ಬೆಂಗಳೂರು :ನಗರದಲ್ಲಿ ಈಗಾಗಲೇ ಹೊಸ ತ್ಯಾಜ್ಯದ ಟೆಂಡರ್ ಕೆಲ ವಾರ್ಡ್‌ಗಳಲ್ಲಿ ಜಾರಿಯಾಗಿದೆ. ಗೋವಿಂದರಾಜನಗರ ವಾರ್ಡ್‌ನ ತ್ಯಾಜ್ಯ ನೈರ್ಮಲ್ಯಕ್ಕೆ ಮಾದರಿ ವಾರ್ಡಾಗಿ ಆಯ್ಕೆ ಮಾಡಲಾಗಿದೆ.
ಮೂರು ವಿಭಾಗಗಳಾದ ಹಸಿ, ಒಣ ಮತ್ತು ನೈರ್ಮಲ್ಯ ಕಸ ಪ್ರತ್ಯೇಕಿಸಿ, ಸಂಗ್ರಹ ಮಾಡಿ, ಸಾಗಣೆ ಮಾಡಲಾಗುತ್ತದೆ. ಮುಚ್ಚಲ್ಪಟ್ಟ ಕಸ ಸಂಗ್ರಹಣೆ ವಾಹನಗಳಲ್ಲಿ ಕಸ ಸಾಗಾಣಿಕೆ ಮಾಡಲಾಗುತ್ತದೆ. ಪ್ರತಿ ವಾಹನಕ್ಕೂ ಜಿಪಿಎಸ್, ಸಾರ್ವಜನಿಕರ ವಿಳಾಸ ಹಾಗೂ ಬ್ಲಾಕ್ ನಂಬರ್ಗಳನ್ನು ಆಟೋ ಟಿಪ್ಪರ್ಗಳಲ್ಲಿ ನಮೂದಿಸಲಾಗಿದೆ.
ಕಸ ನೈರ್ಮಲ್ಯಕ್ಕೆ ಮಾದರಿ ವಾರ್ಡ್ ವಾರ್ಡ್ನಲ್ಲಿರುವ ಎಲ್ಲಾ 12 ಬ್ಲಾಕ್ಗಳಿಂದ ನಿಗದಿತ ಸಮಯದಲ್ಲಿ ಕಸ ಸಂಗ್ರಹಣೆ, ಪ್ರತಿ ದಿನ ಹಸಿ ಕಸ, ವಾರದಲ್ಲಿ ಎರಡು ದಿನ ಒಣ ಕಸ ಸಂಗ್ರಹ ಮಾಡಲಾಗುತ್ತದೆ. ಮೂರು ತಿಂಗಳು ಸಮಯಾವಕಾಶ ನಿಗದಿ ಮಾಡಿದ್ದು, ಅಷ್ಟರಲ್ಲಿ ಶೇ.100ರಷ್ಟು ಕಸ ವಿಭಜನೆ ಹಾಗೂ ಬ್ಲಾಕ್ ಸ್ಪಾಟ್ ಮುಕ್ತ ಮಾಡಲು ಗಡುವು ನೀಡಲಾಗಿದೆ.
ಕಸ ನೈರ್ಮಲ್ಯಕ್ಕೆ ಮಾದರಿ ವಾರ್ಡ್ ಆಟೋ ಟಿಪ್ಪರ್ ಚಾಲಕರು, ಸಹಾಯಕರಿಗೆ ಸಮವಸ್ತ್ರ, ಸಮಯಕ್ಕೆ ಸರಿಯಾಗಿ ಪಾವತಿ ಮಾಡಲಾಗುತ್ತದೆ. ಕಸ ವಿಂಗಡಿಸಿ ಕೊಡದಿದ್ದರೆ, ಕಿರಿಯ ಆರೋಗ್ಯ ಪರಿಶೀಲಕರು ಮತ್ತು ಮಾರ್ಷಲ್ಗಳು ದಂಡ ವಿಧಿಸುತ್ತಾರೆ. ಪ್ಲಾಸ್ಟಿಕ್ ಬಳಸಿದ್ರೆ ದಂಡ ಹಾಕುವುದನ್ನೂ ಕಟ್ಟುನಿಟ್ಟಾಗಿ ಮಾಡಲಾಗಿದೆ.
ಕಸ ನೈರ್ಮಲ್ಯಕ್ಕೆ ಮಾದರಿ ವಾರ್ಡ್ ಇಂದು ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್, ಗೋವಿಂದರಾಜನಗರ ವಾರ್ಡ್ಗೆ ಭೇಟಿ ಮಾಡಿ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ಮಾರ್ಗಸೂಚಿ ನೀಡಿದರು.