ಕರ್ನಾಟಕ

karnataka

ETV Bharat / state

ಶಾಲಾ ಮಕ್ಕಳಿಗೆ ವಿಜ್ಞಾನದ ಅರಿವು ಕಾರ್ಯಕ್ರಮ: ಸಂಚಾರಿ ಪ್ರಯೋಗಾಲಯಕ್ಕೆ ಚಾಲನೆ

ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ವಿಜ್ಞಾನದತ್ತ ಆಸಕ್ತಿ ಬೆಳಸುವಲ್ಲಿ ಯಶಸ್ವಿಯಾದರೆ ಮಕ್ಕಳು ವೈದ್ಯಕೀಯ ರಂಗದತ್ತ ಹೆಚ್ಚು ಮುಖ ಮಾಡುತ್ತಾರೆ ಎಂದು ಆನೇಕಲ್ ತಾಲೂಕಿನ ನಾರಾಯಣ ಹೃದಯಾಲಯದ ಖ್ಯಾತ ತಜ್ಞ ಡಾ.ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

ಶಾಲಾ ಮಕ್ಕಳಿಗೆ ವಿಜ್ಞಾನದ ಅರಿವು ಕಾರ್ಯಕ್ರಮ

By

Published : Aug 6, 2019, 7:55 PM IST

ಆನೇಕಲ್ :ಪ್ರಾಥಮಿಕ ಶಾಲಾ ಹಂತದಲ್ಲಿ ಮಕ್ಕಳಿಗೆ ವಿಜ್ಞಾನದತ್ತ ಆಸಕ್ತಿ ಬೆಳಸುವಲ್ಲಿ ಯಶಸ್ವಿಯಾದರೆ ಮಕ್ಕಳು ವೈದ್ಯಕೀಯ ರಂಗದತ್ತ ಹೆಚ್ಚು ಮುಖ ಮಾಡುತ್ತಾರೆ ಎಂದು ನಾರಾಯಣ ಹೃದಯಾಲಯದ ಖ್ಯಾತ ತಜ್ಞ ಡಾ. ದೇವಿಪ್ರಸಾದ್ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.

ಶಾಲಾ ಮಕ್ಕಳಿಗೆ ವಿಜ್ಞಾನದ ಅರಿವು ಕಾರ್ಯಕ್ರಮ

ಇಂದು ನಾರಾಯಣ ಹೃದಯಾಲಯ, ಬಯೋಕಾನ್ ಹಾಗೂ ಅಗಸ್ತ್ಯ ಫೌಂಡೇಷನ್ ಸಹಯೋಗದೊಂದಿಗೆ ತಾಲೂಕಿನ ಹಲವು ಸರ್ಕಾರಿ ಶಾಲೆಯ ಮಕ್ಕಳು ಹಾಗು ಶಿಕ್ಷಕರು ಭಾಗವಹಿಸಿದ್ದರು. ಈ ವೇಳೆ ಮಕ್ಕಳಿಗಾಗಿ ಚಾಂಪ್ ಹೆಸರಿನಲ್ಲಿ ವಿಜ್ಞಾನದ ಸಂಚಾರಿ ಪ್ರಯೋಗಾಲಯವನ್ನು ಉದ್ಘಾಟಿಸಲಾಯಿತು.

ಸರ್ಕಾರಿ ಶಾಲೆಯ ಮಕ್ಕಳಲ್ಲಿ ಇತ್ತೀಚೆಗೆ ವಿಜ್ಞಾನಕ್ಕೆ ಸಂಬಂಧಿಸಿದ ಮಾಹಿತಿ ಕೊರತೆಯಾಗುತ್ತಿದ್ದು, ಸಂಚಾರಿ ಪ್ರಯೋಗಾಲಯದ ಮೂಲಕ ವಿಜ್ಞಾನದ ಅರಿವು ಮೂಡಿಸಲು ಪ್ರಯತ್ನಿಸುವುದಾಗಿದೆ. ಇನ್ನು ದೇಶದಲ್ಲಿ ಶೇಕಡಾ 60 ರಷ್ಟು ಸಾವುಗಳು ಸಾಂಕ್ರಾಮಿಕವಲ್ಲದ ರೋಗಗಳಿಂದ ಉಂಟಾಗುತ್ತಿದ್ದು, ಇಂತಹ ಪ್ರಕರಣಗಳಲ್ಲಿ ಅಧಿಕ ರಕ್ತದೊತ್ತಡ ಇರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಚಾಂಪ್ಸ್ ಕಾರ್ಯಕ್ರಮದ ಮೂಲಕ 8 ಮತ್ತು 9 ನೇ ತರಗತಿಯ ಮಕ್ಕಳಲ್ಲಿ ರಕ್ತದೊತ್ತಡ ಅಳೆಯುವ ಬಗ್ಗೆ ತರಬೇತಿ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ರು.

ಮಕ್ಕಳಿಗೆ ಸಂಚಾರಿ ಪ್ರಯೋಗಲಾಯದ ಮೂಲಕ ರಕ್ತದೊತ್ತಡ ಅಳೆಯುವುದನ್ನು ಕಲಿಸುವ ಮೂಲಕ ಅವರಲ್ಲಿ ವೈದ್ಯಕೀಯ ರಂಗದತ್ತ ಆಸಕ್ತಿ ಬೆಳೆಯುವುದು. ಅಲ್ಲದೆ, ಅವರು ವಿಜ್ಞಾನದತ್ತ ಆಕರ್ಷಿತರಾಗುವುದಲ್ಲದೆ ವಿದ್ಯಾರ್ಥಿಗಳು ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಲು ಸಹಕಾರಿ ಆಗುತ್ತದೆ ಎಂದು ತಿಳಿಸಿದ್ರು.

ABOUT THE AUTHOR

...view details