ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ 'ತಮಿಳುನಾಡಿನ ಮಂಗನ ಗ್ಯಾಂಗ್' ಆ್ಯಕ್ಟಿವ್ ಆಗಿದೆ. ಇವರು ಚಿಕ್ಕಪುಟ್ಟ ಮನೆಗಳಿಗೆ ಹೋಗಲ್ಲ, ಮೊಬೈಲ್ ಬಳಸಲ್ಲ. ಈ ಗ್ಯಾಂಗಿಗೆ ಹೈ ಫೈ ಬಿಲ್ಡಿಂಗ್ ಮತ್ತು ಅಪಾರ್ಟ್ಮೆಂಟ್ಗಳೇ ಟಾರ್ಗೆಟ್. ಮಂಗನಂತೆ ಕಾಂಪೌಂಡ್ ಹಾರಿ ಬರುವ ತಂಡ ಮನೆಯಲ್ಲಿ ಚಿನ್ನ ಬಿಟ್ಟು ಬೇರೇನೂ ಮುಟ್ಟಲ್ಲ. ಸಿನಿಮೀಯ ಶೈಲಿಯಲ್ಲಿ ಎಂಟ್ರಿ ಕೊಡ್ತಿದ್ದ ಖತರ್ನಾಕ್ ತಂಡವೀಗ ಪೊಲೀಸರ ಬಲೆಗೆ ಬಿದ್ದಿದೆ.
ಸಂಪಿಗೆಹಳ್ಳಿ ಠಾಣಾ ಪೊಲೀಸರು ಮಂಕಿ ಗ್ಯಾಂಗ್ನ ಪ್ರಮುಖ ಆರೋಪಿ ಸೈರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಅಪಾರ್ಟ್ಮೆಂಟ್ನಲ್ಲಿ ಪೈಪ್ ಬಳಸಿ ಫ್ಲಾಟ್ಗೆ ಪ್ರವೇಶ ಕೊಟ್ಟು, ಮನೆಯಲ್ಲಿರುವ ಚಿನ್ನಾಭರಣ ದೋಚಿ ಪರಾರಿಯಾಗ್ತಿದ್ದ. ಚಿನ್ನ ಬಿಟ್ಟು ಯಾವುದೇ ವಸ್ತು ಮುಟ್ಟದೆ, ನಗದು ಹಣ ಸಿಕ್ಕಷ್ಟು ಚೋರಿ ಮಾಡ್ತಿದ್ದ ಎಂದು ತಿಳಿದುಬಂದಿದೆ.