ಕರ್ನಾಟಕ

karnataka

ETV Bharat / state

ಬಗೆದಷ್ಟು ಬಯಲಾಗ್ತಿದೆ ‌ಕೊಡಿಯೇರಿ ಬಾಲಕೃಷ್ಣ ಪುತ್ರನ ಮುಖವಾಡ! - ED Department of Investigation of Binesh Illegal Property

ಬಿನೀಶ್ ಅಕ್ರಮ ಆಸ್ತಿ ಹಾಗೂ ಡ್ರಗ್ಸ್​ ಡೀಲಿಂಗ್ ಕುರಿತು ಮನೆ ಶೋಧ ನಡೆಸಿದ ಇಡಿಗೆ ಈಗಾಗಲೇ ಡ್ರಗ್ಸ್​ ಕೇಸ್​ನಲ್ಲಿ ಬಂಧಿತನಾಗಿರುವ ಅನೂಪ್ ಹೆಸರಿನ ಡೆಬಿಟ್ ಕಾರ್ಡ್ ಪತ್ತೆಯಾಗಿದೆ. ಇದರಿಂದಾಗಿ ಇಬ್ಬರು ಲಕ್ಷಾಂತರ ರೂ. ಹಣವನ್ನು ಅಕ್ರಮವಾಗಿ ವಹಿವಾಟು ಮಾಡಿರುವ ಮಾಹಿತಿ ಸಿಕ್ಕಿದೆ ಎನ್ನಲಾಗ್ತಿದೆ.

Binesh
ಬಿನೀಶ್

By

Published : Nov 9, 2020, 12:39 PM IST

ಬೆಂಗಳೂರು:ಕೇರಳ ಮಾಜಿ ಸಚಿವ ‌ಕೊಡಿಯೇರಿ ಬಾಲಕೃಷ್ಣ ಪುತ್ರ ಬಿನೀಶ್ ಇಡಿ ವಶದಲ್ಲಿದ್ದು, ಕೊಡಿಯೇರಿ ಮನೆ ಬಳಿ ಇಡಿ ಅಧಿಕಾರಿಗಳು ಶೋಧ ನಡೆಸಿದ್ದರು. ಇಡಿ ಅಧಿಕಾರಿಗಳು ಶೋಧ ನಡೆಸುವ ವೇಳೆ ಈಗಾಗಲೇ ಡ್ರಗ್ಸ್​ ಕೇಸ್​ನಲ್ಲಿ ಬಂಧಿತನಾಗಿರುವ ಅನೂಪ್ ಹೆಸರಿನ ಡೆಬಿಟ್ ಕಾರ್ಡ್ ಪತ್ತೆಯಾಗಿದೆ ಎಂದು ಹೇಳಲಾಗ್ತಿದೆ.

ಇಡಿ ಅಧಿಕಾರಿಗಳು ಬಿನೀಶ್ ಅಕ್ರಮ ಆಸ್ತಿ ಹಾಗೂ ಡ್ರಗ್ಸ್​ ಡೀಲಿಂಗ್ ಹಣ ರವಾನೆ ಸಂಬಂಧಿಸಿದಂತೆ ತನಿಖೆ ನಡೆಸಿ ಬಂಧಿಸಿದ್ರು. ಹಾಗೆಯೇ, ಕೇರಳದಲ್ಲಿರುವ ಬಿನೀಶ್ ಮನೆಯಲ್ಲೂ ಶೋಧ ನಡೆಸಲಾಗಿತ್ತು. ‌ಈ ವೇಳೆ ಮೊಹಮ್ಮದ್ ಅನೂಪ್ ಹೆಸರಿನ ಡೆಬಿಟ್ ಕಾರ್ಡ್ ನಲ್ಲಿ ಬಿನೀಶ್ ಸಿಗ್ನೇಚರ್ ಇದ್ದು, ಇದರಿಂದಾಗಿ ಇಬ್ಬರು ಲಕ್ಷಾಂತರ ಹಣ ಅಕ್ರಮವಾಗಿ ವಹಿವಾಟು ಮಾಡಿರುವ ಮಾಹಿತಿ ಇಡಿಗೆ ಸಿಕ್ಕಿದೆ ಎನ್ನಲಾಗ್ತಿದೆ.

ಬಿನೀಶ್ ಕೊಡಿಯೇರಿ ಬೆಂಗಳೂರಿನಲ್ಲಿ ಎರಡು ಕಂಪನಿ‌ ಹಾಗೂ ಹೊರ ರಾಜ್ಯದಲ್ಲಿ 1ಶೆಲ್ ಕಂಪನಿ ಹೊಂದಿದ್ದಾರೆ. ಈ ಎಲ್ಲಾ ಕಂಪನಿಗಳ ಹೆಸರಿನಲ್ಲಿ ಡ್ರಗ್ಸ್​ ಡೀಲಿಂಗ್ ಹಣವನ್ನ ಕಂಪನಿಗಳ ಹೆಸರಿನಲ್ಲಿ ವರ್ಗಾವಣೆ ನಡೆಸಿರೋದು ಪತ್ತೆಯಾಗಿದೆ. ಸದ್ಯ ನಾಲ್ಕು ದಿನ ವಶಕ್ಕೆ ಪಡೆದಿರುವ ಇಡಿ ಮತ್ತೆ ಹಣ ವರ್ಗಾವಣೆ ತನಿಖೆ ಸಂಬಂಧ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಲಿದ್ದಾರೆ. ಇಡಿ ವಿಚಾರಣೆ ಬೆನ್ನಲ್ಲೇ ಎನ್​ಸಿಬಿ ಕೂಡ ವಶಕ್ಕೆ ಪಡೆಯಲು ನಿರ್ಧಾರ ಮಾಡಿದ್ದಾರೆ.

ಡ್ರಗ್ಸ್​ ಪೆಡ್ಲರ್ ಅನೂಪ್ ಜೊತೆ ಬಿನೀಶ್ ಹಲವಾರು ವಹಿವಾಟು ಮಾಡಿದ್ದಾರೆ. ನಗರದಲ್ಲಿ ಅನೂಪ್​ಗೆ​ ಹೋಟೆಲ್​ ಓಪನ್ ಮಾಡಲು ಇದೇ ಬಿನೇಶ್ ಲಕ್ಷಾಂತರ ಹಣ ನೀಡಿದ್ದ. ಬಾಣಸವಾಡಿ ಬಳಿ ಇರುವ ಈ ಹೋಟೆಲ್​ನಲ್ಲಿ ಹೈ ಫೈ ಪಾರ್ಟಿ ಹಾಗೂ ಡ್ರಗ್ಸ್​ ಪೂರೈಕೆ ಆಗುತ್ತಿತ್ತು. ಹೀಗಾಗಿ ಎನ್​ಸಿಬಿ ಅಧಿಕಾರಿಗಳು ಮೊಹಮ್ಮದ್ ಅನೂಪ್ ಬಂಧಿಸಿ ಬಿನೀಶ್​ನ ಅಕ್ರಮ ಹಣದ ಮಾಹಿತಿ ಇಡಿಗೆ ನೀಡಿದ್ರು ಎಂದು ತಿಳಿದುಬಂದಿದೆ.

ABOUT THE AUTHOR

...view details