ಕರ್ನಾಟಕ

karnataka

ETV Bharat / state

ಮಾತನಾಡುವಾಗಲೇ ಮೊಬೈಲ್ ಸ್ಫೋಟ.. ಗಾಯಗೊಂಡು ಆಸ್ಪತ್ರೆ ಸೇರಿದ ಯುವಕ - undefined

ಸಂಬಂಧಿಕರ ಮನೆಗೆಂದು ನಗರಕ್ಕೆ ಬಂದಾಗ ವಿಳಾಸ ಕೇಳಲೆಂದು ಮೊಬೈಲ್​​ ತೆಗೆದು ಮಾತನಾಡುತ್ತಿದ್ದಾಗಲೇ ಅದು​ ಸ್ಫೋಟಗೊಂಡು ಯುವಕ ಗಾಯಗೊಂಡಿರುವ ಘಟನೆ ನಡೆದಿದೆ.

ಆನೇಕಲ್

By

Published : Jul 15, 2019, 6:53 PM IST

ಆನೇಕಲ್ :ಮಾತನಾಡುವಾಗ ಇದ್ದಕಿದ್ದಂತೆ ಮೊಬೈಲ್​​ ಸ್ಪೋಟಗೊಂಡು ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಕೋಲಾರ ಮೂಲದ ಆರ್ಮುಗ ಗಾಯಗೊಂಡಿರುವ ವ್ಯಕ್ತಿ. ಈತ ಇಂದು ಸಂಬಂಧಿಕರ ಮನೆಗೆಂದು ಆನೇಕಲ್ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಬಾಗಲೂರು ಪಟ್ಟಣಕ್ಕೆ ಬಂದಿದ್ದ. ಈ ವೇಳೆ ವಿಳಾಸ ತಿಳಿಯದೆ ಅಕ್ಕಪಕ್ಕದ ಅಂಗಡಿಗಳಲ್ಲಿ ವಿಚಾರಿಸಿದ್ದಾನೆ. ಅವರು ನಮಗೆ ವಿಳಾಸ ತಿಳಿದಿಲ್ಲ ಎಂದಿದ್ದಾರೆ.

ಮೊಬೈಲ್ ಸ್ಫೋಟದಿಂದ ಗಾಯಗೊಂಡಿರುವ ಯುವಕ..

ಆಗ ಆರ್ಮುಗ ಸಂಬಂಧಿಕರಿಗೆ ಕರೆ ಮಾಡೋಣ ಎಂದು ಮೊಬೈಲ್ ತೆಗೆದು ಕಿವಿ ಬಳಿ ಇಟ್ಟುಕೊಳ್ಳುತ್ತಿದ್ದಂತೆ ಮೊಬೈಲ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಕಿವಿಯಿಂದ ರಕ್ತ ಬಂದಿದ್ದು, ಜ್ಞಾನ ತಪ್ಪಿ ಬಿದ್ದ ಆರ್ಮುಗನಿಗೆ ಸ್ಥಳದಲ್ಲಿದ್ದವರು ಆರೈಕೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details