ಬೆಂಗಳೂರು: ವಂಚಕ ಯುವರಾಜ್ ಜೊತೆ ಹಣದ ವ್ಯವಹಾರ ಮಾಡಿದ್ದ ಆರೋಪ ಎದುರಿಸುತ್ತಿರುವ ನಟಿ ರಾಧಿಕಾ ಕುಮಾರಸ್ವಾಮಿಗೆ ಐಟಿ ತಂಡ ಬಲೆ ಬೀಸುತ್ತಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ವಂಚಕ ಯುವರಾಜ್ ಜೊತೆ ಹಣದ ವ್ಯವಹಾರ: ರಾಧಿಕಾ ಕುಮಾರಸ್ವಾಮಿಗೆ ಮತ್ತೆ ಎದುರಾಗುತ್ತಾ ಸಂಕಷ್ಟ? - Actress Radhika Kumaraswamy
ವಂಚನೆ ಪ್ರಕರಣದಲ್ಲಿ ಜೈಲಿನಲ್ಲಿರುವ ಯುವರಾಜ್ ಜೊತೆ ಹಣದ ವ್ಯವಹಾರ ಹೊಂದಿರುವ ಆರೋಪದ ಮೇಲೆ ನಟಿ ರಾಧಿಕಾ ಕುಮಾರಸ್ವಾಮಿಗೆ ಐಟಿ ನೋಟಿಸ್ ನೀಡುವ ಸಾಧ್ಯತೆ ಇದೆ.
ಈಗಗಲೇ ಸಿಸಿಬಿ ವಿಚಾರಣೆ ಎದುರಿಸಿರುವ ರಾಧಿಕಾಗೆ ಆದಾಯ ತೆರಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯುತ್ತಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಯುವರಾಜ್ ಜೊತೆ ಹಣದ ವ್ಯವಹಾರ ಮಾಡಿದ್ದೇ ಇಷ್ಟಕ್ಕೆಲ್ಲ ಕಾರಣ ಎನ್ನಲಾಗುತ್ತಿದೆ. ಯುವರಾಜ್ ತನ್ನ ಚಾಲಕನ ಅಕೌಂಟ್ನಿಂದ ಹಣದ ವ್ಯವಹಾರ ನಡೆಸಿದ್ದ ಹಿನ್ನೆಲೆ ಚಾಲಕನಿಗೆ ಈಗಾಗಲೇ ನೋಟಿಸ್ ಕೊಟ್ಟು ವಿಚಾರಣೆಗೆ ಕರೆಯಲಾಗಿದೆ.
ಯುವರಾಜ್ ಜೊತೆ ಹಣದ ವ್ಯವಹಾರ ಮಾಡಿದ್ದ ಎಲ್ಲರಿಗೂ ನೋಟಿಸ್ ನೀಡಲು ಐಟಿ ತಯಾರಿ ನಡೆಸುತ್ತಿದ್ದು, ಆ ಲಿಸ್ಟ್ನಲ್ಲಿ ನಟಿ ರಾಧಿಕಾ ಕುಮಾರಸ್ಬಾಮಿ ಹೆಸರು ಕೂಡ ಇದೆ ಎನ್ನಲಾಗುತ್ತಿದೆ. ಹಣದ ವ್ಯವಹಾರದ ವಿವರಣೆಯನ್ನು ಆದಾಯ ತೆರಿಗೆ ಇಲಾಖೆ ತಂಡ ಕೇಳಲಿದ್ದು, ಇ.ಡಿ ಸಂಸ್ಥೆ ಕೂಡ ಈ ಪ್ರಕರಣದಲ್ಲಿ ಎಂಟ್ರಿಯಾಗುವ ಸಾಧ್ಯತೆ ಇದೆ.