ಕರ್ನಾಟಕ

karnataka

ETV Bharat / state

ಕರಾವಳಿ ಭಾಗದಲ್ಲಿ ಮುಂದಿನ ತಿಂಗಳು ಮುಂಗಾರು ಚುರುಕು.. ಹವಾಮಾನ ಇಲಾಖೆ - Monsoon

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು ಮುಂದಿನ ತಿಂಗಳು ಕರಾವಳಿ ಭಾಗದಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಎಚ್ಚರಕೆಯ ಗಂಟೆಯನ್ನೂ ಸಹ ನೀಡಿದೆ.

ಮುಂಗಾರು

By

Published : Jun 29, 2019, 9:51 PM IST

ಬೆಂಗಳೂರು:ಜುಲೈ ಮೊದಲ ವಾರದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮುಂಗಾರು ಚುರುಕುಗೊಳ್ಳುವ ಸಾಧ್ಯತೆ ಇದೆ.

ಈ ಸಂಬಂಧ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಲಿದ್ದು, ಅದರ ಪ್ರಭಾವದಿಂದ ಕರಾವಳಿ ಭಾಗದಲ್ಲಿ ಅತೀ ಹೆಚ್ಚು ಮಳೆ ಯಾಗಲಿದೆ ಎಂದು ಹವಾಮಾನ ತಜ್ಞರು ಮಾಹಿತಿ ನೀಡಿದ್ದಾರೆ.

ಒಂದು ವಾರ ಕಾಲ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಇತ್ತ ಬೆಂಗಳೂರಿನಲ್ಲಿ ಗಾಳಿ ಮತ್ತು ಮೋಡದ ವಾತಾವರಣದಿಂದ ಕೂಡಿದೆ. ಮಳೆ ಬರುವ ನಿರೀಕ್ಷೆ ಬಹಳ ಕಡಿಮೆ ಇದ್ದು, ಅಲ್ಲಲ್ಲಿ ಹಗುರುವಾದ ಮಳೆಯಾಗಲಿದೆ.‌ ಉತ್ತರ ಒಳನಾಡು ಭಾಗಗಳಾದ ಬೆಳಗಾವಿ, ಬಾಗಲಕೋಟೆ, ಬೀದರ್ ಸೇರಿದಂತೆ ಹಲವು ಕಡೆ ಭಾರೀ ಮಳೆಯಾಗುತ್ತಿದೆ.‌ ಆದರೆ, ದಕ್ಷಿಣ ಒಳನಾಡಿನಲ್ಲಿ ಮಾತ್ರ ಮಳೆಗೆ ಬರ ಬಂದಿದೆ. ಸದ್ಯ ಮುಂದಿನ‌ ಒಂದು ವಾರದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಲಾಗಿದೆ.

ABOUT THE AUTHOR

...view details