ಕರ್ನಾಟಕ

karnataka

ETV Bharat / state

ಕಂಠೀರವ ಸ್ಟೇಡಿಯಂನಲ್ಲಿ ನೂಕು ನುಗ್ಗಲು : ಜನರನ್ನ ನಿಯಂತ್ರಿಸಲು ಫೀಲ್ಡ್‌ಗಿಳಿದ ಪೊಲೀಸ್ ಆಯುಕ್ತರು.. - ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸ್​ ಹರಸಾಹಸ

ಮಹಿಳೆಯರು, ಮಕ್ಕಳು ಸೇರಿ ಸ್ಟೇಡಿಯಂನತ್ತ ಅಭಿಮಾನಿಗಳು ಹರಿದು ಬರುತ್ತಿರುವುದರಿಂದ ನೂಕು ನುಗ್ಗಲು ಉಂಟಾಗಿತ್ತು. ಪರಿಸ್ಥಿತಿಯನ್ನು ತಿಳಿಗೊಳಿಸಲಾಗದೆ ಸ್ಥಳದಲ್ಲಿ ಲಘು ಲಾಠಿ ಪ್ರಹಾರ ಮಾಡಲಾಗಿದೆ..

More and more puneeth rajkumar fans are coming to kanteerava studios
ಜನರನ್ನು ನಿಯಂತ್ರಿಸಲು ಫೀಲ್ಡ್ ಗಿಳಿದ ಪೊಲೀಸ್ ಆಯುಕ್ತರು

By

Published : Oct 29, 2021, 9:12 PM IST

ಬೆಂಗಳೂರು :ಕಂಠೀರವ ಸ್ಟೇಡಿಯಂನಲ್ಲಿ ನಟ ಪುನೀತ್​ ರಾಜ್​ ಕುಮಾರ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಜನರನ್ನು ನಿಯಂತ್ರಿಸಲು ನಗರ ಪೊಲೀಸ್​ ಆಯುಕ್ತರು ಖುದ್ದು ಫೀಲ್ಡಿಗಿಳಿದಿದ್ದಾರೆ.

ಕಂಠೀರವ ಸ್ಟೇಡಿಯಂನಲ್ಲಿ ಉಂಟಾದ ನೂಕು ನುಗ್ಗಲು..

ಭದ್ರತೆ ಉಸ್ತುವಾರಿ ವಹಿಸಿಕೊಂಡಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಅಂತಿಮ ದರ್ಶನದ ವೇಳೆ‌ ಯಾವುದೇ ಲೋಪದೋಷವಾಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಆದರೆ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಕಿದ್ದ ಬ್ಯಾರಿಕೇಡ್​​ಗಳನ್ನ ತಳ್ಳಿ ಅಭಿಮಾನಿಗಳು ಆಗಮಿಸುತ್ತಿರುವ ಹಿನ್ನೆಲೆ ಜನರನ್ನು ನಿಯಂತ್ರಿಸಲು ಖಾಕಿ ಹರಸಾಹಸ ಪಡುತ್ತಿತ್ತು. ಇದನ್ನರಿತ ಪೊಲೀಸ್ ಆಯುಕ್ತರು, ಖುದ್ದು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಮಹಿಳೆಯರು, ಮಕ್ಕಳು ಸೇರಿ ಸ್ಟೇಡಿಯಂನತ್ತ ಅಭಿಮಾನಿಗಳು ಹರಿದು ಬರುತ್ತಿರುವುದರಿಂದ ನೂಕು ನುಗ್ಗಲು ಉಂಟಾಗಿತ್ತು. ಪರಿಸ್ಥಿತಿಯನ್ನು ತಿಳಿಗೊಳಿಸಲಾಗದೆ ಸ್ಥಳದಲ್ಲಿ ಲಘು ಲಾಠಿ ಪ್ರಹಾರ ಮಾಡಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: 'ಅಪ್ಪು' ಕಂಠದಲ್ಲಿ ಅಪ್ಪನ ನೆನಪುಗಳು.. ಮತ್ತೆ ಮತ್ತೆ ಜೀವಿಸುತ್ತಿದ್ದ 'ರಾಜ್​'

ABOUT THE AUTHOR

...view details