ಬೆಂಗಳೂರು: ಭರ್ಜರಿ ಕಾರ್ಯಾಚರಣೆ ಕೈಗೊಂಡ ಬೆಂಗಳೂರು ಪಶ್ಚಿಮ ವಲಯದ ಪೊಲೀಸರು ಕಳ್ಳತನವಾಗಿದ್ದ ಬರೋಬ್ಬರಿ 928 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿ 105 ಆರೋಪಿಗಳನ್ನು ಬಂಧಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿಯವರು ಮಾತನಾಡಿದರು ಕೇಂದ್ರ, ಪಶ್ಚಿಮ, ದಕ್ಷಿಣ ಹಾಗೂ ಉತ್ತರ ವಿಭಾಗದ ವಿವಿಧ ಠಾಣಾ ವ್ಯಾಪ್ತಿಯ ರಾಜಾಜಿನಗರ, ನಂದಿನಿ ಲೇಔಟ್, ಜೆ. ಜೆ ನಗರ, ಉಪ್ಪಾರಪೇಟೆ, ಕಬ್ಬನ್ ಪಾರ್ಕ್ ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಮೊಬೈಲ್ ರಾಬರಿ ಪ್ರಕರಣಗಳು ದಾಖಲಾಗಿದ್ದವು.
ಮೊಬೈಲ್ ಕಳವು ಪ್ರಕರಣಗಳ ಪತ್ತೆಗೆ ವಿಶೇಷ ಕಾರ್ಯಾಚರಣೆ ನಡೆಸಿದ ಪೊಲೀಸರು ಕಳೆದ 1 ತಿಂಗಳ ಅವಧಿಯಲ್ಲಿ 105 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮೊಬೈಲ್ನಲ್ಲಿ ಮಾತನಾಡಿಕೊಂಡು ಹೋಗುವವರನ್ನು ಟಾರ್ಗೆಟ್ ಮಾಡಿ ಬೈಕ್ನಲ್ಲಿ ಬರುತ್ತಿದ್ದ ಆರೋಪಿಗಳು ಮೊಬೈಲ್ ಕಸಿಯುತ್ತಿದ್ದರು. ಹಾಗೆಯೇ ಬಸ್ಗಳಲ್ಲಿ ಓಡಾಡುವ ಪ್ರಯಾಣಿಕರ ಜೇಬು ಕತ್ತರಿಸಿ ಹಾಗೂ ಮೊಬೈಲ್ ಎಗರಿಸುತ್ತಿದ್ದರು.
ಮೊಬೈಲ್ ರಾಬರಿ ಹೆಚ್ಚಳ:ಇತ್ತೀಚಿನ ದಿನದಲ್ಲಿ ದುಬಾರಿ ಬೆಲೆಯ ಮೊಬೈಲ್ ರಾಬರಿ ಕೇಸ್ಗಳು ಹೆಚ್ಚಾಗಿದ್ದವು. ಹೀಗಾಗಿ ಮೊಬೈಲ್ ರಾಬರಿ ಸಂಬಂಧ ಎಫ್ಐಆರ್ ದಾಖಲಿಸುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದರು. ಮೊಬೈಲ್ ಲೊಕೇಷನ್, ಸಿಸಿಟಿವಿ ಹಾಗೂ ರಿಸಿವರ್ಗಳನ್ನು ಆಧರಿಸಿ ಕಳ್ಳರ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಸೂಕ್ತ ದಾಖಲೆಗಳೊಂದಿಗೆ ಮೊಬೈಲ್ ವಾಪಸ್: ಕೇಂದ್ರ ವಿಭಾಗದಲ್ಲಿ 121, ಪಶ್ಚಿಮ ವಿಭಾಗದಲ್ಲಿ 334, ದಕ್ಷಿಣ ವಿಭಾಗದಲ್ಲಿ 342, ಉತ್ತರ ವಿಭಾಗದಲ್ಲಿ 131 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ವಶಪಡಿಸಿಕೊಂಡ ಮೊಬೈಲ್ಗಳ ಮಾಹಿತಿಯನ್ನ ಪೊಲೀಸ್ ವೆಬ್ಸೈಟ್ನಲ್ಲಿ ನಗರ ಪೊಲೀಸರು ಪ್ರಕಟಿಸಲಿದ್ದಾರೆ. ಐಎಂಇಐ ನಂಬರ್ ಪರಿಶೀಲಿಸಿ ಸೂಕ್ತ ದಾಖಲೆಗಳನ್ನ ನೀಡಿ ಮಾಲೀಕರು ವಾಪಸ್ ಪಡೆಯಬಹುದಾಗಿದೆ.
ಓದಿ:15 ದಿನದ ಹಿಂದೆ ಬೇರೆ ಯುವಕನ ಜೊತೆ ಮದುವೆ: ತವರಿಗೆ ಬಂದ ಪ್ರೇಯಸಿಗೆ 20 ಬಾರಿ ಚಾಕು ಚುಚ್ಚಿ, ವಿಷ ಕುಡಿದ ಪ್ರೇಮಿ