ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಹಲವರ ವಿಚಾರಣೆ ನಡೆಸಿದ್ದಾರೆ. ಆದರೆ ಮಹತ್ವದ ಮಾಹಿತಿಗಳನ್ನು ಕಲೆ ಹಾಕಲು ಅತಿ ಮುಖ್ಯವಾಗಿರುವ ಮೊಬೈಲ್ಗಳನ್ನು ರಿಟ್ರೀವ್ ಮಾಡುವುದು ತಲೆನೋವಾಗಿ ಪರಿಣಮಿಸಿದೆಯಂತೆ.
ಸಿಸಿಬಿ ಅಧಿಕಾರಿಗಳಿಗೆ ತಲೆನೋವಾಗಿದ್ಯಾ ಮೊಬೈಲ್ ರಿಟ್ರೀವ್ ಕೆಲಸ? - Sandalwood Drug case
ಸ್ಯಾಂಡಲ್ವುಡ್ಗೆ ಡ್ರಗ್ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 42 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆಯಂತೆ. ಹೊಸ ಫೀಚರ್ಗಳನ್ನು ಒಳಗೊಂಡ ಮೊಬೈಲ್ಗಳನ್ನು ರಿಟ್ರೀವ್ ಮಾಡಲು ಮಡಿವಾಳದ ಎಫ್ಎಸ್ಎಲ್ಗೆ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಹೈದರಾಬಾದ್ ಅಥವಾ ಕೇರಳದ ತ್ರಿವೆಂಡಂನಲ್ಲಿರುವ ಎಫ್ಎಸ್ಎಲ್ಗೆ ಈ ಮೊಬೈಲ್ಗಳನ್ನು ಕಳುಹಿಸುವುದು ಅನಿವಾರ್ಯವಾಗಿದೆಯಂತೆ.
ಇಲ್ಲಿಯವರೆಗೆ ಪ್ರಕರಣದಲ್ಲಿ 15ಕ್ಕೂ ಹೆಚ್ಚು ಆರೋಪಿಗಳನ್ನು ಈ ಪ್ರಕರಣದಲ್ಲಿ ಬಂಧಿಸಿದ್ದು, ಈ ವೇಳೆ ಸುಮಾರು 42 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಆದರೆ ಇಷ್ಟು ಮೊಬೈಲ್ಗಳಲ್ಲಿ ಒಂದಷ್ಟು ಫೋನ್ಗಳು ಹೊಸ ಫೀಚರ್ಗಳನ್ನು ಒಳಗೊಂಡಿವೆ. ಇಂತಹ ಮೊಬೈಲ್ಗಳಿಂದ ದಾಖಲೆಗಳನ್ನು ಹೊರ ತೆಗೆಯುವ ಕೆಲಸ ಮಡಿವಾಳದ ಎಫ್ಎಸ್ಎಲ್ನಿಂದ ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಹೀಗಾಗಿ ಹೈದರಾಬಾದ್ ಅಥವಾ ಕೇರಳದ ತ್ರಿವೆಂಡಂ ಬಳಿ ಇರುವ ಎಫ್ಎಸ್ಎಲ್ಗೆ ಈ ಮೊಬೈಲ್ಗಳನ್ನು ಕಳುಹಿಸುವುದು ಅನಿವಾರ್ಯವಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ವಿಚಾರಣೆಗೆ ಹಾಜರಾದ ನಟ ದಿಗಂತ್, ಐಂದ್ರಿತಾ ರೇ, ಅಕುಲ್ ಬಾಲಾಜಿ, ನಟ ಸಂತೋಷ್ ಮೊಬೈಲ್ ಸೇರಿದಂತೆ ಕೆಲ ಪೆಡ್ಲರ್ಗಳ ಮೊಬೈಲ್ ರಿಟ್ರೀವ್ ಆಗದೆ ಹಾಗೆಯೇ ಉಳಿದಿವೆಯಂತೆ. ಹೀಗಾಗಿ ಕೆಲವರು ಡ್ರಗ್ ಮಾಫಿಯಾದಲ್ಲಿ ಭಾಗಿಯಾಗಿರುವುದಕ್ಕೆ ಸಾಕ್ಷ್ಯಗಳನ್ನು ಕಲೆ ಹಾಕುವುದಕ್ಕೆ ಸಿಸಿಬಿ ಅಧಿಕಾರಿಗಳು ಕಷ್ಟಪಡುವಂತಾಗಿದೆ ಎನ್ನಲಾಗಿದೆ.