ಕರ್ನಾಟಕ

karnataka

ETV Bharat / state

ಪಾಕ್‌ ಪರ ಘೋಷಣೆ ಹಿಂದೆ ಎಡಪಂಥೀಯರ ಕೈವಾಡ: ಎಂಎಲ್​ಸಿ ರವಿಕುಮಾರ್ ಆರೋಪ - ಅಮೂಲ್ಯ

ಪಾಕ್ ಪರ ಘೋಷಣೆ ಹಿಂದೆ ಎಡಪಂಥೀಯ ಹಾಗೂ ಮುಸ್ಲಿಂ ಬುದ್ದಿಜೀವಿಗಳ ಕೈವಾಡ ಇದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ರವಿಕುಮಾರ್ ಆರೋಪಿಸಿದ್ದಾರೆ.

MLC Ravikumar
ರವಿಕುಮಾರ್

By

Published : Feb 21, 2020, 12:58 PM IST

ಬೆಂಗಳೂರು: ಪಾಕ್ ಪರ ಘೋಷಣೆ ಹಿಂದೆ ಎಡಪಂಥೀಯ ಹಾಗೂ ಮುಸ್ಲಿಂ ಬುದ್ದಿಜೀವಿಗಳ ಕೈವಾಡ ಇದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್‌ಸಿ ರವಿಕುಮಾರ್ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಎಂಎಲ್​ಸಿ ರವಿಕುಮಾರ್

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಿನ್ನೆ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಅಮೂಲ್ಯ ಎಂಬಾಕೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿರುವುದರ ಹಿಂದೆ ಎಡಪಂಥೀಯ ಹಾಗೂ ಮುಸ್ಲಿಂ ಬುದ್ದಿಜೀವಿಗಳ ಕೈವಾಡವಿದೆ. ಹಾಗಾಗಿ ಪ್ರಕರಣವನ್ನು ತೀವ್ರ ತನಿಖೆಗೆ ಒಳಪಡಿಸಿ ಇದರ ಹಿಂದಿರುವ ಬುದ್ದಿಜೀವಿಗಳು ಮತ್ತು ಚಿಂತಕರನ್ನು ಮೊದಲು ಬಂಧಿಸಬೇಕು ಎಂದು ಆಗ್ರಹಿಸಿದರು.

ಜತೆಗೆ ನಿನ್ನೆಯ ಕಾರ್ಯಕ್ರಮವನ್ನು ಆಯೋಜಿಸಿದ್ದ ಮಹಾನಗರ ಪಾಲಿಕೆಯ ಸದಸ್ಯ ಇಮ್ರಾನ್ ಪಾಷಾ ಅವರನ್ನೂ ಸಹ ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ದೇಶದ್ರೋಹದ ಕೃತ್ಯ ಅಕ್ಷಮ್ಯ ಎಂದು ಕಿಡಿ ಕಾರಿದರು.

ಇದು ಕೇವಲ ಒಂದು ದಿನದಲ್ಲಿ ಆದ ಘಟನೆಯಲ್ಲ. ಆಕೆಗೆ ಈ ರೀತಿ ದೇಶದ ವಿರುದ್ಧ ಹೇಳಲು ಹಲವು ವರ್ಷಗಳ ತರಬೇತಿ ಇದೆ. ಇದರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ABOUT THE AUTHOR

...view details