ಬೆಂಗಳೂರು: ರಾಜ್ಯ ವಿಧಾನಸಭಾ ಉಪ ಚುನಾವಣಾ ಫಲಿತಾಂಶಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದು, ರಾಜ್ಯದ ಬಿಜೆಪಿ ಸಂಸದರನ್ನು ನಿಲ್ಲಿಸಿಕೊಂಡು ಇತರ ರಾಜ್ಯದ ಸಂಸದರಿಂದ ಚಪ್ಪಾಳೆ ತಟ್ಟಿಸಿ ಅಭಿನಂದಿಸಿದ್ದಾರೆ.
’ತಾಲಿಯಾ ಫ್ರೆಂಡ್ಸ್ ತಾಲಿಯಾ’: ಉಪ ಸಮರ ಫಲಿತಾಂಶಕ್ಕೆ ಮೋದಿ ಫುಲ್ ಖುಷ್! - Narendra Modi happy to win by-election
ಉಪಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದು, ಯಡಿಯೂರಪ್ಪ ಗವರ್ನಮೆಂಟ್ ಸಸ್ಟೇನ್. ವಂಡರ್ ಫುಲ್ ಮಾರ್ಜಿನ್ ವಿನ್ನಿಂಗ್, ತಾಲಿಯಾ ಫ್ರೆಂಡ್ಸ್ ತಾಲಿಯಾ ಎಂದು ಸಂಸದರಿಂದ ಚಪ್ಪಾಳೆ ತಟ್ಟಿಸಿದ್ದಾರೆ.
![’ತಾಲಿಯಾ ಫ್ರೆಂಡ್ಸ್ ತಾಲಿಯಾ’: ಉಪ ಸಮರ ಫಲಿತಾಂಶಕ್ಕೆ ಮೋದಿ ಫುಲ್ ಖುಷ್! Modi happy for BJP's victory in state by-election](https://etvbharatimages.akamaized.net/etvbharat/prod-images/768-512-5336362-thumbnail-3x2-hrs.jpg)
ಉಪ ಸಮರ ಫಲಿತಾಂಶಕ್ಕೆ ಮೋದಿ ಫುಲ್ ಖುಷ್!
ಸಂಸತ್ತಿನ ಪ್ರಧಾನ ಮಂತ್ರಿ ಕಚೇರಿಯಲ್ಲಿ ಕರ್ನಾಟಕದ ಸಂಸದರನ್ನು ಕರೆಸಿದ ಪ್ರಧಾನಿ ಮೋದಿ, ಉಪಚುನಾವಣೆ ಗೆಲುವಿಗೆ ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಯಡಿಯೂರಪ್ಪ ಗವರ್ನಮೆಂಟ್ ಸಸ್ಟೇನ್. ವಂಡರ್ ಫುಲ್ ಮಾರ್ಜಿನ್ ವಿನ್ನಿಂಗ್, ತಾಲಿಯಾ ಫ್ರೆಂಡ್ಸ್ ತಾಲಿಯಾ ಎಂದು ಸಂಸದರಿಂದ ಚಪ್ಪಾಳೆ ಹೊಡೆಸಿದ್ದಾರೆ.
ರಾಜ್ಯದ ಬಿಜೆಪಿ ಸಂಸದರನ್ನು ಎದ್ದು ನಿಲ್ಲಿಸಿ ಇತರ ರಾಜ್ಯದ ಬಿಜೆಪಿ ಸಂಸದರಿಂದ ಚಪ್ಪಾಳೆ ಹೊಡೆಸಿದ ಮೋದಿ, ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಸಿಎಂ ಬಿಎಸ್ವೈಗೆ ಆಪ್ತ ಸಂಸದರೊಬ್ಬರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ಯಡಿಯೂರಪ್ಪ ಮುಖದಲ್ಲೂ ಮಂದಹಾಸ ಮೂಡುವಂತೆ ಮಾಡಿದೆ.