ನೆಲಮಂಗಲ:ಮನೆಗೆ ಬೀಗ ಹಾಕಿ ಕುಟುಂಬದ ಸದಸ್ಯರು ದೇವಾಲಯಕ್ಕೆ ತೆರಳಿದ್ದರು. ಇದೇ ಸಮಯದಲ್ಲಿ ಕಳ್ಳರು ಮನೆಗೆ ನುಗ್ಗಿ ಸುಮಾರು 10 ಲಕ್ಷ ಹಣ ದೋಚಿ ಪರಾರಿಯಾಗಿರುವ ಘಟನೆ ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಬೈರವೇಶ್ವರ ಲೇಔಟ್ನಲ್ಲಿನಡೆದಿದೆ.
ಚಿಕ್ಕರಾಮಯ್ಯ ಕುಟುಂಬದವರ ಜೊತೆ ಮನೆ ದೇವರಾದ ಗದ್ಧುಗೆ ಮಠದ ದೇವಾಲಯಕ್ಕೆ ತೆರಳಿದ್ದರು. ಸಂಜೆ 4 ಗಂಟೆಯ ಸಮಯದಲ್ಲಿ ದೇವಸ್ಥಾನದಿಂದ ಹಿಂದುರುಗಿದ್ದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.