ಕರ್ನಾಟಕ

karnataka

ETV Bharat / state

ಕಂತೆ ಕಂತೆ ಹಣ ನೋಡಿ ಬ್ಯಾಂಕ್ ಸಿಬ್ಬಂದಿಯೇ ಶಾಕ್: ಮುಂದೇನಾಯ್ತು? - ನಕಲಿ ಚೆಕ್

ಹಣ ಡಿಪಾಸಿಟ್ ಮಾಡಲು ಕಂತೆ ಕಂತೆ ಹಣದೊಂದಿಗೆ ಬ್ಯಾಂಕಿಗೆ ಬಂದ ಮೂವರು ಪೊಲೀಸರ ಅತಿಥಿಯಾಗಿರುವ ಪ್ರಕರಣವೊಂದು ನೆಲಮಂಗಲದಲ್ಲಿ ನಡೆದಿದೆ.

ಬ್ಯಾಂಕ್​ ಸಿಬ್ಬಂದಿ

By

Published : Jul 5, 2019, 12:59 PM IST

ನೆಲಮಂಗಲ:ಹಣ ಡಿಪಾಸಿಟ್ ಮಾಡಲು ಕಂತೆ ಕಂತೆ ಹಣ ತಂದಿದ್ದ ಮೂವರು ಪೊಲೀಸರ ಅತಿಥಿಯಾಗಿರುವ ಪ್ರಕರಣವೊಂದು ನಗರದಲ್ಲಿ ನಿನ್ನೆ ನಡೆದಿದೆ.

ನೆಲಮಂಗಲದ ಐಸಿಐಸಿಐ ಬ್ಯಾಂಕ್​ನಲ್ಲಿ 1 ಕೋಟಿ 90 ಲಕ್ಷ ರೂ. ಡಿಪಾಸಿಟ್ ಮಾಡಲು ನೋಂದಣಿ ಆಗದ ಸ್ಕೋಡಾ ಕಾರಿನಲ್ಲಿ ಬಂದ ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರುಪ್ರಸಾದ್ ಮತ್ತು ರಂಗಸ್ವಾಮಿ ಎಂಬುವನ್ನು ಬಂಧಿಸಿದ್ದು ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ.

ಕಂತೆ ಕಂತೆ ಹಣ ನೋಡಿದ ಬ್ಯಾಂಕ್​ ಸಿಬ್ಬಂದಿ ಅನುಮಾನ ಬಂದಿದ್ದರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದರು.ರಾಮಮೂರ್ತಿ ನಗರದ ಐಸಿಐಸಿಐ ಬ್ಯಾಂಕ್​ನಲ್ಲಿ ಟ್ರಸ್ಟ್​ವೊಂದರ ಹೆಸರಿನಲ್ಲಿದ್ದ ಈ ಹಣವನ್ನು ನಕಲಿ ಚೆಕ್ ಸೃಷ್ಟಿಸಿ ಲಪಟಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಬಂಧಿತ ಆರೋಪಿಗಳು

ಲಪಟಾಯಿಸಿದ ಹಣವನ್ನು ಅದೇ ಬ್ಯಾಂಕ್​ನಲ್ಲಿ ಜಮೆಗೂ ಮುಂದಾಗಿದ್ದರು. 1.20 ಕೋಟಿ ರೂ. ಖಾತೆಗೆ ಜಮೆ ಆಗಿದ್ದು, ಇನ್ನುಳಿದ ಬಾಕಿ ಹಣ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಬಗ್ಗೆ ನೆಲಮಂಗಲ ಟೌನ್ ಮತ್ತು ರಾಮಮೂರ್ತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ಮೂವರು ಆರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.

ಒಂದು ಕೋಟಿ 90 ಲಕ್ಷ ವಂಚನೆ ಪ್ರಕರಣ ಬಯಲು

ಮೂಲ ಖಾತೆದಾರನ ಮೊಬೈಲ್​ ಹ್ಯಾಕ್ ಮಾಡಿ ಈ ಪ್ರಮಾಣದ ಹಣವನ್ನು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹರಿಹರ ಮೂಲದ ಪರೀಕ್ಷಿತ್ ನಾಯ್ಡು, ಗುರು ಪ್ರಸಾದ್ ಹಾಗೂ ರಂಗಸ್ವಾಮಿ ಪೊಲೀಸ್ ವಶದಲ್ಲಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details