ಕರ್ನಾಟಕ

karnataka

ETV Bharat / state

ಅತ್ಯಾಧುನಿಕ ಮೊಬೈಲ್ ಜಾಮರ್ ಬಗ್ಗೆ ಗೃಹ ಸಚಿವರಿಗೆ ಬಿಇಎಲ್​ನಿಂದ ಪ್ರಾತ್ಯಕ್ಷಿಕೆ - ಈಟಿವಿ ಭಾರತ ಕನ್ನಡ

ಅಕ್ರಮ ಮೊಬೈಲ್​ ಬಳಕೆ ನಿಯಂತ್ರಣಕ್ಕೆ ಅತ್ಯಾಧುನಿಕ ಜಾಮರ್​ ತಂತ್ರಜ್ಞಾನ ಪ್ರಾತ್ಯಕ್ಷಿಕೆಯನ್ನು ಬಿಇಎಲ್​ನ ಹಿರಿಯ ಅಧಿಕಾರಿಗಳು ಗೃಹ ಸಚಿವರಿಗೆ ವಿಕಾಸಸೌಧದಲ್ಲಿ ನೀಡಿದರು.

mobile-jammer
ಅತ್ಯಾಧುನಿಕ ಮೊಬೈಲ್ ಜಾಮರ್

By

Published : Aug 24, 2022, 7:27 PM IST

ಬೆಂಗಳೂರು :ರಾಜ್ಯದ ವಿವಿಧ ಕಾರಾಗೃಹಗಳಲ್ಲಿ ಅಕ್ರಮ ಮೊಬೈಲ್​ ಬಳಕೆ ನಿಯಂತ್ರಣ ಸಂಬಂಧ ಬಿಇಎಲ್​ನ ಹಿರಿಯ ಅಧಿಕಾರಿಗಳೊಂದಿಗೆ ವಿಕಾಸಸೌಧದಲ್ಲಿ ಇಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಅತ್ಯಾಧುನಿಕ ಮೊಬೈಲ್ ಜಾಮರ್​ಗಳ ಪ್ರಾತ್ಯಕ್ಷಿಕೆಯನ್ನು ಬಿಇಎಲ್​ನ ಹಿರಿಯ ಅಧಿಕಾರಿಗಳು ನೀಡಿದರು.

ರಾಜ್ಯದಲ್ಲಿರುವ ಎಲ್ಲಾ ಕೇಂದ್ರ ಕಾರಾಗೃಹಗಳಲ್ಲಿ ಮೊಬೈಲ್ ಜಾಮರ್ ಅಳವಡಿಸಲು ಪ್ರಸ್ತಾವನೆಯನ್ನು ಸರ್ಕಾರ ಬಿಇಎಲ್​ಗೆ ನೀಡಿದೆ. 4G ಹಾಗೂ 5G ತರಾಂಗಂತರಗಳನ್ನು ನಿರ್ಬಂಧಗೊಳಿಸುವ ತಂತ್ರಜ್ಞಾನ ಪ್ರಾತ್ಯಕ್ಷಿಕೆಯನ್ನು ಬಿಇಎಲ್​ನ ಗುಲ್ಶನ್ ಮಂಡ್ಲೇ ಮತ್ತು ರಾಧೆ ಶ್ಯಾಮ್ ಕುಮವಾಟ್ ಅವರು ಸಚಿವರಿಗೆ ನೀಡಿದರು.

ಈ ಸಭೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ (ಕಾರಾಗೃಹ) ಅಲೋಕ್ ಮೋಹನ್, ಮಾಲಿನಿ ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ :ಪರಪ್ಪನ‌ ಅಗ್ರಹಾರ ಜೈಲಿಗೆ ಗೃಹ ಸಚಿವ ದಿಢಿರ್​ ಭೇಟಿ: ಅತ್ಯಾಧುನಿಕ ಮೊಬೈಲ್ ಜಾಮರ್ ಅಳವಡಿಕೆಗೆ ನಿರ್ಧಾರ ಎಂದ ಜ್ಞಾನೇಂದ್ರ

ABOUT THE AUTHOR

...view details