ಬೆಂಗಳೂರು:ಕೊರೊನಾ ಸೋಂಕಿನಿಂದ ಮೃತಪಟ್ಟ ಶಿಕ್ಷಕರಿಗೆ 50 ಲಕ್ಷ ರೂ. ಪರಿಹಾರ ನೀಡುವಂತೆ ಬಿಜೆಪಿ ಪರಿಷತ್ ಸದಸ್ಯರ ನಿಯೋಗ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದೆ.
ಕೋವಿಡ್ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಿ: ಬಿಜೆಪಿ ಎಂಎಲ್ಸಿ ನಿಯೋಗ ಮನವಿ - ಕೊರೊನಾದಿಂದ ಶಿಕ್ಷಕರ ಸಾವು
ಕೋವಿಡ್ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಿ ಎಂದು ಬಿಜೆಪಿ ಎಂಎಲ್ಸಿ ನಿಯೋಗ ಸಿಎಂ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದೆ.
![ಕೋವಿಡ್ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಕ್ಕೆ 50 ಲಕ್ಷ ಪರಿಹಾರ ನೀಡಿ: ಬಿಜೆಪಿ ಎಂಎಲ್ಸಿ ನಿಯೋಗ ಮನವಿ narayanswamy](https://etvbharatimages.akamaized.net/etvbharat/prod-images/768-512-06:09:37:1621687177-kn-bng-04-mlcdelegation-teachersaid-script-7201951-22052021180535-2205f-1621686935-893.jpg)
narayanswamy
ಚುನಾವಣೆ ವೇಳೆ ಅವರನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ. ಕರ್ತವ್ಯದ ವೇಳೆ ಕೋವಿಡ್ಗೆ ತುತ್ತಾಗಿ ಮೃತಪಟ್ಟಿದ್ದಾರೆ. ಅಂತಹ ಶಿಕ್ಷಕರಿಗೆ 50 ಲಕ್ಷ ಪರಿಹಾರ ಒದಗಿಸಿ ಎಂದಿದ್ದೇವೆ. ಸಿಎಂ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ವೈ.ಎ.ನಾರಾಯಣ ಸ್ವಾಮಿ ತಿಳಿಸಿದರು.
ಖಾಸಗಿ ಶಾಲೆಗಳ ಶಿಕ್ಷಕರಿಗೆ 25 ಸಾವಿರ ಪರಿಹಾರ ನೀಡಬೇಕು. ಕೊರೊನಾ ಸಂದರ್ಭದಲ್ಲಿ ಅವರಿಗೆ ಕೆಲಸವಿಲ್ಲ. ಖಾಸಗಿ ಹಾಗೂ ಅನುದಾನಿತ ಶಾಲಾ ಶಿಕ್ಷಕರಿಗೆ ಪರಿಹಾರ ನೀಡಬೇಕು. ಕೋವಿಡ್ ನಿಂದ ಮೃತ ಪಟ್ಟ ಶಿಕ್ಷಕರಿಗೆ 50 ಲಕ್ಷ ನೆರವು ನೀಡಬೇಕು ಎಂದು ಮನವಿ ಮಾಡಿರುವುದಾಗಿ ನಿಯೋಗ ತಿಳಿಸಿದೆ.