ಕರ್ನಾಟಕ

karnataka

ETV Bharat / state

ನಕಲಿ ಚೆಕ್​ ಬಳಸಿ ಹಣ ಲೂಟಿ ಪ್ರಕರಣ: ಬ್ಯಾಂಕ್​ ಮ್ಯಾನೇಜರ್​ ಸೇರಿ ಮೂವರು ಅಂದರ್​ - ನಕಲಿ ಚೆಕ್​ ಬಳಸಿ ಹಣ ಲೂಟಿ ಪ್ರಕರಣ

ನಕಲಿ ಚೆಕ್​ ಬಳಸಿ ಬ್ಯಾಂಕ್ ಮ್ಯಾನೇಜರ್​ವೊಬ್ಬ ಗ್ರಾಹಕರ ಹಣ ಲೂಟಿ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಕಲಿ ಚೆಕ್​ ಬಳಸಿ ಹಣ ಲೂಟಿ ಪ್ರಕರಣ

By

Published : Nov 13, 2019, 11:17 PM IST

Updated : Nov 14, 2019, 5:25 PM IST

ಬೆಂಗಳೂರು:ನಕಲಿ ಚೆಕ್​ ಬಳಸಿ ಬ್ಯಾಂಕ್ ಮ್ಯಾನೇಜರ್​ವೊಬ್ಬ ಗ್ರಾಹಕರ ಹಣ ಲೂಟಿ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.

ನಕಲಿ ಚೆಕ್ ಬಳಸಿ ಎನ್​ಜಿಒ ಸಂಸ್ಥೆಯೊಂದರ ಖಾತೆಗೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್​ ಹಾಗೂ ಆತನ ಸಹಚರರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.

ಜು.05ರಂದು ಹರೀಶ್ ಎಂಬಾತ ರಾಮಮೂರ್ತಿ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್​ನಲ್ಲಿ ಎನ್​ಜಿಒ ಸಂಸ್ಥೆ ಹೆಸರಿನಲ್ಲಿ 3.95 ಕೋಟಿ ರೂ. ಚೆಕ್ ನೀಡಿ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಅದರಂತೆ ಹಣ ಮತ್ತೊಂದು ಅಕೌಂಟ್​ಗೆ ವರ್ಗಾವಣೆಯಾಗಿತ್ತು.

ಚೆಕ್​ನಿಂದ ವರ್ಗಾವಣೆಯಾದ ಹಣವನ್ನು ನೆಲಮಂಗಲದ ಐಸಿಐಸಿಐ ಬ್ಯಾಂಕ್​ಗೆ ಹೋಗಿ ಬೇರೆ ಅಕೌಂಟ್​ಗಳಿಗೆ ಡೆಪಾಸಿಟ್ ಮಾಡಲು ಹೋದಾಗ ದಾಖಲೆಗಳು ಇಲ್ಲದೆ ಚಡಪಡಿಸಿದ್ದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪರಿಕ್ಷಿತ್ ನಾಯ್ಡು, ಗುರು, ರಂಗಸ್ವಾಮಿ, ಅಜಯ್ ಹಾಗೂ ಹರೀಶ್ ಎಂಬುವವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದು, ನಕಲಿ ಚೆಕ್ ಪಾಸ್ ಮಾಡಲು ಸಹಕರಿಸಿದ ಆರೋಪದಡಿಯಲ್ಲಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್​ನ್ನು ಬಂಧಿಸಿದ್ದಾರೆ.

ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Last Updated : Nov 14, 2019, 5:25 PM IST

ABOUT THE AUTHOR

...view details