ಕರ್ನಾಟಕ

karnataka

ETV Bharat / state

ಸಿ ಟಿ ರವಿಯ ಕಚ್ಚೆಹರುಕ ಪದ ಬಳಕೆ ಯಾರೂ ಒಪ್ಪುವಂತದಲ್ಲ: ಎಂಎಲ್​ಸಿ ಹೆಚ್ ವಿಶ್ವನಾಥ್ - ರಾಷ್ಟ್ರೀಯ ಪಕ್ಷಗಳು

ರಾಜಕಾರಣಿಗಳು ಮಾತನಾಡುವಾಗ ಬಳಸುವ ಪದಗಳನ್ನು ಹುಷಾರಾಗಿ, ಎಚ್ಚರದಿಂದ ಬಳಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಹೇಳಿದ್ದಾರೆ.

ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್
ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್

By

Published : Sep 12, 2022, 3:13 PM IST

ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಕಚ್ಚೆಹರುಕ ಎಂಬ ಪದ ಬಳಕೆ ಮಾಡಿದ್ದು ಯಾರೂ ಒಪ್ಪುವಂತದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿಂದು ಈ ಕುರಿತು ಮಾತನಾಡಿದ ಅವರು, ಎರಡೂ ರಾಷ್ಟ್ರೀಯ ಪಕ್ಷಗಳು ದಮ್ಮಿದಿಯಾ? ತಾಕತ್ತು ಇದೆಯಾ? ಎಂಬ ಪದ ಬಳಕೆ ಮಾಡುತ್ತಿದ್ದಾರೆ. ಕನ್ನಡ ಭಾಷೆಯನ್ನೇ ಕುಲಕೆಡಿಸುತ್ತಿದ್ದಾರೆ. ರಾಜಕಾರಣಿಗಳು ಮಾತನಾಡುವಾಗ ಬಳಸುವ ಪದಗಳನ್ನು ಹುಷಾರಾಗಿ, ಎಚ್ಚರದಿಂದ ಬಳಸಬೇಕು. ಬೇರೆಯವರನ್ನು ಸಂಸ್ಕೃತಿ ಹೀನ ಎಂದು ಹೇಳ್ತಾ ಹೇಳ್ತಾ ಇದ್ದ ಹಾಗೆ ನಮ್ಮ ಮಾತುಗಳು ಕೂಡ ಸಂಸ್ಕೃತಿ ಹೀನವಾಗಿರುವುದನ್ನು ನಾಡಿನ ಜನರು ಗಮನಿಸುತ್ತಿದ್ದಾರೆ ಎಂದು ಸಿ ಟಿ ರವಿ ಕುರಿತು ಅಸಮಾಧಾನ ಹೊರಹಾಕಿದರು.

ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರು ಮಾತನಾಡಿದರು

ಸಿದ್ದರಾಮಯ್ಯ ಮತ್ತು ಹೆಚ್ ವಿಶ್ವನಾಥ್ ರಕ್ತ ಒಂದೇ ಎಂಬ ಸಿ ಟಿ ರವಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹಾಗಾದರೆ ನಾನು ಮತ್ತು ಸಿದ್ದರಾಮಯ್ಯ ಮಾತ್ರ ಮನುಷ್ಯರೇ. ಸಿ ಟಿ ರವಿನೂ‌ ಮನುಷ್ಯನೇ. ಎಲ್ಲರೂ‌ ಮನುಷ್ಯರೇ. ಎಲ್ಲರ ರಕ್ತವೂ ಒಂದೇ. ಮಾತನಾಡುವ ಭರದಲ್ಲಿ ಏನೇನೋ ಮಾತಾಡಬಾರದು ಎಂದರು.

ಓದಿ:'ನನ್ನ ಸಿ.ಟಿ.ರವಿ ಲೂಟಿ ರವಿ ಅಂದರೆ ನಾನು ಸಿದ್ದ ಪೆದ್ದ ಅನ್ನಬಹುದಲ್ವಾ?'

ABOUT THE AUTHOR

...view details