ಕರ್ನಾಟಕ

karnataka

ETV Bharat / state

ರೈತರ ಟ್ರ್ಯಾಕ್ಟರ್ ಮೆರವಣಿಗೆ: ಸಿಎಂ ನಿವಾಸ, ಕಚೇರಿಗೆ ಪೊಲೀಸ್ ಸರ್ಪಗಾವಲು! - security for CM official residence Kaveri and Krishna

ರೈತರಿಂದ ಟ್ರ್ಯಾಕ್ಟರ್ ಚಳವಳಿ ನಡೆಯುತ್ತಿರುವ ಹಿನ್ನೆಲೆ ಸಿಎಂ ಬಿಎಸ್​​ವೈ ನಿವಾಸ ಕಾವೇರಿ ಹಾಗೂ ಗೃಹ ಕಚೇರಿ ಕೃಷ್ಣಾ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ‌.

ಸಿಎಂ ನಿವಾಸ, ಕಚೇರಿಗೆ ಪೊಲೀಸ್ ಸರ್ಪಗಾವಲು
ಸಿಎಂ ನಿವಾಸ, ಕಚೇರಿಗೆ ಪೊಲೀಸ್ ಸರ್ಪಗಾವಲು

By

Published : Jan 26, 2021, 1:13 PM IST

Updated : Jan 26, 2021, 2:25 PM IST

ಬೆಂಗಳೂರು:ರೈತ ಗಣತಂತ್ರ ಪಥಸಂಚಲನದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿ ಹಾಗೂ ಗೃಹ ಕಚೇರಿ ಕೃಷ್ಣಾಗೆ ಹೆಚ್ಚಿನ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ‌.

ಸಿಎಂ ನಿವಾಸ, ಕಚೇರಿಗೆ ಪೊಲೀಸ್ ಸರ್ಪಗಾವಲು

ರೈತರಿಂದ ಟ್ರ್ಯಾಕ್ಟರ್ ಚಳವಳಿ ನಡೆಯುತ್ತಿರುವ ಹಿನ್ನೆಲೆ ಸಿಎಂ ಬಿಎಸ್​​ವೈ ನಿವಾಸ ಹಾಗೂ ಗೃಹ ಕಚೇರಿ ಕೃಷ್ಣಾ ಬಳಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ‌. ಕುಮಾರ ಕೃಪಾ ರಸ್ತೆಯಲ್ಲಿ ಅತಿ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದ್ದು, 6 ರಿಂದ 8 ಬಿಎಂಟಿಸಿ ಬಸ್​​ಗಳಲ್ಲಿ‌ ಪೊಲೀಸರು ಬಂದಿದ್ದಾರೆ. ಕುಮಾರ ಕೃಪಾ ಗೆಸ್ಟ್ ಹೌಸ್ ಎದುರು ಬಸ್​​ಗಳನ್ನು ನಿಲ್ಲಿಸಲಾಗಿದ್ದು, ಇಡೀ ರಸ್ತೆಯನ್ನು ಪೊಲೀಸರು ನಿಯಂತ್ರಣಕ್ಕೆ ಪಡೆದುಕೊಂಡಿದ್ದಾರೆ.

ಓದಿ:ರಾಜ್ಯಾದ್ಯಂತ 72 ನೇ ಗಣರಾಜ್ಯೋತ್ಸವದ ಸಂಭ್ರಮ.. ಸಚಿವರು, ಶಾಸಕರಿಂದ ಧ್ವಜಾರೋಹಣ

ಸುಮಾರು 400 ರಿಂದ 500 ಜನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸಿಎಂ ಬಿಎಸ್​ವೈ ನಿವಾಸಕ್ಕೆ ರೈತರಿಂದ ಮುತ್ತಿಗೆ ಹಾಕುವ ಸಾಧ್ಯತೆ ಇದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಹೆಚ್ಚಿನ ಭದ್ರತೆ ಒದಗಿಸಿದ್ದು, ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು ಹಾಕಲಾಗಿದೆ.

Last Updated : Jan 26, 2021, 2:25 PM IST

ABOUT THE AUTHOR

...view details