ಕರ್ನಾಟಕ

karnataka

ETV Bharat / state

'ಮೊದಲಸಲ' ಎಂಗೇಜ್​ ಆದ 'ಶೈಲೂ'... ಮುದ್ದು ಮೊಗದ ಚೆಲುವೆ ಕೈ ಹಿಡಿವ ಲಕ್ಕಿ ಹುಡುಗ ಯಾರು? - ಮೊದಲ ಸಲಾ ಚಿತ್ರದ ನಟಿ ಭಾಮಾ

ಮೊದಲ ಸಲಾ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಮುದ್ದು ಮೊಗದ ಚಲುವೆ ಭಾಮಾ ನಿಶ್ಚಿತಾರ್ಥ ಮುಗಿದಿದ್ದು, ಮದುವೆ ದಿನಾಂಕ ಗೊತ್ತಾಗಿದೆ.

Modala sala movie actress Bhama marrige fixed
ಮುದ್ದು ಮೊಗದ 'ಮೊದಲ ಸಲ'ದ ಬೆಡಗಿಗೆ ಮದುವೆಯಂತೆ..!

By

Published : Jan 23, 2020, 12:30 PM IST

ಮೊದಲಾ ಸಲ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಮುದ್ದು ಮೊಗದ ಚಲುವೆ ಭಾಮಾ ನಿಶ್ಚಿತಾರ್ಥ ಮುಗಿದಿದ್ದು, ಮದುವೆ ದಿನಾಂಕ ಗೊತ್ತಾಗಿದೆ.

ಮುದ್ದು ಮೊಗದ 'ಮೊದಲ ಸಲ'ದ ಬೆಡಗಿಗೆ ಮದುವೆಯಂತೆ..!

ಕೇರಳ ಮೂಲದ ನಟಿ ಭಾಮಾ, ಅರುಣ್​ ಎಂಬ ತನ್ನ ಬಾಲ್ಯದ ಸ್ನೇಹಿತನೊಂದಿಗೆ ಎಂಗೇಜ್​ ಆಗಿದ್ದಾರೆ. ಅರುಣ್​ ಕೂಡ ಕೇರಳದ ಚೆನ್ನಿಥಾಳ ಆಳಪ್ಪುಳದವರು. ಆದರೆ, ಕೆನಡಾದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದಾರೆ. ಉತ್ತಮ ನೌಕರಿಯಲ್ಲಿ ಸಹ ಇದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ಸಮಾರಂಭ ಜನವರಿ 21ರಂದು ಕೊಚ್ಚಿಯಲ್ಲಿ ಸ್ನೇಹಿತರು ಮತ್ತು ಬಂದು ಬಳಗದವರ ಸಮ್ಮುಖದಲ್ಲಿ ನಡೆದಿದ್ದು, ಇದೇ ವರ್ಷ ಹಸೆಮಣೆ ಏರಲಿದ್ದಾರೆ.

ಮಲಯಾಳಂ ನಟಿ ಭಾಮಾ, ಸಹಜ ನಟನೆಗೆ ಹೆಸರಾದವರು. ಯಶ್​, ಗಣೇಶ್, ಯೋಗೀಶ್, ಪ್ರಜ್ವಲ್, ದಿಗಂತ್ ನಾಯಕರುಗಳ ಜೊತೆ ಶೈಲೂ, ಆಟೋ ರಾಜ, ಲೂಸ್ ಮಾದ, ಅಂಬರ, ಅರ್ಜುನ್, ಬರ್ಫಿ ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿ ಮನೆ ಮಾತಾಗಿದ್ದರು. ಆದರೆ, ಕಳೆದ 3 ವರ್ಷಗಳಿಂದ ಯಾವುದೇ ಕನ್ನಡ ಸಿನಿಮಾ ಒಪ್ಪಿಕೊಂಡಿರಲಿಲ್ಲ.

ABOUT THE AUTHOR

...view details