ಬೆಂಗಳೂರು:ಚಿಲ್ಲರೆ ಹಣ ಬಿದಿದ್ದೆ ಎಂದು ವೃದ್ಧರೊಬ್ಬರ ಗಮನ ಬೇರೆಡೆ ಸೆಳೆದು 1.50 ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್ ಕಳ್ಳತನ ಮಾಡಿರುವ ಘಟನೆ ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎಲ್ಐಸಿ ಕಾಲೋನಿಯಲ್ಲಿ ನಡೆದಿದೆ.
ಚಿಲ್ಲರೆಗಾಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧ.... ಖದೀಮರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ - 'CCTV' captures old men's attention update
ರಸ್ತೆಯಲ್ಲಿ ಚಿಲ್ಲರೆ ಹಣ ಬೀಳಿಸಿ ವೃದ್ಧರೊಬ್ಬರ ಗಮನ ಬೇರೆಡೆ ಸೆಳೆದು ಹಣ ಜೊತೆ ಕಳ್ಳರು ಪರಾರಿಯಾಗಿದ್ದಾರೆ.
![ಚಿಲ್ಲರೆಗಾಗಿ ಲಕ್ಷ ಲಕ್ಷ ಕಳೆದುಕೊಂಡ ವೃದ್ಧ.... ಖದೀಮರ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ bng](https://etvbharatimages.akamaized.net/etvbharat/prod-images/768-512-5211420-thumbnail-3x2-.jpg)
ಗುಂಡಪ್ಪ ಎಂಬುವವರು ನಿನ್ನೆ ಮಧ್ಯಾಹ್ನ ಬ್ಯಾಂಕ್ನಿಂದ ಒಂದೂವರೆ ಲಕ್ಷ ರೂಪಾಯಿ ಡ್ರಾ ಮಾಡಿಕೊಂಡು ನ್ಯಾನೊ ಕಾರಿನಲ್ಲಿ ಹೊರಟಿದ್ದರು. ಇದನ್ನು ಗಮನಿಸಿ ಕಳ್ಳರು ಎಲ್ಐಸಿ ಕಾಲೋನಿ ಬಳಿ ಫಾಲೋ ಮಾಡಿಕೊಂಡು ಬಂದ್ದಿದ್ದರು. ಅಷ್ಟೇ ಅಲ್ಲ ರಸ್ತೆಯಲ್ಲಿ ಚಿಲ್ಲರೆ ಹಣ ಬೀಳಿಸಿ ಕೃತ್ಯ ಎಸೆಗಿದ್ದರು.
ಚಿಲ್ಲರೆ ಹಣ ಬಿದ್ದಿದೆ ಎಂದು ಹೇಳಿ ಅವರ ಗಮನ ಸೆಳೆದಿದ್ದಾರೆ. ಕಾರಿನಿಂದ ಇಳಿದ ಗುಂಡಪ್ಪ ಚಿಲ್ಲರೆ ಹಣ ತೆಗೆದುಕೊಳ್ಳುವಾಗ ಮತ್ತೊಂದು ಬದಿಯಿಂದ ಕಾರ್ನ ಮತ್ತೊಂದು ಡೋರ್ ತೆಗೆದು ಹಣವಿದ್ದ ಬ್ಯಾಗ್ ಜೊತೆ ಎಸ್ಕೇಪ್ ಖದೀಮ ಆಗಿದ್ದಾನೆ. ಈ ಕಳ್ಳತನದ ದೃಶ್ಯ ಈಗ ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.