ಬೆಂಗಳೂರು : ರಾಷ್ಟ್ರಪತಿ ಚುನಾವಣೆಯಲ್ಲಿ ಬಿಜೆಪಿ ಮತ ಅಸಿಂಧುವಾಗಬಾರದು ಎಂದು ಇಡೀ ದೇಶದಲ್ಲಿ ಅಣಕು ಮತದಾನವನ್ನು ಏರ್ಪಡಿಸಿ ಬಿಜೆಪಿಯಿಂದ ತರಬೇತಿ ನೀಡಲಾಗುತ್ತಿದ್ದು, ರಾಜ್ಯದಲ್ಲಿ ನಡೆದ ತರಬೇತಿ ಕಾರ್ಯಾಗಾರಕ್ಕೆ ಪೂರ್ವಾನುಮತಿಯೊಂದಿಗೆ ಏಳು ಶಾಸಕರು ಗೈರಾಗಿದ್ದಾರೆ.
ಮತದಾನ ತರಬೇತಿ ಕಾರ್ಯಾಗಾರಕ್ಕೆ ಏಳು ಶಾಸಕರ ಗೈರು: ಮುರ್ಮು ಸಭೆಗೆ ಗೈರಾದವರಿಗೆ ಕಾರಣ ಕೇಳಿದ ಬಿಜೆಪಿ - Mock voting workshop by state BJP in banglore
ರಾಷ್ಟ್ರಪತಿ ಚುನಾವಣೆ ಹಿನ್ನೆಲೆ ಬಿಜೆಪಿ ಮತಗಳು ಅಸಿಂಧುವಾಗಬಾರದೆಂದು ರಾಜ್ಯ ಬಿಜೆಪಿ ಬೆಂಗಳೂರಿನಲ್ಲಿ ಅಣಕು ಮತದಾನವನ್ನು ಏರ್ಪಡಿಸಿದ್ದು, ಈ ಕಾರ್ಯಾಗಾರಕ್ಕೆ ಏಳು ಶಾಸಕರು ಗೈರಾಗಿದ್ದಾರೆ.
ನಗರದ ಶಾಂಗ್ರಿಲಾ ಹೋಟೆಲ್ ನಲ್ಲಿ ಬಿಜೆಪಿ ಶಾಸಕರಿಗೆ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದು, ಏಳು ಶಾಸಕರು ಹೊರತುಪಡಿಸಿ ಇತರ ಶಾಸಕರು ಹೋಟೆಲ್ ನಲ್ಲಿ ಬೀಡುಬಿಟ್ಟಿದ್ದಾರೆ. ಹೋಟೆಲ್ ನಿಂದಲೇ ಬಸ್ ಮೂಲಕ ಎಲ್ಲ ಶಾಸಕರು ನೇರವಾಗಿ ವಿಧಾನಸೌಧಕ್ಕೆ ತೆರಳಿ ಮತ ಚಲಾವಣೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಇಂದು ಅಣಕು ಮತದಾನ ತರಬೇತಿ ನೀಡಲಾಯಿತು. ಯಾವ ರೀತಿ ಮತ ಚಲಾಯಿಸಬೇಕು ಎಂದು ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಮತದಾನ ಮಾಡುವ ಬಗೆ ಕುರಿತು ತರಬೇತಿ ನೀಡಲಾಯಿತು.
ಓದಿ :ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ-ಪ್ರತಿಪಕ್ಷಗಳ ಜುಗಲ್ ಬಂದಿ ಇದ್ದರೆ ದೇಶಕ್ಕೆ ಶ್ರೇಯಸ್ಸು: ಹೆಚ್ಡಿಕೆ