ಕರ್ನಾಟಕ

karnataka

ETV Bharat / state

ಸಿಲಿಕಾನ್‌ ಸಿಟಿಯಲ್ಲಿ ಪುಡಿರೌಡಿಗಳಿಗೂ ಸಿಗ್ತಿವೆ ಕಂಟ್ರಿಮೇಡ್‌ ಪಿಸ್ತೂಲ್..

ಬಿಹಾರ, ಉತ್ತರ ಪ್ರದೇಶದಿಂದ ‌ಕಡಿಮೆ ಬೆಲೆಗೆ ಕಂಟ್ರಿಮೇಡ್​ ಪಿಸ್ತೂಲ್​ಗಳು ರವಾನೆಯಾಗುತ್ತಿವೆ. 25 ರಿಂದ 30 ಸಾವಿರಕ್ಕೆ ರೌಡಿಶೀಟರ್​ಗಳಿಗೆ, ಪುಂಡರಿಗೆ ಮಾರಾಟ ಮಾಡುತ್ತಿದ್ದ ವಿಚಾರ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿಗಳ ಜಾಡು ಹಿಡಿದು ತನಿಖೆ ಮುಂದುವರೆಸಿದ್ದಾರೆ.

ಪುಡಿರೌಡಿಗಳ ಕೈಗೂ ಸಿಗ್ತಿವೆ ಕಂಟ್ರಿಮೇಡ್​ ಪಿಸ್ತೂಲ್
pistol case registered in Bangalore

By

Published : Feb 3, 2020, 5:18 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಂಟ್ರಿಮೇಡ್​ ಪಿಸ್ತೂಲ್​​ಗಳ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ನಗರದಲ್ಲಿ ಅಕ್ರಮವಾಗಿ ಗನ್ ಸಪ್ಲೈಯರ್​ಗಳ ಮೇಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಕೆಲದಿನಗಳ ಹಿಂದೆ ಸುದ್ದಗುಂಟೆಪಾಳ್ಯದಲ್ಲಿ ವಿಧ್ವಂಸಕ ಕೃತ್ಯ ವೆಸಗಲು ಸಿದ್ದನಿದ್ದ ಮೆಹಬೂಬ್ ಪಾಷಾ ಎಂಬ ಶಂಕಿತ ಉಗ್ರ ಆತನ ಮೇಲೆ ಪೊಲೀಸರು ದಾಳಿ ನಡೆಸಿ ಮೂರು ಪಿಸ್ತೂಲ್​, 60 ಸಜೀವ ಗುಂಡು ಪತ್ತೆ ಮಾಡಿದ್ದಾರೆ. ಕಳೆದ ಗುರುವಾರ ಬಾಗಲೂರು ರೌಡಿಯೊಬ್ಬನ ಬಳಿ 1 ಪಿಸ್ತೂಲ್​, 7 ಜೀವಂತ ಗುಂಡುಗಳೊಂದಿಗೆ ರೌಡಿ ಫಯಾಜುಲ್ಲಾ ಪೊಲೀಸರ ಬೀಟ್​ ವೇಳೆ ರೆಡ್​ ಹ್ಯಾಂಡ್​ ಆಗಿ ಸಿಕ್ಕಿ ಬಿದ್ದಿದ್ದ. ಹಾಗಾಗಿ ಉದ್ಯಾನನಗರಿಯಲ್ಲಿ ಪಿಸ್ತೂಲ್​ಗಳು ಎಲ್ಲಿಂದ ಸರಬರಾಜಾಗುತ್ತಿವೆ ಎಂಬುದರ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದರು.

ಬಿಹಾರ, ಉತ್ತರ ಪ್ರದೇಶದಿಂದ ‌ಕಡಿಮೆ ಬೆಲೆಗೆ ಕಂಟ್ರಿಮೇಡ್​ ಪಿಸ್ತೂಲ್​ಗಳು ರವಾನೆಯಾಗುತ್ತಿವೆ. 25 ರಿಂದ 30 ಸಾವಿರಕ್ಕೆ ರೌಡಿಶೀಟರ್​ಗಳಿಗೆ, ಪುಂಡರಿಗೆ ಮಾರಾಟ ಮಾಡುತ್ತಿದ್ದ ವಿಚಾರ ಬಯಲಾಗಿದೆ. ಸದ್ಯ ಪೊಲೀಸರು ಆರೋಪಿಗಳ ಜಾಡು ಹಿಡಿದು ತನಿಖೆ ಮುಂದುವರೆಸಿದ್ದಾರೆ.

ಹತ್ತಾರು ಪ್ರಕರಣಗಳು ದಾಖಲು:ನಗರ ಪೊಲೀಸರು ಈವರೆಗೆ ಆರ್ಮ್ಸ್​ ಬಳಕೆ ಮತ್ತು ಅಕ್ರಮವಾಗಿ ಆಯುಧಗಳನ್ನ ಹೊಂದಿರುವ ಕುರಿತಂತೆ 22ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.13 ಪಿಸ್ತೂಲ್​, 1 ಎಸ್​ಬಿಬಿಎಲ್​, 2 ಏರ್​ಗನ್​ಗಳು,130 ರೌಂಡ್​ ಜೀವಂತ ಗುಂಡು ಸಹ ಪತ್ತೆಯಾಗಿವೆ. ಈಗಾಗಲೇ 30ಕ್ಕೂ ಅಧಿಕ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ.

ABOUT THE AUTHOR

...view details