ಕರ್ನಾಟಕ

karnataka

ETV Bharat / state

ಈವರೆಗೆ ರಾಜ್ಯದಲ್ಲಿ ನಡೆಸಲಾದ ಕೋವಿಡ್ ಪರೀಕ್ಷೆ ಕುರಿತು ಡಾ. ಸುಧಾಕರ್ ಮಾಹಿತಿ - Covid 19 test

ಇದುವರೆಗೂ ರಾಜ್ಯದಲ್ಲಿ 2.03 ಲಕ್ಷ ಕೋವಿಡ್-19 ಮಾದರಿಗಳನ್ನು ಪರೀಕ್ಷೆ ಮಾಡಲಾಗಿದೆ ಎಂದು ಸಚಿವ ಸುಧಾಕರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಸಚಿವ ಸುಧಾಕರ್​ ಟ್ವೀಟ್​
ಸಚಿವ ಸುಧಾಕರ್​ ಟ್ವೀಟ್​

By

Published : May 24, 2020, 12:38 PM IST

ಬೆಂಗಳೂರು:ರಾಜ್ಯದಲ್ಲಿ ಕೊರೊನಾ ಪರೀಕ್ಷಾ ಸಾಮರ್ಥ್ಯ ಹೆಚ್ಚುತ್ತಿದ್ದು, ಇದೀಗ 2 ಲಕ್ಷ ಕೊರೊನಾ ಪರೀಕ್ಷೆ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಟ್ವೀಟ್ ಮಾಡಿದ್ದಾರೆ.

ಸಚಿವ ಸುಧಾಕರ್​ ಟ್ವೀಟ್​

ಇಂದಿಗೆ ರಾಜ್ಯದಲ್ಲಿ 2.03 ಲಕ್ಷ ಕೋವಿಡ್-19 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕಳೆದ 16 ದಿನಗಳಲ್ಲಿ 1ಲಕ್ಷಕ್ಕೂ ಅಧಿಕ ಪರೀಕ್ಷೆ ನಡೆಸಲಾಗಿದೆ. ಈಗ ನಮ್ಮಲ್ಲಿ 57 ಕೋವಿಡ್ ಲ್ಯಾಬ್‌ ಕಾರ್ಯನಿರ್ವಹಿಸುತ್ತಿವೆ. ನಮ್ಮ ಎಲ್ಲಾ ಅಧಿಕಾರಿಗಳು, ವೈದ್ಯರು, ಲ್ಯಾಬ್ ಟೆಕ್ನಿಷಿಯನ್ಸ್​ಗಳ ನಿರಂತರ ಪರಿಶ್ರಮಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ‌ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details