ಕರ್ನಾಟಕ

karnataka

ETV Bharat / state

ಹಿಟ್ಲರ್‌ಗಿಂತ ಮೋದಿ ಒಂದು ಕೈ ಮುಂದಿದ್ದಾರೆ: ರಾಮಲಿಂಗರೆಡ್ಡಿ - congress protest against rahul gandhi

ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ಇದೆ. ಸರ್ಕಾರದ ವಿರುದ್ಧ ಯಾರಾದರೂ ಮಾತನಾಡಿದರೆ ಅವರ ವಿರುದ್ಧ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಆರೋಪಿಸಿದರು.

modi-acting-like-hitler-says-ramalinga-reddy
ಹಿಟ್ಲರ್ ಗಿಂತ ಮೋದಿ ಒಂದು ಕೈ ಮುಂದೇನೆ ಇದ್ದಾರೆ: ರಾಮಲಿಂಗರೆಡ್ಡಿ

By

Published : Jun 15, 2022, 6:20 PM IST

ಬೆಂಗಳೂರು: ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ವೋ ಎಂಬುದು ಗೊತಾಗುತ್ತಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಪ್ರಧಾನಿ ಮೋದಿ ಅಧಿಕಾರಕ್ಕೆ ಬಂದ ನಂತರ ಜಾರಿ ನಿರ್ದೇಶನಾಲಯ, ಸಿಬಿಐ ಹಾಗೂ ಐಟಿ ಸ್ವಾಯುತ್ತ ತನಿಖಾ ಸಂಸ್ಥೆಗಳನ್ನು ತನ್ನ ಕೈಗೊಂಬೆಯಾಗಿ ಮಾಡಿಕೊಂಡಿದ್ದಾರೆ. ನ್ಯಾಷನಲ್ ಹೆರಾಲ್ಡ್ ಕೇಸ್ ಮುಗಿದಿತ್ತು. ಆದ್ರೂ ಈ ಕೇಸನ್ನು ಇಡಿಗೆ ನೀಡಿದ್ದಾರೆ. ಮೋದಿ ಹಾಗೂ ಶಾ ಹೇಳಿದ ಹಾಗೆ ಇಡಿ ಅಧಿಕಾರಿಗಳು ಕುಣಿಯುತ್ತಿದ್ದಾರೆ ಎಂದು ಟೀಕಿಸಿದರು.


ನಿನ್ನೆ ನಮ್ಮ ನಾಯಕರಾದ ಡಿಕೆ ಸುರೇಶ್, ಎಚ್.ಕೆ.ಪಾಟೀಲ, ದಿನೇಶ್ ಗುಂಡೂರಾವ್ ಸೇರಿದಂತೆ ಅನೇಕರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಹಿಟ್ಲರ್‌ಗಿಂತ ಮೋದಿ ಒಂದು ಕೈ ಮುಂದೇನೆ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. ಪ್ರತಿಭಟನೆ ಮಾಡುತ್ತಿದ್ದ ಕೆ.ಸಿ‌.ವೇಣುಗೋಪಾಲ ಅವರ ಬಟ್ಟೆಯನ್ನು ಪೊಲೀಸರು ಹರಿದು ಹಾಕಿದ್ದಾರೆ. ಸರ್ಕಾರದ ಅನುಮತಿ ಇಲ್ಲದೇ ಪೊಲೀಸರು ಈ ರೀತಿ ವರ್ತಿಸುತ್ತಾರಾ? ಇದೊಂದು ಸರ್ವಾಧಿಕಾರಿ ಧೋರಣೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸಿಎಂ ಸಿಟಿ ರೌಂಡ್ಸ್ ಕುರಿತು ಮಾತನಾಡಿದ ರಾಮಲಿಂಗರೆಡ್ಡಿ, ಬಿಬಿಎಂಪಿ‌ ಚುನಾವಣೆ ಹತ್ತಿರ ಬರ್ತಿದೆ. ಹಾಗಾಗಿ‌ ಸಿಎಂ ರೌಂಡ್ಸ್ ಹೊಡೆಯುತ್ತಿದ್ದಾರೆ ಎಂದರು.

ಇದನ್ನೂ ಓದಿ:ವಾಯುವ್ಯ ಶಿಕ್ಷಕರ ಕ್ಷೇತ್ರದ ಮತ‌ ಎಣಿಕೆ: 2ನೇ ಸುತ್ತಿನಲ್ಲೂ ಹುಕ್ಕೇರಿ ಮುನ್ನಡೆ

For All Latest Updates

TAGGED:

ABOUT THE AUTHOR

...view details