ಕರ್ನಾಟಕ

karnataka

ETV Bharat / state

ಅಕ್ಷಯ ಪಾತ್ರೆ ಸಂಸ್ಥೆಗೆ ಮೋಹನ್ ದಾಸ್ ಪೈ ರಾಜೀನಾಮೆ - Akshaya Patra Foundation

ಅಕ್ಷಯ ಪಾತ್ರೆ ಸಂಸ್ಥೆಯ ಕೆಲ ಮೂಲಗಳ ಮಾಹಿತಿ ಪ್ರಕಾರ, ಈ ಟ್ರಸ್ಟಿಗಳು ಹಾಗೂ ಸಂಸ್ಥೆಯ ಮಧ್ಯೆ ಕೆಲ ಭಿನ್ನಾಭಿಪ್ರಾಯವಿತ್ತು. ಹೀಗಾಗಿ ರಾಜೀನಾಮೆ ನೀಡಿದ್ದಾರೆ.

mohan-das-pai-resigns-from-akshaya-patra-foundation
ಅಕ್ಷಯ ಪಾತ್ರೆ ಸಂಸ್ಥೆಗೆ ಮೋಹನ್ ದಾಸ್ ಪೈ ರಾಜೀನಾಮೆ

By

Published : Nov 17, 2020, 2:56 AM IST

ಬೆಂಗಳೂರು:ಮಣಿಪಾಲ್ ಗ್ಲೋಬಲ್ ಎಜುಕೇಶನ್ ಸಂಸ್ಥೆ ಅಧ್ಯಕ್ಷ ಮೋಹನ್ ದಾಸ್ ಪೈ ಹಾಗೂ ಮೂವರು ಟ್ರಸ್ಟಿಗಳು ಅಕ್ಷಯ ಪಾತ್ರೆ ಸಂಸ್ಥೆಗೆ (TAPF) ರಾಜೀನಾಮೆ ನೀಡಿದ್ದಾರೆ.

ವಿ. ಬಾಲಕೃಷ್ಣ, ಮಣಿಪಾಲ ಆರೋಗ್ಯ ಸಂಸ್ಥೆಯ ಸಲಹೆಗಾರ ಅಭಯ್ ಜೈನ್ ಹಾಗೂ ಕ್ರಿಸ್ ಕ್ಯಾಪಿಟಲ್ ಸಹ ಸ್ಥಾಪಕ ರಾಜ್ ಕೊಂಡೂರ್ ಕೂಡ ರಾಜೀನಾಮೆ ನೀಡಿದ ಇತರೆ ಟ್ರಸ್ಟಿಗಳು ಎಂದು ತಿಳಿದುಬಂದಿದೆ.

ಅಕ್ಷಯ ಪಾತ್ರೆ ಸಂಸ್ಥೆಯ ಕೆಲ ಮೂಲಗಳ ಮಾಹಿತಿ ಪ್ರಕಾರ, ಈ ಟ್ರಸ್ಟಿಗಳು ಹಾಗೂ ಸಂಸ್ಥೆಯ ಮಧ್ಯೆ ಕೆಲ ಭಿನ್ನಾಭಿಪ್ರಾಯವಿತ್ತು. ಹೀಗಾಗಿ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಮೋಹನ್ ದಾಸ್ ಪೈ ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ಮುಂದಿನ ದಿನಗಳಲ್ಲಿ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

ಸಿಬಿಡಿಟಿ ಮಾಜಿ ಅಧ್ಯಕ್ಷ ಕೆ.ವಿ. ಚೌದ್ರಿ ಈಗ ಲೆಕ್ಕ ಪರಿಶೋಧನಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಪಿಡಬ್ಲ್ಯೂ ಸಂಸ್ಥೆ ಮಾಜಿ ಪಾಲುದಾರ ಕೌಶಿಕ್ ದತ್ತ ಲೆಕ್ಕ ಪರಿಶೋಧನಾ ಸಂಘದ ನೂತನ ಸದಸ್ಯರಾಗಿ ನೇಮಕವಾಗಿದ್ದಾರೆ.

ABOUT THE AUTHOR

...view details