ಬೆಂಗಳೂರು:ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್ ಮೊಬೈಲ್‌ನಲ್ಲಿ ಗ್ಯಾಲರಿ ವೀಕ್ಷಣೆ ಮಾಡುತ್ತಿದ್ದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದನದಲ್ಲಿ ಮೊಬೈಲ್ ಬಳಕೆ ಮಾಡಬಾರದು ಎನ್ನುವ ನಿಯಮವಿದ್ದರೂ ಅದನ್ನು ನಿರ್ಲಕ್ಷಿಸಿರುವ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಈ ಕುರಿತು ಸ್ಪಷ್ಟೀಕರಣ ನೀಡಿದ ರಾಥೋಡ್, ಸಾಮಾನ್ಯವಾಗಿ ಸದನದಲ್ಲಿ ಮೊಬೈಲ್ ನೋಡೋದೇ ಇಲ್ಲ. ಪ್ರಶ್ನೆ ಕೇಳಬೇಕಿತ್ತು, ಹಾಗಾಗಿ ಮೊಬೈಲ್ ಚೆಕ್ ಮಾಡುತ್ತಿದ್ದೆ. ಆಗ ಸ್ಟೋರೇಜ್ ಫುಲ್ ಆಗಿತ್ತು, ಹೀಗಾಗಿ ಡಿಲೀಟ್ ಮಾಡುತ್ತಿದ್ದೆ ಎಂದಿದ್ದಾರೆ.