ಕರ್ನಾಟಕ

karnataka

ETV Bharat / state

ಬೆಂಗಳೂರಲ್ಲಿ ಇಂದು ಪ್ರಧಾನಿ ಮೋದಿ ರೋಡ್ ಶೋ : 34 ರಸ್ತೆಗಳು ಬಂದ್ - ​ ಈಟಿವಿ ಭಾರತ್​ ಕರ್ನಾಟಕ

ರಾಜಧಾನಿ ಬೆಂಗಳೂರಿನಲ್ಲಿ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ರೋಡ್ ಶೋ ನಡೆಸಲಿದ್ದಾರೆ.

ಮೋದಿ ರೋಡ್ ಶೋ
ಮೋದಿ ರೋಡ್ ಶೋ

By

Published : May 5, 2023, 7:58 PM IST

Updated : May 6, 2023, 6:34 AM IST

ಬೆಂಗಳೂರು :ವಿಧಾನಸಭಾ ಚುನಾವಣೆ ಹಿನ್ನೆಲೆಯ ರಾಜಕೀಯ ಪಕ್ಷಗಳು ಪ್ರಚಾರ ಕಾರ್ಯ ಬಿರುಸುಗೊಳಿಸಿದ್ದು, ಮತದಾರರನ್ನು ಸೆಳೆಯಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ರಾಜಧಾನಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಪ್ರಧಾನಿ ಮೋದಿ ಆಗಮನದ ವೇಳೆ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯವಾಗಲಿದ್ದು, ಸಂಚಾರ ಪೊಲೀಸರು ಪರ್ಯಾಯ ಮಾರ್ಗ ಬಳಸುವಂತೆ ಮನವಿ ಮಾಡಿದ್ದಾರೆ.

ನಗರದಲ್ಲಿ ಪ್ರಧಾನಿ ಮೋದಿ ಜೆಪಿ ನಗರದ ಬ್ರಿಗೇಡ್ ಮಿಲೇನಿಯಂನಿಂದ ಸರ್ಕಲ್ ಮಾರಮ್ಮ ದೇವಸ್ಥಾನದವರೆಗೆ ಅಂದರೆ ಬರೋಬ್ಬರಿ 26 ಕಿ.ಮೀ. ರೋಡ್ ಶೋ ನಡೆಸಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ಇದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಣಮಿಸಿದೆ. ಅಹಿತಕರ ಘಟನೆ ನಡೆಯದಂತೆ ಖಾಕಿ ಹದ್ದಿನ ಕಣ್ಣಿಟ್ಟಿದ್ದಾರೆ. ಇದು ಒಂದು ಕಡೆ ಆದರೇ ಮೋದಿ ಮೆಗಾ ಶೋ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಆಗುವ ಹಿನ್ನೆಲೆಯಲ್ಲಿ ಪೊಲೀಸರು ಅನ್ಯ ಮಾರ್ಗ ಬಳಸುವಂತೆ ಕೋರಿದ್ದಾರೆ.

ಪ್ರಧಾನಿ ಮೋದಿ ಜೆ.ಪಿ. ನಗರ ಬ್ರಿಗೇಡ್ ಮಿಲೇನಿಯಂನಿಂದ ಸಾರಕ್ಕಿ ಜಂಕ್ಷನ್, ಸೌತ್ ಎಂಡ್ ಸರ್ಕಲ್, ಕೃಷ್ಣರಾವ್ ಪಾರ್ಕ್, ರಾಮಕೃಷ್ಣ ಆಶ್ರಮ, ಮಕ್ಕಳ ಕೂಟ, ಟೌನ್ ಹಾಲ್, ಕಾವೇರಿ ಭವನ, ಮೆಜೆಸ್ಟಿಕ್, ಮಾಗಡಿ ರೋಡ್, GT ವರ್ಲ್ಡ್ ಮಾಲ್, ಹೌಸಿಂಗ್ ಬೋರ್ಡ್, ಬಸವೇಶ್ವರ ನಗರ, ಶಂಕರ ಮಠ ಸರ್ಕಲ್, ಮೋದಿ ಆಸ್ಪತ್ರೆ ರಸ್ತೆ, ನವರಂಗ್ ಸರ್ಕಲ್, ಮಹಾಕವಿ ಕುವೆಂಪು ರಸ್ತೆ, ಮಲ್ಲೇಶ್ವರಂ ಸರ್ಕಲ್, ಸಂಪಿಗೆ ರಸ್ತೆ ಮಾರ್ಗವಾಗಿ ಸರ್ಕಲ್ ಮಾರಮ್ಮ ಟೆಂಪಲ್​​​ವರೆಗೆ ರ‍್ಯಾಲಿ ನಡೆಸಲಿದ್ದು, ಹೆಚ್ಚಿನ ಭದ್ರತೆಗಾಗಿ ತಮಿಳುನಾಡು, ಆಂಧ್ರ ಪೊಲೀಸರು ಸೇರಿದಂತೆ 10 ಸಾವಿರಕ್ಕೂ ಅಧಿಕ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನ ನಿಯೋಜನೆ ಮಾಡಿಕೊಳ್ಳಲಾಗಿದೆ.

ಈ ಹಿನ್ನೆಲೆ ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ 34 ರಸ್ತೆಗಳನ್ನು ಬಂದ್ ಮಾಡಲಿದ್ದು, ಪರ್ಯಾಯ ರಸ್ತೆ ಉಪಯೋಗಿಸುವಂತೆ ಬೆಂಗಳೂರು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ. ಹಾಗಾದರೆ ಯಾವೆಲ್ಲ ರಸ್ತೆ ಬಂದ್ ಇರಲಿದೆ ಗೊತ್ತಾ ?

ರಾಜಭವನ ರಸ್ತೆ, ಮಾಗಡಿ ಮುಖ್ಯರಸ್ತೆ, ರಮಣಮಹರ್ಷಿ ರಸ್ತೆ, ಚೋಳೂರುಪಾಳ್ಯ ವೃತ್ತ, ರ್.ಬಿ.ಐ ಲೇಔಟ್, ಜೆ.ಪಿನಗರ, ಗಾರ್ಡನ್, ಜೆ.ಪಿ ನಗರ, ಎಂ.ಸಿ.ವೃತ್ತ, ಪಶ್ಚಿಮ ಕಾರ್ಡ್ ರಸ್ತೆ, ಎಂ.ಸಿ ಲೇಔಟ್, ನಾಗರಭಾವಿ ಮುಖ್ಯರಸ್ತೆ, ಶಿರ್ಸಿ ವೃತ್ತ, ಬಿ.ಜಿ.ಎಸ್ ಮೈದಾನ, ಜೆ.ಜೆ ನಗರ, ಹಾವನೂರು ವೃತ್ತ, ಬಿನ್ನಿ ಮಿಲ್ ರಸ್ತೆ, 8ನೇ ಮುಖ್ಯರಸ್ತೆ, ಬಸವೇಶ್ವರನಗರ, ಶಾಲಿನಿ ಮೈದಾನ, ಬಸವೇಶ್ವರನಗರ 15 ನೇ ಮುಖ್ಯರಸ್ತೆ, ಸೌತ್ ಎಂಡ್ ವೃತ್ತ, ಶಂಕರಮಠ, ಆರ್ಮುಗಂ ವೃತ್ತ, ಮೋದಿ ಆಸ್ಪತ್ರೆ ರಸ್ತೆ, ಬುಲ್ ಟೆಂಪಲ್ ರಸ್ತೆ, ನವರಂಗ್ ವೃತ್ತ, ರಾಮಕೃಷ್ಣಾಶ್ರಮ ಉಮಾ ಟಾಕೀಸ್, ಎಂ.ಕೆ.ಕೆ. ರಸ್ತೆ ಟಿ.ಆರ್ ಮಿಲ್, ಮಲ್ಲೇಶ್ವರಂ ವೃತ್ತ ಸಂಪಿಗೆ ರಸ್ತೆ, ಚಾಮರಾಜಪೇಟೆ ಮುಖ್ಯರಸ್ತೆ ಬಾಳೇಕಾಯಿ ಮಂಡಿ, ಸ್ಯಾಂಕಿ ರಸ್ತೆ, ಕೆ.ಪಿ. ಅಗ್ರಹಾರ ರಸ್ತೆಗಳಲ್ಲಿ ಬೆಳಗ್ಗೆ 8 ರಿಂದ 1 ಗಂಟೆವರೆಗೆ ಸುಗಮ ಸಂಚಾರದಲ್ಲಿ ಅಸ್ಯವಸ್ತವಾಗಲಿದ್ದು, ಪರ್ಯಾಯ ಮಾರ್ಗ ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಇದನ್ನೂ ಓದಿ :ಮೇ‌ 7 ರಂದು ಮೈಸೂರಿಗೆ ಪ್ರಧಾನಿ ಮೋದಿ ಆಗಮನ: ಮೈ ವಿ ರವಿಶಂಕರ್

ರೋಡ್ ಶೋ ಮಿನಿಟ್ ಟು ಮಿನಿಟ್ ಪ್ರೋಗ್ರಾಂ:ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12.30ರವರೆಗೆ ಬೆಂಗಳೂರು ದಕ್ಷಿಣದ ಸೋಮೇಶ್ವರ ಭವನ ಆರ್​​ಬಿಐ ಮೈದಾನದಿಂದ ಮಲ್ಲೇಶ್ವರದ ಸ್ಯಾಂಕಿ ಟ್ಯಾಂಕ್​ವರೆಗೆ 26.5 ಕಿ.ಮೀ ರೋಡ್ ಶೋ ನಡೆಸುತ್ತಾರೆ. ಭಾನುವಾರ ಬೆಳಿಗ್ಗೆ 10ರಿಂದ ತಿಪ್ಪಸಂದ್ರದ ಕೆಂಪೇಗೌಡ ಪ್ರತಿಮೆಯಿಂದ ಟ್ರಿನಿಟಿ ವೃತ್ತದ ವರೆಗೆ 8 ಕಿ.ಮೀ ರೋಡ್ ಶೋ ನಡೆಯಲಿದೆ.

ರೋಡ್ ಶೋ ವಿವರ:

10.00 ಬೆಳಗ್ಗೆ - ಸೋಮೇಶ್ವರ ಸಭಾ ಭವನ

10.10 - ಜೆಪಿ ನಗರ 5ನೇ ಹಂತ

10.20 - ಜಯನಗರ 5ನೇ ಬ್ಲಾಕ್

10.30 - ಜಯನಗರ 4ನೇ ಬ್ಲಾಕ್

10.40 - ಸೌತ್ ಎಂಡ್ ಸರ್ಕಲ್

10.45 - ಮಾಧವರಾವ್ ವೃತ್ತ

11.00 - ರಾಮಕೃಷ್ಣ ಆಶ್ರಮ

11.05 - ಉಮಾ ಥಿಯೇಟರ್ ಸಿಗ್ನಲ್

11.15 - ಮೈಸೂರು ಸಿಗ್ನಲ್

11.25 - ಟೋಲ್ ಗೇಟ್ ಸಿಗ್ನಲ್

11.35 - ಗೋವಿಂದರಾಜನಗರ

11.45 - ಮಾಗಡಿ ರೋಡ್ ಜಂಕ್ಷನ್

12.00 - ಶಂಕರಮಠ ಚೌಕ

12.20 - ಮಲ್ಲೇಶ್ವರ ವೃತ್ತ

12.30 - ಸಂಪಿಗೆ ರಸ್ತೆ 18ನೇ ಅಡ್ಡ ರಸ್ತೆ ಜಂಕ್ಷನ್

Last Updated : May 6, 2023, 6:34 AM IST

ABOUT THE AUTHOR

...view details