ಬೆಂಗಳೂರು:ನಾಲ್ಕು ದಿನಗಳ ಕಾಲ ವ್ಯಾಕ್ಸಿನ್ ಉತ್ಸವ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಲಸಿಕೆ ಪಡೆದುಕೊಳ್ಳಬೇಕು ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಕರೆ ನೀಡಿದರು.
ನಿನ್ನೆ ತಡರಾತ್ರಿ ಆರೋಗ್ಯ ಸಚಿವರು ನಗರದಲ್ಲಿರುವ ಕೆ.ಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಕೊರೊನಾ ಪ್ರಕರಣಗಳು ರಾಜಧಾನಿಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿವೆ. ಹೀಗಾಗಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೆಲ ಲೋಪದೋಷಗಳನ್ನು ಕೂಡ ಕಂಡಿದ್ದೇನೆ, ಐಸಿಯು ಹಾಗೂ ಜನರಲ್ ಬೆಡ್ಸ್ಗಳ ಲಭ್ಯತೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ರಾತ್ರಿ ವೇಳೆ ಮಿಸಿಟ್ ಮಾಡಿದರೆ ಆಸ್ಪತ್ರೆಯ ಪರಿಸ್ಥಿತಿ ಅರ್ಥವಾಗುತ್ತದೆ. ಹಾಗಾಗಿ ಪರಿಶೀಲನೆ ನಡೆಸಿದ್ದೇನೆ ಎಂದು ಅವರು ತಿಳಿಸಿದರು.
ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ 50 ಐಸಿಯು ಬೆಡ್ಗಳಿವೆ. ಕೇಸ್ಗಳ ಸಂಖ್ಯೆ ಹೆಚ್ಚಾದಂತೆ ಐಸಿಯುಗಳಿಗೆ ದಾಖಲಾಗುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ರಾಜ್ಯಾದ್ಯಂತ ನಮಗೆ 2,500 ಕ್ಕೂ ಅಧಿಕ ಐಸಿಯು ಬೆಡ್ಗಳಿವೆ. ಸರ್ಕಾರಿ ಮಾತ್ರವಲ್ಲದೇ ಖಾಸಗಿ ಆಸ್ಪತ್ರೆಗಳಲ್ಲಿಯೂ ಕೂಡ ಬೆಡ್ ಸಾಕಷ್ಟಿದ್ದು, ಹೀಗಾಗಿ ಸದ್ಯಕ್ಕೆ ಐಸಿಯು ಕೊರತೆಯ ಬಗ್ಗೆ ಏನೂ ಹೇಳಲಾಗದು ಎಂದರು.
ಇದನ್ನೂ ಓದಿ: ಅರುಣ್ ಸಿಂಗ್‌ಗೆ ಭಾರತೀಯ ಇತಿಹಾಸ ಗೊತ್ತಿಲ್ಲ: ಸತೀಶ್ ಜಾರಕಿಹೊಳಿ
ಬೇಗ ಟೆಸ್ಟಿಂಗ್ ಮಾಡಿಸಿಕೊಂಡರೆ ಐಸಿಯುಗೆ ಹೋಗುವುದನ್ನು ತಪ್ಪಿಸಬಹುದು. ವ್ಯಾಕ್ಸಿನ್ ಹಾಕಿಸಿಕೊಳ್ಳುವುದರಿಂದ ಐಸಿಯುಗೆ ದಾಖಲಾಗುವವರ ಪ್ರಮಾಣ ಕೂಡ ಕಡಿಮೆ ಆಗಲಿದೆ. ಇನ್ನಷ್ಟು ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲು ಬಿಬಿಎಂಪಿ ಆಯುಕ್ತರು ಕ್ರಮ ಕೈಗೊಳ್ಳುತ್ತಿದ್ದಾರೆ. ಕೊರೊನಾ ವ್ಯಾಕ್ಸಿನ್ ಹೆಚ್ಚು ಹಾಕಿಸಿಕೊಳ್ಳಿ ಎಂದು ಮನವಿ ಮಾಡಿದರು.