ಬೆಂಗಳೂರು:ಭಾರತ ಕೈಗೊಂಡಿರುವ ಚಂದ್ರಯಾನ-2 ಯೋಜನೆಯ ವಿಕ್ರಂ ಲ್ಯಾಂಡರ್ ನೌಕೆ ಇಂದು ಚಂದ್ರನ ಮೇಲೆ ಕಾಲಿಡುವ ಕ್ಷಣವನ್ನು ವೀಕ್ಷಿಸಲು ಪ್ರಧಾನಿ ಮೋದಿ ಪೀಣ್ಯಾದಲ್ಲಿರುವ ಇಸ್ರೋ ಸೆಂಟರ್ಗೆ ಇಂದು ರಾತ್ರಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಗೆ ಪುಲ್ ಟೈಟ್ ಸೆಕ್ಯುರಿಟಿ ನೀಡಲಾಗಿದೆ.
ಬೆಂಗಳೂರಿಗೆ ಇಂದು ಪ್ರಧಾನಿ ಮೋದಿ ಆಗಮನ.. ಸಿಲಿಕಾನ್ ಸಿಟಿಗೆ ಟೈಟ್ ಸೆಕ್ಯುರಿಟಿ - ಟೈಟ್ ಸೆಕ್ಯುರಿಟಿಯಲ್ಲಿ ಸಿಲಿಕಾನ್ ಸಿಟಿ
ಬೆಂಗಳೂರಿಗೆ ಇಂದು ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನಲೆ ಯಲಹಂಕ ವಾಯುನೆಲೆ, ಇಸ್ರೋ ಸೆಂಟರ್ ಬಳಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರಾದ ಎಸ್.ಮುರುಗನ್, ಉಮೇಶ್ ನೇತೃತ್ವದಲ್ಲಿ 6 ಡಿಸಿಪಿ ಮೂವರು ಟ್ರಾಫಿಕ್ ಡಿಸಿಪಿ, ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಬೆಂಗಳೂರು ಉತ್ತರ ವಿಭಾಗ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನೀಡಲಾಗಿದೆ. ಯಲಹಂಕ ವಾಯುನೆಲೆ, ಹೋಟೆಲ್, ಇಸ್ರೋ ಸೆಂಟರ್ ಬಳಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರಾದ ಎಸ್. ಮುರುಗನ್, ಉಮೇಶ್ ನೇತೃತ್ವದಲ್ಲಿ 6 ಡಿಸಿಪಿ, ಮೂವರು ಟ್ರಾಫಿಕ್ ಡಿಸಿಪಿ, ಇನ್ಸ್ಪೆಕ್ಟರ್ಗಳು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.
ಯಲಹಂಕ ವಾಯನೆಲೆಯಿಂದ ಇಸ್ರೋ ಸೆಂಟರ್ವರೆಗೂ ಮೋದಿ ರಸ್ತೆ ಮಾರ್ಗವಾಗಿ ತೆರಳಲಿದ್ದಾರೆ. ಹೀಗಾಗಿ ಆ ಮಾರ್ಗದ ಫುಟ್‌ಬಾತ್, ಸ್ಥಳೀಯ ಅಂಗಡಿ ಮುಂಗಟ್ಟುಗಳ ಬಳಿ ಸಂಜೆ ವೇಳೆ ಗುಂಪು ಸೇರದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಹಾಗೆ ಅನುಮಾನಾಸ್ಪದವಾಗಿ ಯಾರಾದರೂ ಕಂಡು ಬಂದರೆ ತಕ್ಷಣ ವಶಕ್ಕೆಪಡೆಯಲಿದ್ದಾರೆ.