ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಬೇಕಾ ಬಿಟ್ಟಿ ವಾಹನದಲ್ಲಿ ಓಡಾಟ ಮಾಡುವವರ ಮೇಲೆ ಖಾಕಿ ಹದ್ದಿನ ಕಣ್ಣು ಇಟ್ಟಿದ್ದು, ರಾತ್ರಿ ಹಗಲೆನ್ನದೇ ಕೆಲಸ ನಿರ್ವಹಿಸುತ್ತಿದ್ದಾರೆ. ಸದ್ಯ ಲಾಕ್ ಡೌನ್ ಆದೇಶ ಹೊರ ಬಂದ ದಿನದಿಂದ ಇಲ್ಲಿಯವರೆಗೆ ಹತ್ತು ಸಾವಿರದ ಹದಿನಾರು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.
ಲಾಕ್ಡೌನ್ ಮುಗಿಯೋವರೆಗೂ ವಾಹನ ವಾಪಸ್ ನೀಡಲ್ಲ: ಭಾಸ್ಕರ್ ರಾವ್ - ನಗರ ಆಯುಕ್ತ ಭಾಸ್ಕರ್ ರಾವ್
ಸಿಲಿಕಾನ್ ಸಿಟಿಯಲ್ಲಿ ಬೇಕಾ ಬಿಟ್ಟಿ ವಾಹನದಲ್ಲಿ ಓಡಾಟ ಮಾಡುವವರ ಮೇಲೆ ಖಾಕಿ ಹದ್ದಿನ ಕಣ್ಣು ಇಟ್ಟಿದ್ದು, ರಾತ್ರಿ ಹಗಲೆನ್ನದೇ ಕೆಲಸ ನಿರ್ವಹಿಸುತ್ತಿದ್ದಾರೆ.
ಭಾಸ್ಕರ್ ರಾವ್
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಸದ್ಯ ಅಗತ್ಯ ಸೇವೆಗಳಿಗೆಂದು ಪಾಸ್ಗಳನ್ನ ವಿತರಣೆ ಮಾಡಲಾಗಿದೆ. ಆದರೆ, ಕೆಲವರು
ಅಗತ್ಯವಿಲ್ಲದೆ ಸುಮ್ಮನೆ ಶೋಕಿ ಮಾಡೋರು ಬೈಕ್, ಕಾರ್ ಗಳಲ್ಲಿ ಆದೇಶ ಉಲ್ಲಂಘನೆ ಮಾಡಿ ಸಿಬ್ಬಂದಿಗಳಿಗೆ ಸಿಕ್ಕಿ ಬಿಳ್ತಿದ್ದಾರೆ ಎಂದಿದ್ದಾರೆ.
ಅಲ್ಲದೇ, ಎಷ್ಟೇ ಜಾಗೃತಿ ಮೂಡಿಸಿದರೂ ಕೇಳುವ ಮನಸ್ಥಿತಿ ವಾಹನ ಸವಾರರಿಗೆ ಇಲ್ಲ. ಹೀಗಾಗಿ ಪಾಸ್ ಇಲ್ಲದೇ ಅನಗತ್ಯ ಓಡಾಟ ಮಾಡಿದ ಸವಾರರ ವಾಹನಗಳ ಮೇಲೆ ಎನ್ಡಿಎಂಎ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಲಾಕ್ ಡೌನ್ ಮುಗಿಯುವವರೆಗೆ ನಿಡೋದಿಲ್ಲ ಎಂದಿದ್ದಾರೆ.