ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮಾನ್ಸೂನ್ ದುರ್ಬಲ: ಕರಾವಳಿ ಜಿಲ್ಲೆಗಳಲ್ಲಿ ಜುಲೈ 31ರಿಂದ ಆಗಸ್ಟ್​ 3ರವರೆಗೆ ವ್ಯಾಪಕ ಮಳೆ ನಿರೀಕ್ಷೆ

ರಾಜ್ಯದಲ್ಲಿ ಮಾನ್ಸೂನ್ ದುರ್ಬಲವಾಗಿದ್ದು ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕಡಿಮೆ ಪ್ರಮಾಣದದಲ್ಲಿ ಮಳೆಯಾಗಿದ್ದರೆ, ಕರಾವಳಿಯಲ್ಲಿ ವರುಣ ತನ್ನ ಆರ್ಭಟ ಮುಂದುವಿರಿಸಿದ್ದಾರೆ. ಅಲ್ಲದೆ ಜುಲೈ 31ರಿಂದ ಆಗಸ್ಟ್​ 3ರವರೆಗೆ ಕರಾವಳಿಯಲ್ಲಿ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ

heavy rain in coastal area
ಕರಾವಳಿ ಜಿಲ್ಲೆಗಳಲ್ಲಿ ಮಳೆ

By

Published : Jul 31, 2021, 1:25 AM IST

ಬೆಂಗಳೂರು:ರಾಜ್ಯದಲ್ಲಿ ಶುಕ್ರವಾರ ನೈರುತ್ಯ ಮಾನ್ಸೂನ್ ದುರ್ಬಲವಾಗಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ಮಳೆಯಾಗಿದೆ. ಕರಾವಳಿ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ವ್ಯಾಪಕ ಮಳೆ ಮುಂದುವರೆದಿದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಕ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ಆಗುಂಬೆಯಲ್ಲಿ 8 ಸೆಂ.ಮೀ., ತಾಳಗುಪ್ಪದಲ್ಲಿ 6 ಸೆಂ.ಮೀ., ಹೊನ್ನಾವರದಲ್ಲಿ 5 ಸೆಂ.ಮೀ., ತೀರ್ಥಹಳ್ಳಿಯಲ್ಲಿ 4 ಸೆಂ.ಮೀ., ದಕ್ಷಿಣ ಕನ್ನಡದ ಮಣಿ, ಕಾರ್ಕಳ, ಕೊಲ್ಲೂರು, ಉತ್ತರ ಕನ್ನಡದ ಸಿದ್ದಾಪುರ, ಬೆಳಗಾವಿಯ ಲೋಂಡ, ಲಿಂಗನಮಕ್ಕಿ, ಶೃಂಗೇರಿ, ಕೊಟ್ಟಿಗೆಹಾರದಲ್ಲಿ ತಲಾ 3 ಸೆಂ.ಮೀ. ಮೂಡಬಿದ್ರೆ, ಬಂಟ್ವಾಳ, ಸುಬ್ರಮಣ್ಯ, ಕುಂದಾಪುರ, ಉಡುಪಿಯ ಸಿದ್ದಾಪುರ, ಭಟ್ಕಳ, ಕದ್ರ, ಉತ್ತರ ಕನ್ನಡದ ಯಲ್ಲಾಪುರ, ಬೆಳವಾಡಿ, ತ್ಯಾಗರ್ತಿ, ಜಯಪುರ, ಸಕಲೇಶಪುರದಲ್ಲಿ ತಲಾ 2 ಸೆಂ.ಮೀ. ಮಳೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಹವಾಮಾನ ಇಲಾಖೆಯ ಪ್ರಾದೇಶಕ ನಿರ್ದೇಶಕ ಸಿ.ಎಸ್. ಪಾಟೀಲ್
ರಾಜ್ಯದಲ್ಲಿ 5.8 ಕಿ.ಮೀ ಎತ್ತರದವರೆಗೆ ಸಾಧಾರಣವಾಗಿ ಪಶ್ಚಿಮ ಭಾಗದಿಂದ ಬಲವಾದ ಗಾಳಿ ಬೀಸುತ್ತದೆ. ಕರಾವಳಿ ಜಿಲ್ಲೆಗಳಲ್ಲಿ ಜುಲೈ 31ರಿಂದ ಆಗಸ್ಟ್​ 3ರವರೆಗೆ ವ್ಯಾಪಕ ಮಳೆ ನಿರೀಕ್ಷಿಸಲಾಗಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಮಾತ್ರ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ವರೆಗೆ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ತಾಪಮಾನ 29 ಹಾಗೂ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಪಾಟೀಲ್ ಹೇಳಿದ್ದಾರೆ.

ABOUT THE AUTHOR

...view details