ಬೆಂಗಳೂರು:ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ತೀವ್ರ ಹೃದಯಾಘಾತದಿಂದ ಮೃತಪಟ್ಟ ಬಳಿಕ ನಗರದ ಜನರನ್ನು ಆರೋಗ್ಯ ಸಂಬಂಧಿ ಭಯ ಕಾಡುತ್ತಿದ್ದು ಜನರು ಹೃದಯ ತಪಾಸಣೆಗಾಗಿ ಜಯದೇವ ಆಸ್ಪತ್ರೆಯ ಕದ ತಟ್ಟುತ್ತಿದ್ದಾರೆ.
ಜಯದೇವ ಆಸ್ಪತ್ರೆ ಸಮೀಪ ಜನಜಂಗುಳಿ ಸಾಮಾನ್ಯವಾಗಿ ಪ್ರತಿದಿನ ಜಯದೇವ ಆಸ್ಪತ್ರೆಯ ಒಪಿಡಿಗೆ 1,200 ರೋಗಿಗಳು ಬರುತ್ತಿದ್ದರು. ಆದರೆ ಇಂದು (ಸೋಮವಾರ) ಆಸ್ಪತ್ರೆಗೆ ಬಂದ ರೋಗಿಗಳ ಸಂಖ್ಯೆ 1,500ಕ್ಕೆ ಏರಿಕೆ ಕಂಡಿದೆ.
ಜಯದೇವ ಆಸ್ಪತ್ರೆಯಲ್ಲಿ ಸೇರಿರುವ ಜನರು ಜಿಮ್ಗೆ ಹೋಗಿ ವರ್ಕೌಟ್ ಮಾಡುವವರು, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಸೇರಿದಂತೆ ಅನೇಕರು ಆಸ್ಪತ್ರೆಗೆ ಆಗಮಿಸುತ್ತಿದ್ದಾರೆ. ಕೇವಲ ಎರಡು ದಿನಗಳಲ್ಲಿ ಶೇ.25ರಷ್ಟು ಹೆಚ್ಚಿನ ಜನರು ಚಿಕಿತ್ಸೆಗಾಗಿ ಬಂದಿದ್ದಾರೆ. ಮೈಸೂರಿನಲ್ಲಿರುವ ಜಯದೇವ ಆಸ್ಪತ್ರೆಗೂ ಹೆಚ್ಚಿನ ಹೊರ ರೋಗಿಗಳು ಬಂದಿದ್ದಾರೆ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಢವ.. ಢವ.. ಸಿಂದಗಿ, ಹಾನಗಲ್ ಉಪಚುನಾವಣೆ.. ನಾಳೆ ಮತ ಎಣಿಕೆ..