ ಸ್ಪಷ್ಟಪಡಿಸಿದ್ದ ಸರ್ಕಾರ, ಇಂದು ತನ್ನ ನಿಲುವಿಗೆ ಕಾರಣಗಳನ್ನು ನೀಡಿದೆ.
ಈ ಕುರಿತು ಹಣಕಾಸು ಇಲಾಖೆ ಕಾರ್ಯದರ್ಶಿ ಪಿ ಸಿ ಜಾಫರ್ ಅವರು, ಹೈಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದಾರೆ. ಸರ್ಕಾರ ತನ್ನ ಲಿಖಿತ ಹೇಳಿಕೆಯಲ್ಲಿ ಕೇಂದ್ರದ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 50 ಲಕ್ಷ ರೂಪಾಯಿ ಪರಿಹಾರವನ್ನು ವಿಮೆ ಮೂಲಕ ಘೋಷಿಸಿದೆ. ಆದರೆ, ರಾಜ್ಯದ ಪರಿಹಾರ ಯೋಜನೆ ವಿಮೆ ಮಾದರಿಯದ್ದಲ್ಲ, ಬದಲಿಗೆ ಪರಿಹಾರದ ಹಣವನ್ನು ನೇರವಾಗಿ ರಾಜ್ಯ ಸರ್ಕಾರವೇ ಸಂತ್ರಸ್ತರಿಗೆ ನೀಡಲಿದೆ.