ಕರ್ನಾಟಕ

karnataka

ETV Bharat / state

ಅಗ್ನಿಪಥ್‌ ವಯೋಮಿತಿ ಹೆಚ್ಚಳ: 'ಜನರ ಅಗತ್ಯತೆಗಳಿಗೆ ಮೋದಿ ಸರ್ಕಾರ ಸ್ಪಂದಿಸುತ್ತಿದೆ'- ಸಿಎಂ - ಜನರ ಅಗತ್ಯಗಳಿಗೆ ಮೋದಿ ಸರ್ಕಾರ ಸ್ಪಂದಿಸುತ್ತಿದೆ ಎಂದ ಬೊಮ್ಮಾಯಿ

ತಾಯ್ನಾಡಿನ ಸೇವೆಯ ಪಥದಲ್ಲಿ ಯುವಕರು ಯಶಸ್ವಿಯಾಗಿ ನಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ಸಿಎಂ ಬೊಮ್ಮಾಯಿ ಅಗ್ನಿಪಥ್​ ಯೋಜನೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಗ್ನಿಪಥ್​ ವಯೋಮಿತಿ 23 ಕ್ಕೆ ಏರಿಕೆ
ಅಗ್ನಿಪಥ್​ ವಯೋಮಿತಿ 23 ಕ್ಕೆ ಏರಿಕೆ

By

Published : Jun 17, 2022, 4:03 PM IST

ಬೆಂಗಳೂರು: ಅಗ್ನಿಪಥ್​ ಯೋಜನೆಯಡಿ ವಯೋಮಿತಿಯನ್ನು 21 ರಿಂದ 23 ಕ್ಕೇರಿಸುವ ಮೂಲಕ ಮೋದಿ ಸರ್ಕಾರವು ಜನರ ಅಗತ್ಯಗಳಿಗೆ ಸ್ಪಂದಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ರಕ್ಷಣಾ ಪಡೆಗಳಿಗೆ ನೇಮಕಾತಿ ನಡೆದಿರಲಿಲ್ಲ. ಮೊದಲ ವರ್ಷದ ನೇಮಕಾತಿಯಲ್ಲಿ ವಯೋಮಿತಿಯನ್ನು ಮೋದಿಯವರು ಹೆಚ್ಚಿಸಿದ್ದಾರೆ. ಈ ನಿರ್ಧಾರದಿಂದ ದೊಡ್ಡ ಸಂಖ್ಯೆಯಲ್ಲಿ ಯುವ ಜನರಿಗೆ ಪ್ರಯೋಜನವಾಗಲಿದೆ. ತಾಯ್ನಾಡಿನ ಸೇವೆಯ ಪಥದಲ್ಲಿ ಯಶಸ್ವಿಯಾಗಿ ನಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಯೋಜನೆಯ ಹಿನ್ನೆಲೆಯಲ್ಲಿ ದೇಶದ ಯುವಜನರ ಪರವಾಗಿ ಪ್ರಧಾನಮಂತ್ರಿಗಳಿಗೆ ಟ್ವೀಟ್ ಮೂಲಕ ಸಿಎಂ ಧನ್ಯವಾದ ಅರ್ಪಿಸಿದ್ದಾರೆ.

ಇದನ್ನೂ ಓದಿ: ಈದ್ಗಾ ಮೈದಾನ ವಿವಾದ: ಬಿಬಿಎಂಪಿಗೆ ದಾಖಲೆ ಸಲ್ಲಿಸದ ವಕ್ಫ್ ಬೋರ್ಡ್

ABOUT THE AUTHOR

...view details